ಇತ್ತೀಚಿನ ಸುದ್ದಿ
ಮಧು ಬಂಗಾರಪ್ಪ ಜನತಾ ದಳ ಬಿಟ್ಟು ಕಾಂಗ್ರೆಸ್ ಸೇರ್ತಾರಾ? ಏನು ಹೇಳಿದ್ದಾರೆ, ನೀವೇ ಓದಿ
January 6, 2021, 9:40 AM

ಶಿವಮೊಗ್ಗ(reporterkarnataka news):
ನಾನು ಕಾಂಗ್ರೆಸ್ನಲ್ಲೇ ಇದ್ದವ. ಕಾಂಗ್ರೆಸ್ ನನಗೆ
ಯಾವತ್ತೂ ಮುಜಗರ ತಂದಿಲ್ಲ. ಕಳೆದ ಎರಡು ಸಂಸತ್ ಚುನಾವಣೆಯಲ್ಲೂ ದೊಡ್ಡ ಮಟ್ಟದಲ್ಲಿ ಮತ ಪಡೆಯಲು ನೆರವಾಗಿದೆ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಹೇಳಿದರು.
ಕಾಗೋಡು ತಿಮ್ಮಪ್ಪ ಅವರು ನನ್ನನ್ನು ಒಬ್ಬ ಪ್ರತಿಪಕ್ಷದವ ಎಂದು ಗುರುತಿಸದೆ ಜನಪ್ರತಿನಿಧಿ ಎಂಬ ನೆಲೆಗಟ್ಟಿನಲ್ಲಿ ನೋಡಿದ್ದರು. ಸಿದ್ದರಾಮಯ್ಯ, ಡಿ.ಕೆ . ಶಿವಕುಮಾರ್ ಅವರಂತ ನಾಯಕರು ವಿಶ್ವಾಸದಲ್ಲಿಯೇ ಕಂಡಿದ್ದರು ಎಂದು ಅವರು ಗತ ನೆನಪುಗಳನ್ನು ಮೆಲುಕು ಹಾಕಿದರು.
ನಾನು ಬದಲಾವಣೆಗೆ ಈಗಾಗಲೇ ನಿರ್ಧರಿಸಿದ್ದೇನೆ ಎಂದು ಹೇಳಿದ ಮಾಜಿ ಮುಖ್ಯಮಂತ್ರಿಯ ಪುತ್ರ,
ಜಿಲ್ಲೆಯ ಸ್ನೇಹಿತರ ಜತೆ ಸಮಾಲೋಚಿಸಿ ಆದಷ್ಟು ಬೇಗ ಬದಲಾಗುತ್ತೇನೆ. ಇನ್ನು ಹೆಚ್ಚು ದಿನ ಕಾಯುವುದಿಲ್ಲ ಎಂದು ನುಡಿದರು.