ಇತ್ತೀಚಿನ ಸುದ್ದಿ
ಮಾದಕ ದ್ರವ್ಯ ತನಿಖೆ: ಇಂದು ನಟ ದಿಗಂತ್ ಬಂಧನ ಸಂಭವ: ಯಾಕೆ ಗೊತ್ತೇ?
September 23, 2020, 11:46 AM

ಬೆಂಗಳೂರು(reporterkarnataka new): ಮಾದಕ ದ್ರವ್ಯದ ತನಿಖೆ ನಡೆಸುತ್ತಿರುವ ಸಿಸಿಬಿ ಇಂದು ನಟ ದಿಗಂತ್ ಅವರನ್ನು ಮತ್ತೆ ವಿಚಾರಣೆಗೆ ಗುರಿಪಡಿಸಲಿದ್ದಾರೆ. ಸೆಪ್ಟೆಂಬರ್ 16ರಂದು ನಡೆದ ವಿಚಾರಣೆ ಸಂದರ್ಭದಲ್ಲಿ ನಟ ದಿಗಂತ್ ಮತ್ತು ನಟಿ ಐಂದ್ರಿತಾ ರೇ ಅವರನ್ನು ವಿಚಾರಣೆಗೆ ಗುರಿಪಡಿಸಿದ್ದರು.
ಈ ಹಿಂದಿನ ವಿಚಾರಣೆ ಸಂದರ್ಭದಲ್ಲಿ ದಿಗಂತ್ ಬಳಿ ಇದ್ದ ಮೊಬೈಲನ್ನು ವಶಪಡಿಸಿಕೊಳ್ಳಲಾಗಿತ್ತು. ಆ ಮೊಬೈಲ್ ನಲ್ಲಿದ್ದ ಎಲ್ಲ ಡೇಟಾವನ್ನು ಸಿಸಿಬಿ ಅಧಿಕಾರಿಗಳು ರಿಟ್ರೀವ್ ಮಾಡಿದ್ದಾರೆ. ಇದರಲ್ಲಿ ಸ್ಫೋಟಕ ಮಾಹಿತಿ ಅಡಗಿದೆ ಎಂದು ವರದಿಯಾಗಿದೆ.
ಇಂದು ದಿಗಂತ್ ಹೇಳಿಕೆ ತನಿಖಾಧಿಕಾರಿಗಳಿಗೆ ತೃಪ್ತಿ ತರದಿದ್ದರೆ ಅವರನ್ನು ಬಂಧಿಸುವ ಸಾಧ್ಯತೆ ಹೆಚ್ಚಾಗಿದೆ. ದಿಗಂತ್ ಇದೀಗ ತಮ್ಮ ಮನೆಯಲ್ಲಿ ಇಲ್ಲ ಎಂದು ಕೂಡ ವರದಿಯಾಗಿದೆ.