10:32 PM Friday4 - December 2020
ಬ್ರೇಕಿಂಗ್ ನ್ಯೂಸ್
ಮತ್ತೆ ನರ್ತಿಸಲಿದೆ ಕದ್ರಿ ಸಂಗೀತ ಕಾರಂಜಿ: ಶನಿವಾರ,  ಭಾನುವಾರ ಸಾರ್ವಜನಿಕ ವೀಕ್ಷಣೆಗೆ ಅವಕಾಶ ಕದ್ರಿ –… ದಿಲ್ಲಿಯಲ್ಲಿ ರೈತರ ಮೇಲಿನ ದೌರ್ಜನ್ಯ ಖಂಡಿಸಿ  ಶ್ರೀನಿವಾಸಪುರದಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಜಿ ಮೇಯರ್, ಕಾಂಗ್ರೆಸ್ ಹಿರಿಯ ನಾಯಕ, ಸಜ್ಜನ ರಾಜಕಾರಣಿ ಕೆ.ಕೆ. ಮೆಂಡನ್ ಇನ್ನಿಲ್ಲ ದೇಶದ ಜನರಿಗೆ ಶೀಘ್ರವೇ ಕೊರೊನಾ ಲಸಿಕೆ ಸಿದ್ಧ:  ಸರ್ವಪಕ್ಷಗಳ ಸಭೆಯಲ್ಲಿ ಪ್ರಧಾನಿ ಮೋದಿ… ಕನಕ ದಾಸರ ಸಂದೇಶ ಸಮಾಜದ ಕಣ್ಣು ತೆರೆಸುವಂತಿದೆ: ತಹಶೀಲ್ದಾರ್‌ ಎಸ್‌.ಎಂ.ಶ್ರೀನಿವಾಸ್‌ ಅನಾಥ ಮಕ್ಕಳ್ಳನ್ನು ಸ್ವಂತ ಮಕ್ಕಳಂತೆ ಕಾಣುವ ಮೂಲಕ ಉತ್ತಮ ಭವಿಷ್ಯ ರೂಪಿಸಿ: ಡಾ.ಶಾಂತ ಜಾತಿಯ ಹೆಸರಲ್ಲಿ ನಡೆಯುವ ಶೋಷಣೆ ಸಮಾಜ ಹಿತಕ್ಕೆ ಮಾರಕ: ಕುರುಬರ ಅಧ್ಯಕ್ಷ ಎಂ.ವೇಮಣ್ಣ  ಹಿಂಸಾಚಾರ: ಶಿವಮೊಗ್ಗದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿ, ಬಿಗಿ ಬಂದೋಬಸ್ತ್  ಮಾರಕ ಕೊರೊನಾಕ್ಕೆ ಒಂದೇ ದಿನ 540 ಮಂದಿ ಬಲಿ: 42, 916 ಮಂದಿ… ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ: 30 ವಾರ್ಡ್ ಗಳಲ್ಲಿ ಬಿಜೆಪಿ ಮುನ್ನಡೆ

ಇತ್ತೀಚಿನ ಸುದ್ದಿ

ಕಳೆದ ಮಳೆಗಾಲದ ದುರಂತವನ್ನು ನೆನಪಿಸಿದ ಕೊಡಗು ಭೂ ಕುಸಿತ: ಹಲವೆಡೆ ಭಾರಿ ಹಾನಿ

August 6, 2020, 9:35 AM

ಮಂಗಳೂರು(reporterkarnataka news)

ಕಳೆದ ಮುಂಗಾರಿನಲ್ಲಿ ಕೊಡಗು ಜಿಲ್ಲೆಯಲ್ಲಿ ಉಂಟಾದ ಭೂಕುಸಿತ ಮಾದರಿಯಲ್ಲಿ ಈ ಬಾರಿಯೂ ಭೂಕುಸಿತ ಉಂಟಾಗುವ ಸಾಧ್ಯತೆಗಳಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಜಿಲ್ಲೆಯ ತಲಕಾವೇರಿ ಬಳಿಯ ಬ್ರಹ್ಮಗಿರಿ ಬೆಟ್ಟ ಗುರುವಾರ ಕುಸಿದು ಮನೆಯೊಂದು ಮಣ್ಣಿನಡಿಗೆ ಸಿಲುಕಿದೆ. ಮನೆಯಲ್ಲಿರುವ ಅರ್ಚಕ ಕುಟುಂಬದ ಸುರಕ್ಷತೆಯ ಬಗ್ಗೆ ಇನ್ನೂ ಮಾಹಿತಿ ದೊರಕಿಲ್ಲ. 

