3:06 PM Tuesday24 - November 2020
ಬ್ರೇಕಿಂಗ್ ನ್ಯೂಸ್
ಒಂದೇ ದಿನ ಮಾರಕ ಕೊರೊನಾಕ್ಕೆ 480 ಬಲಿ: 86,04,955 ಮಂದಿ ಗುಣಮುಖ ರೆಬೆಲ್ ಸ್ಟಾರ್  ಅಂಬರೀಷ್ ಎರಡನೆ ಪುಣ್ಯತಿಥಿ ಇಂದು ವಾರಣಾಸಿ ಕ್ಷೇತ್ರದಿಂದ ಪ್ರಧಾನಿ ಮೋದಿ ಆಯ್ಕೆ ಪ್ರಶ್ನಿಸಿ ಅರ್ಜಿ: ಇಂದು ಸುಪ್ರೀಂ ಕೋರ್ಟ್… ಸಹಕಾರ ಹಾಲು ಡೈರಿಗೆ ಕ್ಷೀರ ನೀಡುವ ಮೂಲಕ ವಿವಿಧ ಸೌಲಭ್ಯ ಪಡೆಯಲು ಸಲಹೆ ಮಾಜಿ ಸಭಾಪತಿ ರಮೇಶ್ ಕುಮಾರ್ ಹುಟ್ಟುಹಬ್ಬ ಪ್ರಯುಕ್ತ ಕಾಂಗ್ರೆಸ್ ನಿಂದ ಅನ್ನಸಂತರ್ಪಣೆ ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗಯ್ ನಿಧನ ಶಾಲೆ ಆರಂಭ ಪ್ರಸ್ತಾಪ: ಸಿಎಂ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ  ಉದಯೋನ್ಮುಖ ಕ್ರಿಕೆಟಿಗ ನವದೀಪ್ ಸೈನಿಗೆ ಹುಟ್ಟುಹಬ್ಬದ ಶುಭ ಕೋರಿದ ಕೊಹ್ಲಿ ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿ: ನಾಳೆ ಸಿಎಂ ಯಡಿಯೂರಪ್ಪ ಜತೆ ಪ್ರಧಾನಿ ಮೋದಿ ಚರ್ಚೆ ರಾಜಕೀಯ ರಂಗದಲ್ಲಿ ಕುತೂಹಲ ಕೆರಳಿಸಿದ ಸಚಿವ ಸೋಮಣ್ಣ ದಿಢೀರ್ ದೆಹಲಿ ಭೇಟಿ

ಇತ್ತೀಚಿನ ಸುದ್ದಿ

ಲೋಕ ಕಲ್ಯಾಣರ್ಥವಾಗಿ ಶ್ರೀ ವೆಂಕಟರಮಣ ದೇವಳದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು

September 13, 2020, 9:11 AM

ಚಿತ್ರ : ಮಂಜು ನೀರೇಶ್ವಾಲ್ಯ

ಮಂಗಳೂರು(reporterkarnatakanews): ಭಾನುವಾರ ಬೆಳಗ್ಗೆ 6 ಗ್ರಹಗಳು ಅವರವರ ಸ್ವಕ್ಷೇತ್ರ ದಲ್ಲಿ ಇರುವುದರಿಂದ ಇದೊಂದು ಒಳ್ಳೆಯ ಮುಹೂರ್ತ ಎಂದು ಜ್ಯೋತಿಷ್ಯ ಶಾಸ್ತ್ರಹೇಳುತ್ತದೆ.

ಭಾನುವಾರದ ದಿನ ಗ್ರಹ ಮಂಡಲದಲ್ಲಿ ಅಪರೂಪದಲ್ಲೇ ಅಪರೂಪದ ವಿದ್ಯಮಾನವನ್ನು ನಾವೆಲ್ಲರೂ ಕಾಣಬಹುದಾಗಿದೆ.

ಛಾಯಾಗ್ರಹಗಳಾದ ರಾಹು-ಕೇತುಗಳನ್ನು ಹೊರತುಪಡಿಸಿ, ಮಿಕ್ಕ ಏಳು ಗ್ರಹಗಳಲ್ಲಿ ಆರು ಗ್ರಹಗಳು ತಮ್ಮ ತಮ್ಮ ಸ್ವಕ್ಷೇತ್ರಗಳಲ್ಲಿ ಇರುವುದು 

ಈ ದಿನದ ವಿಶೇಷವಾಗಿದೆ. ಗುರುವು (ಪೂರ್ವಾಷಾಢ) ಧನಸ್ಸು ರಾಶಿಯಲ್ಲಿ, ಶನಿಯು(ಉತ್ತರಾಷಾಢ) ಮಕರದಲ್ಲಿ, ಕುಜನು(ಅಶ್ವಿನಿ) ಮೇಷದಲ್ಲಿ, ಚಂದ್ರನು ಕಟಕದಲ್ಲಿ ಶುಕ್ರನೊಂದಿಗೆ(ಪುನರ್ವಸು ನಕ್ಷತ್ರದಲ್ಲಿ), ರವಿಯು ಸಿಂಹದಲ್ಲಿ(ಉತ್ತರಾ ನಕ್ಷತ್ರ), ಬುಧನು ಉಚ್ಛ ಕ್ಷೇತ್ರವು, ಸ್ವಕ್ಷೇತ್ರವೂ ಆದ ಕನ್ಯಾರಾಶಿಯಲ್ಲಿ(ಹಸ್ತಾ ನಕ್ಷತ್ರ) ಇರುವುದು ವಿಶೇಷವೂ, ಅಪರೂಪವೂ ಆಗಿದೆ. 

