ಇತ್ತೀಚಿನ ಸುದ್ದಿ
ಮಾಜಿ ಸಚಿವ ವರ್ತೂರ್ ಪ್ರಕಾಶ್ ಅಪಹರಣ ಪ್ರಕರಣ: ಓರ್ವನ ವಿಚಾರಣೆ
December 3, 2020, 10:19 AM

ಕೋಲಾರ(reporterkarnataka news): ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಹಸುವಿನ ವ್ಯಾಪಾರಿಯಾಗಿರುವ ನಯಾಜ್ ಎಂಬಾತನನ್ನು ವಿಚಾರಣೆಗೆ ಗುರಿಪಡಿಸಲಾಗಿದೆ ಎಂದು ವರದಿಯಾಗಿದೆ. ಅಪಹರಣಕಾರರಿಗೆ ನಯಾಜ್ 40 ಲಕ್ಷ ರೂಪಾಯಿ ನೀಡಿದ್ದ ಎಂದು ವರದಿಯಾಗಿದೆ.
ಈ ಹಿನ್ನೆಲೆಯಲ್ಲಿ ನಯಾಜ್ ಹೇಳಿಕೆಯನ್ನು ಪೊಲೀಸರು ಪಡೆಯಲು ನಿರ್ಧರಿಸಿದ್ದಾರೆ. ವ್ಯವಹಾರ ಸಂಬಂಧ ಉಂಟಾದ ಮನಸ್ತಾಪವೇ ಮಾಜಿ ಸಚಿವ ವರ್ತೂರ್ ಪ್ರಕಾಶ್ ಅಪಹರಣಕ್ಕೆ ಪ್ರಮುಖ ಕಾರಣ ಎಂಬ ತೀರ್ಮಾನಕ್ಕೆ ಅಧಿಕಾರಿಗಳು ಬಂದಿದ್ದಾರೆ ಎಂದು ಹೇಳಲಾಗಿದೆ.