ಜಿಲ್ಲೆಯ ಪ್ರಮುಖ ಪಟ್ಟಣವಾದ ಮಡಿಕೇರಿ ನಗರದ ಕನ್ನಿಕಾ ಬಡಾವಣೆಯಲ್ಲೂ ಗುರುವಾರ ಅಲ್ಪ ಪ್ರಮಾಣದ ಭೂ ಕುಸಿತ ಉಂಟಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಬ್ಯಾರಿಕೇಡ್ ಹಾಕಲಾಗಿದೆ. ನಾಪೋಕ್ಲು-ಮಡಿಕೇರಿ ರಸ್ತೆ ಕೊಟ್ಟಮುಡಿ ಕೇಮಾಡಿನಲ್ಲಿ ಬೃಹದಾಕಾರದ ಮರ ಬಿದ್ದು, ವಿದ್ಯುತ್  ಕಂಬಗಳು ಹಾನಿಯಾಗಿತ್ತು.  ಬಿದ್ದ ಮರವನ್ನು ತೆರವುಗೊಳಿಸಲಾಗಿದೆ ಮತ್ತು ವಿದ್ಯುತ್ ಸಂಪರ್ಕ ಮರುಸ್ಥಾಪಿಸಲು ಕ್ರಮ ವಹಿಸಲಾಗಿದೆ. 

ಹರದೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಗರಗಂದೂರು ಬಿ ಗ್ರಾಮದಲ್ಲಿ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದ್ದು, ತೆರವುಗೊಳಿಸಲಾಗಿದೆ. ಕೂಡುಗದ್ದೆ-ಸಿದ್ಧಾಪುರ ರಸ್ತೆಗೆ ಅಡ್ಡವಾಗಿ ಮರ ಮತ್ತು ವಿದ್ಯುತ್ ಕಂಬ ಬಿದ್ದಿದ್ದು, ತೆರವುಗೊಳಿಸಲು ಕ್ರಮ ವಹಿಸಲಾಗಿದೆ. ಬೇಟೋಳಿ ಗ್ರಾಮದಲ್ಲಿ ಐ.ಎಸ್.ಮುತ್ತಣ್ಣನವರ ಮನೆ ಬಳಿ ಮರ ಬಿದ್ದು, ವಿದ್ಯುತ್ ತಂತಿ ನೆಲಕ್ಕೆ ಬಿದ್ದಿರುವುದನ್ನು ತೆರವುಗೊಳಿಸಲಾಗಿದೆ.

ವಿರಾಜಪೇಟೆ ತಾಲ್ಲೂಕು ಶ್ರೀಮಂಗಲ ಹೋಬಳಿ ಹರಿಹರ ಗ್ರಾಮದಲ್ಲಿ ಪರಿವಾರರ ನವೀನ್ ಎಂಬುವವರ ಮನೆ ಮೇಲೆ ವಿದ್ಯುತ್ ಕಂಬ ಮತ್ತು ಮರ ಬಿದ್ದಿದ್ದು ತೆರವುಗೊಳಿಸಿ, ಸೂಕ್ತ ಕ್ರಮ ವಹಿಸಲಾಗಿದೆ. ವಿರಾಜಪೇಟೆಯ ಕಾಯಿಮನೆ ಎಂಬಲ್ಲಿ ವಿದ್ಯುತ್ ಕಂಬ ನೆಲಕ್ಕುರುಳಿದ್ದು, ಸೂಕ್ತ ಕ್ರಮ ವಹಿಸಲಾಗಿದೆ. 

