10:17 PM Friday27 - November 2020
ಬ್ರೇಕಿಂಗ್ ನ್ಯೂಸ್
ಸಂಸದರ ಜತೆ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಮಹತ್ವದ ಚರ್ಚೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಕಚೇರಿ ಇಂದು ಉದ್ಘಾಟನೆ ನಿವಾರ್ ಚಂಡಮಾರುತದ ಪ್ರಭಾವ: ಬೆಂಗಳೂರಿನಲ್ಲಿ  ಸೇರಿ 6 ಜಿಲ್ಲೆಗಳಲ್ಲಿ ಯಲ್ಲೊ ಅಲರ್ಟ್  ಕೋವಿಡ್ ಆಸ್ಪತ್ರೆಯಲ್ಲಿ ಬೆಂಕಿ: 5 ಮಂದಿ ರೋಗಿಗಳು ಸಜೀವ ದಹನ, ತನಿಖೆಗೆ ಆದೇಶ ರಾಜ್ಯ ಸಚಿವ ಸಂಪುಟದ ಮಹತ್ವದ ಸಭೆ ಇಂದು: ವಿಜಯ ನಗರ ಜೆಲ್ಲೆ ರಚನೆ… ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಳದ ನೂತನ ಮೇಳದ ಪ್ರಥಮ ವರ್ಷದ ತಿರುಗಾಟ 27ರಂ ವಿದ್ಯುತ್ ಸಂಪರ್ಕವೇ ಕಾಣದ 2 ಮನೆಗಳಿಗೆ  ಕೊನೆಗೂ ಬಂತು ಬೆಳಕು ! ಶ್ರೀನಗರದಲ್ಲಿ ಭದ್ರತಾ ಪಡೆಯ ಮೇಲೆ ಭಯೋತ್ಪಾದಕರ ದಾಳಿ: ಸ್ಥಳಕ್ಕೆ ಹೆಚ್ಚುವರಿ ಸೇನೆ ಚಿಕ್ಕಬಳ್ಳಾಪುರದ ಬಳಿ ಕಾರುಗಳಿಗೆ ಡಿಕ್ಕಿ ಹೊಡೆದು ಅಂಗಡಿಗೆ ನುಗ್ಗಿದ  ಕ್ಯಾಂಟರ್ : ನಾಲ್ವರ… ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ: ನಾಳೆ ಸಂಸದರ ಸಭೆ ಕರೆದ ಸಿಎಂ ಯಡಿಯೂರಪ್ಪ

ಇತ್ತೀಚಿನ ಸುದ್ದಿ

ಲಾಕ್ ಡೌನ್ ನಲ್ಲಿ ಕೆಲಸ ಕಳೆದುಕೊಂಡವನಿಗೆ ಒಲಿಯಿತು ಕೇರಳ ಓಣಂ ಲಾಟರಿ 12 ಕೋಟಿ ! 

September 21, 2020, 5:30 PM

ತಿರುವನಂತಪುರಂ(reporterkarnataka): ದೇಶದ ವಿಶ್ವಸಾರ್ಹ ಲಾಟರಿಗಳ ಪೈಕಿ ಕೇರಳ ಸರಕಾರದ ಓಣಂ ಲಾಟರಿ ಫಲಿತಾಂಶ ಪ್ರಕಟವಾಗಿದ್ದು, ಕೊಚ್ಚಿಯ ದೇಗುಲವೊಂದರ ಸಿಬ್ಬಂದಿಗೆ ಅದೃಷ್ಟ ಒಲಿದಿದೆ.

ಕೊಚ್ಚಿಯ ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ 24 ವರ್ಷದ ಅನಂತು ವಿಜಯನ್ ಎಂಬಾತನಿಗೆ ಭಾನುವಾರ ಬೆಳಗ್ಗೆ 12 ಕೋಟಿ ರೂ. ಗಳ ಲಾಟರಿ  ಒಲಿದಿದೆ. ಲಾಕ್ ಡೌನ್ ಬಳಿಕ ಅನಂತ ಕೆಲಸ ಕಳೆದುಕೊಂಡು ಸಂಕಷ್ಟದಲ್ಲಿದ್ದ. ಈ ವೇಳೆ ತನ್ನ ಅದೃಷ್ಟ ಪರೀಕ್ಷೆ ಮಾಡಿಸಿಕೊಳ್ಳಲು ನಿರ್ಧರಿಸಿದ ಅನಂತು ಲಾಟರಿ ಟಿಕೆಟ್ ಖರೀದಿಸಿದ್ದ. ನಿನ್ನೆ ಸಂಜೆ 5.30 ಕ್ಕೆ ಲಾಟರಿಯ ಫಲಿತಾಂಶ ಪ್ರಕಟವಾಗಿದ್ದು, ತಾನು ಖರೀದಿಸಿದ ಲಾಟರಿ ಬಹುಮಾನ ಬಂದಿದೆ.

ಅನಂತು ಕಳೆದ 2 ವರ್ಷಗಳಿಂದ ಎರ್ನಾಕುಲಂನ ಪೊನ್ನೆತ್ ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ. ಲಾಟರಿಯ ಬಹುಮಾನದ ಹಣ ಕೈಸೇರುವವರೆಗೂ ದೇವಸ್ಥಾನದಲ್ಲಿಯೇ ಕೆಲಸ ಮಾಡಲು ಅನಂತು ನಿರ್ಧರಿಸಿದ್ದಾನೆ. ಸರ್ಕಾರದ ಎಲ್ಲ ಟ್ಯಾಕ್ಸ್ ಕಟ್ ಆಗಿ

 ಅನಂತು ಕೈಗೆ 7.57 ಕೋಟಿ ರೂ. ಸಿಗಲಿದೆ. 

 ಲಾಟರಿ ಟಿಕೆಟ್ ಮಾರಿದ ಅಲಗಾರ್ ಸ್ವಾಮಿ ಅವರಿಗೆ ಕಮಿಷನ್ ರೂಪದಲ್ಲಿ 1.20 ಕೋಟಿ ರೂ. ಸಿಗಲಿದೆ.

ಕೇರಳದಲ್ಲಿ ಪ್ರತಿ ತಿಂಗಳು ಸುಮಾರು 85 ಲಕ್ಷ ಲಾಟರಿ ಮಾರಾಟವಾಗುತ್ತಿದೆ. ಲಾಕ್ ಡೌನ್ ಬಳಿಕ ಕೇರಳದಲ್ಲಿ  ಲಾಟರಿ ಮಾರಾಟದಲ್ಲಿ ಕೂಡ ಹೆಚ್ಚಳವಾಗಿದೆ. ಲಾಟರಿ ಖರೀದಿಸಿ ಅದೃಷ್ಟ ಹುಡುಕುತ್ತಿರುವವರ ಸಂಖ್ಯೆ ಹೆಚ್ಚಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು