ಇತ್ತೀಚಿನ ಸುದ್ದಿ
ಮಾದಕ ದ್ರವ್ಯ ತನಿಖೆ: ಬಿನೀಶ್ ಕೊಡಿಯೇರಿಗೆ ಇಂದು ನ್ಯಾಯಾಲಯಕ್ಕೆ ಹಾಜರು
November 2, 2020, 9:51 AM

ಬೆಂಗಳೂರು( reporterkarnataka news): ಮಾದಕ ದ್ರವ್ಯದ ಆರೋಪಿ ಅನೂಪ್ ಮೊಹಮ್ಮದ್ ಜತೆ ಸಂಬಂಧ ಹೊಂದಿರುವ ಹಿನ್ನೆಲೆಯಲ್ಲಿ ಬಂಧನದಲ್ಲಿರುವ ಕೇರಳದ ಸಿಪಿಎಂ ನಾಯಕ ಕೊಡಿಯೇರಿ ಬಾಲಕೃಷ್ಣನ್ ಅವರ ಪುತ್ರ ಬಿನೀಶ್ ಕೊಡಿಯೇರಿಗೆ ಇಂದು ನಿರ್ಣಾಯಕ ದಿನ. ಜಾರಿ ನಿರ್ದೇಶನಾಲಯದ ಕಸ್ಟಡಿ ಅವಧಿ ಇಂದು ಕೊನೆಗೊಳ್ಳಲಿದೆ.
ಬಿನೀಶ್ ಅವರನ್ನು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು. ಇ ಡಿ ಮತ್ತೆ ವಶಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡುವ ಸಾಧ್ಯತೆಯಿದೆ.