ಇತ್ತೀಚಿನ ಸುದ್ದಿ
ಮಾರಕ ಕೊರೊನಾಕ್ಕೆ ಒಂದೇ ದಿನ 201 ಬಲಿ: 99,75,958 ಮಂದಿ ಗುಣಮುಖ
January 5, 2021, 12:18 PM

P ದೇಶದಲ್ಲಿ ಕೊರೊನಾದ ರಣಕೇಕೆ ಮುಂದುವರಿದಿದೆ. ಕಳೆದ 24 ಗಂಟೆ ಅವಧಿಯಲ್ಲಿ 16,375 ಮಂದಿಯಲ್ಲಿ ಕೊರೊನಾ ಸೋಂಕು ಕಂಡು ಬಂದಿದೆ.
ಇದರೊಂದಿಗೆ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ1,03.56,845 ಕ್ಕೆ ತಲುಪಿದೆ. ಕಳೆದ 24 ಗಂಟೆಯಲ್ಲಿ ಕೊರೊನಾ 201ಮಂದಿಯ ಪ್ರಾಣ ಅಪಹರಿಸಿದೆ. ಮಾರಕ ಕೊರೊನಾಕ್ಕೆ ಇದುವರೆಗೆ 1,49, 850 ಮಂದಿ ಬಲಿಯಾಗಿದ್ದಾರೆ.
ಕೊರೊನಾ ಸೋಂಕಿಗೆ ತುತ್ತಾಗಿದ್ದ 99, 75, 958 ಮಂದಿ ಸೋಂಕಿನಿಂದ ಬಿಡುಗಡೆ ಪಡೆದಿದ್ದಾರೆ.
ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ 2 ,31, 036 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.