ವಾರ ಗ್ರಹ ರಾಜನಾದ ರವಿಯು ವಾರ. ಈ ಸಂದರ್ಭದಲ್ಲಿ ಬೆಳಗ್ಗೆ 11ರ ಸಮಯಕ್ಕೆ ವೃಶ್ಚಿಕ ಲಗ್ನ(10-45ರಿಂದ12-45ರ ವರೆಗೆ) ಇರುವುದು. ಆ ಲಗ್ನಕ್ಕೆ ಹೊಂದಿಕೊಂಡಂತೆ, ಗುರುವು ಧನಸ್ಥಾನವಾದ 2ನೇ ಮನೆಯಲ್ಲಿ, ಶನಿಯು 3ರಲ್ಲಿ, ಕುಜನು 6ರಲ್ಲಿ, ಚಂದ್ರನು (ಶುಕ್ರನೊಂದಿಗೆ)9ರಲ್ಲಿ, ರವಿಯು 10ರಲ್ಲಿ, ಬುಧನು 11ರಲ್ಲಿ ಇರುತ್ತಾರೆ. ಇದು ಅತ್ಯಂತ ಸುಸಮಯ. ಅಂದು ಸುಮಾರು ಬೆಳಿಗ್ಗೆ 10-45ರಿಂದ 12-45ರ ವರೆಗೂ ವೃಶ್ಚಿಕ ಲಗ್ನ ಇರುವುದು. ಈ ಸಮಯದಲ್ಲಿ ಯಾರು ಯಾವುದೇ ಸತ್ಕಾರ್ಯ, ಜಪ, ಹೋಮ, ತಪ, ದಾನ, ಗೋ ಸೇವೆ, ದೀನ ಜನೋಪಚಾರ, ಮಂತ್ರ ಪಾರಾಯಣ, ಸಹಸ್ರನಾಮದಿ ಪಾರಾಯಣಗಳು, ಪ್ರಾಣಿ-ಪಕ್ಷಿಗಳಿಗೆ ಆಹಾರ ಕೊಡವುದು, ಸತ್ಪಾತ್ರರಿಗೆ ದಾನ, ಮಹಾಲಯ ಪಕ್ಷದ ತನ್ನಿಮಿತ್ತ ಕಾರ್ಯ ಇತ್ಯಾದಿ ಸತ್ಕಾರ್ಯ ಮಾಡುವುದು ಶ್ರೇಯಸ್ಕರ. ಆದುದರಿಂದ ಲೋಕ ಕಲ್ಯಾಣಾರ್ಥವಾಗಿ ಇಡೀ ಪ್ರಪಂಚಕ್ಕೆ ತಗಲಿದ ಈ ಮಹಾಮಾರಿಯು ಶೀಘ್ರವಾಗಿ ತೊಲಗಲಿ , ಶ್ರೀ ದೇವಳಗಳಲ್ಲಿ ನಡೆಯುವ ಎಲ್ಲಾ  ಪೂಜಾ ಕೈ೦ಕರ್ಯಗಳು ಹಿಂದಿನಂತೆ ಸುಸೂತ್ರವಾಗಿ ನಡೆಯಲಿ , ಜನರ ಕಷ್ಟಗಳು ಬೇಗನೆ ನಿವಾರಣೆ ಯಾಗಲಿ ಎಂಬ ಹಿತ ದೃಷ್ಟಿಯಿಂದ  ದೇವಳದಲ್ಲಿ ಬೆಳಗ್ಗೆ  11:30 ಕ್ಕೆ ಸರಿಯಾಗಿ  ದೇವಳದ ಆಡಳಿತ ಮಂಡಳಿ , ವೈದಿಕ ರು ಹಾಗೂ ಸಮಾಜ ಬಾಂಧವರು ಎಲ್ಲರೊಡಗೂಡಿ ಶ್ರೀ ವೀರ ವೆಂಕಟೇಶ್ ದೇವರ ಸನ್ನಿಧಾನದಲ್ಲಿ ಮಹಾ ಪ್ರಾರ್ಥನೆ ಸಲ್ಲಿಸಲಾಯಿತು . ಈ ಸಂದರ್ಭದಲ್ಲಿ ದೇವಳದ ಮೊಕ್ತೇಸರರಾದ ಕೆ . ಪಿ . ಪ್ರಶಾಂತ್ ರಾವ್ ಹಾಗೂ ನೂರಾರು ಭಜಕರು ಉಪಸ್ಥಿತರಿದ್ದರು.

…………………

ಚಿತ್ರ : ಮಂಜು ನೀರೇಶ್ವಾಲ್ಯ

ಇತ್ತೀಚಿನ ಸುದ್ದಿ

ಜಾಹೀರಾತು