ಮಡಿಕೇರಿ-ವಿರಾಜಪೇಟೆ ರಸ್ತೆಯ ರಮ್ಯ ಸರ್ವೀಸ್ ಸ್ಟೇಷನ್ ಬಳಿ ಅಲ್ಪ ಪ್ರಮಾಣದ ಭೂ ಕುಸಿತ ಉಂಟಾಗಿದ್ದು, ತೆರವುಗೊಳಿಸಲಾಗಿದೆ.

ಮಡಿಕೇರಿ ನಗರದ ಕಾವೇರಿ ಬಡಾವಣೆಯಲ್ಲಿ ಚರಂಡಿ ಬ್ಲಾಕ್ ಆಗಿದ್ದು, ಬ್ಲಾಕ್ ತೆರವುಗೊಳಿಸಿ ನೀರು ಸುಗಮವಾಗಿ ಹರಿಯಲು ವ್ಯವಸ್ಥೆ ಮಾಡಲಾಗಿದೆ. 

ಮಡಿಕೇರಿ-ಮಂಗಳೂರು ರಸ್ತೆ, ಮಡಿಕೇರಿ-ವಿರಾಜಪೇಟೆ ರಸ್ತೆಯ ಮೇಕೇರಿ ಬಳಿ ಭೂ ಕುಸಿತ ಉಂಟಾಗಿದ್ದು, ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಮಡಿಕೇರಿಯ ಕತ್ತಲೆಕಾಡು-ಸಿದ್ಧಾಪುರ ಮಾರ್ಗದಲ್ಲಿ ಭೂಕುಸಿತ ಉಂಟಾಗಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಈ ಭಾಗದಲ್ಲಿ ತಾತ್ಕಾಲಿಕವಾಗಿ ಎಲ್ಲಾ ವಾಹನಗಳ ಸಂಚಾರವನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ. 

ಸೋಮವಾರಪೇಟೆ ಗೌಡಳ್ಳಿ ಪಂಚಾಯತಿ ವ್ಯಾಪ್ತಿ, ಶನಿವಾರಸಂತೆ, ಕುಶಾಲನಗರದ ಬಸವನಹಳ್ಳಿ ರಾಜ್ಯ ಹೆದ್ದಾರಿ, ಸೋಮವಾರಪೇಟೆ-ಬಾಣಾವಾರ ರಸ್ತೆ, ಶನಿವಾರಸಂತೆ-ಹಂಡ್ಲಿ ರಸ್ತೆಗಳಲ್ಲಿ ಬಿದ್ದ ಮರಗಳನ್ನು ತೆರವುಗೊಳಿಸಲಾಗಿದೆ. 

ವಿರಾಜಪೇಟೆ ತಾಲ್ಲೂಕು ತಿತಿಮತಿ,  ಹೆಗ್ಗಳ, ಮಂಚಳ್ಳಿ-ಕುಟ್ಟ, ಗೋಣಿಕೊಪ್ಪ-ಬಾಳೆಲೆ, ಕುಂದ ರಸ್ತೆ, ಪೆರುಂಬಾಡಿ-ಮಾಕುಟ್ಟ ರಸ್ತೆ, ಕರಡಿಗೋಡು ರಸ್ತೆ, ಕೋತೂರು ರಸ್ತೆ, ನಾಲ್ಕೇರಿ ರಸ್ತೆ, ಕೆದಮುಳ್ಳೂರು-ಪಾಲಂಗಾಲ, ಪಾಲೇರಿ-ಕುಟ್ಟ ರಸ್ತೆ, ತೂಚಮಕೇರಿ ಗ್ರಾಮದ ರಸ್ತೆ, ಬಾಳೆಲೆ-ಗೋಣಿಕೊಪ್ಪ ರಸ್ತೆ, ಶ್ರೀಮಂಗಲ ಮಾರುಕಟ್ಟೆ ಬಳಿ, ಹೈಸೊಡ್ಲೂರು ಗ್ರಾಮದಲ್ಲಿ ರಸ್ತೆ, ಅಮ್ಮತ್ತಿ-ಒಂಟಿಯಂಗಡಿ ರಸ್ತೆ, ಅಮ್ಮತ್ತಿ-ಕೊಂಡಂಗೇರಿ ರಸ್ತೆ, ಪೆರುಂಬಾಡಿ-ಕಿರುಮಕ್ಕಿ ರಸ್ತೆ, ಕಾನೂರು ರಸ್ತೆ, ವಿರಾಜಪೇಟೆ-ಪೆರುಂಬಾಡಿ-ಬಿಟ್ಟಂಗಾಲ ರಸ್ತೆಗಳಲ್ಲಿ ಬಿದ್ದ ಮರಗಳನ್ನು ತೆರವುಗೊಳಿಸಲಾಗಿದೆ. 

