ಇತ್ತೀಚಿನ ಸುದ್ದಿ
ಮಾದಕ ದ್ರವ್ಯ ತನಿಖೆ: ಇಂದು ಸಿಸಿಬಿಯಿಂದ ವಿಭಿನ್ನ ಮಾದರಿಯ ವಿಚಾರಣೆ
September 12, 2020, 4:36 AM

ಬೆಂಗಳೂರು(reporterkarnataka news): ಮಾದಕದ್ರವ್ಯದ ತನಿಖೆ ನಡೆಸುತ್ತಿರುವ ಸಿಸಿಬಿ ಇಂದು ವಿಭಿನ್ನ ಮಾದರಿಯ ವಿಚಾರಣೆ ನಡೆಸಲಿದೆ. ಮೊದಲಿಗೆ ಎಲ್ಲಾ ಆರೋಪಿಗಳ ಪ್ರತ್ಯೇಕ ವಿಚಾರಣೆ ನಡೆಯಲಿದೆ. ಬಳಿಕ ಆ ಆರೋಪಿಗಳು ಪ್ರಸ್ತಾಪ ಮಾಡಿರುವ ಪ್ರಮುಖ ಆರೋಪಿಗಳನ್ನು ಜತೆಯಲ್ಲಿ ಕೂರಿಸಿ ಸಿಸಿಬಿ ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಸಿಸಿಬಿಯ ಹಿರಿಯ ಅಧಿಕಾರಿಗಳು ಇದರ ನೇತೃತ್ವ ವಹಿಸಲಿದ್ದಾರೆ. ಇದುವರೆಗಿನ ತನಿಖೆಯಲ್ಲಿ ಸಿಸಿಬಿ ಮಹತ್ವದ ಪ್ರಗತಿ ಸಾಧಿಸಿದೆ ಎಂದು ವರದಿಯಾಗಿದೆ.
ಸಿಸಿಬಿ ತನಿಖೆಯ ಆಯಾಮ ವಿಸ್ತರಿಸುವ ಸಾಧ್ಯತೆಯಿದ್ದು, ಸಿನೆಮಾ ರಂಗಕ್ಕೆ ಹೊರತಾದ ಇತರ ಹಲವು ಮಂದಿಯನ್ನು ವಿಚಾರಣೆಗೆ ಗುರಿಪಡಿಸುವ ಸಾಧ್ಯತೆಯಿದೆ