ಮಡಿಕೇರಿ ತಾಲ್ಲೂಕು ಮರಗೋಡು-ಕತ್ತಲೆಕಾಡು, ನಾಪೋಕ್ಲು-ಕಲ್ಲುಮೊಟ್ಟೆ ರಸ್ತೆಯಲ್ಲಿ ಮರ ಮತ್ತು ವಿದ್ಯುತ್ ಕಂಬ, ಭಾಗಮಂಡಲ-ತಲಕಾವೇರಿ ರಸ್ತೆ, ಎಮ್ಮೆಮಾಡು-ಕರ್ಪಚಕ್ಕೆ ರಸ್ತೆ, ನಾಪೋಕ್ಲು-ನೆಲಜಿ ಮುಖ್ಯ ರಸ್ತೆಯ ಚೋನಕೆರೆ, ಮರಗೋಡು ಗ್ರಾಮದ ಕತ್ತಲೆಕಾಡು ರಸ್ತೆ, ಕೊಟ್ಟಗೇರಿ ಬಳಿ, ಕಕ್ಕಬ್ಬೆಯ ಪಾಡಿ ಇಗ್ಗುತ್ತಪ್ಪ ದೇವಸ್ಥಾನ ರಸ್ತೆ, ಕತ್ತಲೆಕಾಡು -ಮರಗೋಡು ರಸ್ತೆಗಳಲ್ಲಿ ಬಿದ್ದ ಮರಗಳನ್ನು ತೆರವುಗೊಳಿಸಲಾಗಿದೆ. 

ಪ್ರಕೃತಿ ವಿಕೋಪದ ಮಾಹಿತಿ ಬಂದೊಡನೆ ಜಿಲ್ಲಾಡಳಿತದ ಅರಣ್ಯ, ಪೊಲೀಸ್, ಲೋಕೋಪಯೋಗಿ, ಅಗ್ನಿ ಶಾಮಕ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಮತ್ತು ಕಂದಾಯ ಇಲಾಖೆಗಳ ವಿಪತ್ತು ನಿರ್ವಹಣಾ ತಂಡಗಳು ಕಾರ್ಯೋನ್ಮುಖವಾಗುತ್ತಿದ್ದು ಸ್ಥಳೀಯ ನಗರಸಭೆ, ಪಟ್ಟಣ ಪಂಚಾಯತಿ, ಗ್ರಾಮ ಪಂಚಾಯತಿ, ಸ್ಥಳೀಯ ಜನರು ಮತ್ತು ಸ್ವಯಂ ಸೇವಕರ ನೆರವಿನಿಂದ ಪರಿಹಾರ ಕಾರ್ಯ ನಡೆಸಲಾಗುತ್ತಿದೆ. 

ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಉಂಟಾಗುವ ಅನಾನುಕೂಲಗಳನ್ನು ಎದುರಿಸಲು ಜಿಲ್ಲಾಡಳಿತವು ಸಜ್ಜಾಗಿದ್ದು, ಜಿಲ್ಲೆಯ ಜನತೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಆದಾಗ್ಯೂ ಗುಡ್ಡಗಾಡು ಮತ್ತು ಬೆಟ್ಟದ ತಪ್ಪಲಿನಲ್ಲಿ ವಾಸಿಸುವ ಜನರು ಸ್ವಲ್ಪ ಎಚ್ಚರಿಕೆಯಿಂದ ಇರಲು ಜಿಲ್ಲಾಡಳಿತ ಮನವಿ ಮಾಡುತ್ತದೆ.   

ಇತ್ತೀಚಿನ ಸುದ್ದಿ

ಜಾಹೀರಾತು