ಇತ್ತೀಚಿನ ಸುದ್ದಿ
ಲೋಕಲ್ ಫೈಟ್ ಗೆ ರಣರಂಗದ ಸಿದ್ಧ: ಕೆಲವು ಕಡೆಗಳಲ್ಲಿ ಬಿರುಸಿನ ಮತದಾನ
December 22, 2020, 11:16 AM

ಮಂಗಳೂರು(reporterkarnataka news): ರಾಜ್ಯದಲ್ಲಿ ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗೆ ಮತದಾನ ಮಂಗಳವಾರ ಆರಂಭಗೊಂಡಿದ್ದು, ಗ್ರಾಮೀಣ ಜನರು ಮತದಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪಂಚಾಯಿತಿಗಳಲ್ಲಿಯೂ ಮತದಾನ ಆರಂಭವಾಗಿದೆ. ಕೆಲವು ಕಡೆಗಳಲ್ಲಿ ಮಂದಗತಿಯಲ್ಲಿ ಮತದಾನ ಆರಂಭವಾದರೆ,
ಇನ್ನೂ ಕೆಲವು ಕಡೆಗಳಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ. ಜಿಲ್ಲೆಯ ಗಡಿಭಾಗದ ತಲಪಾಡಿ ಗ್ರಾಮ ಪಂಚಾಯಿತಿಯಲ್ಲಿ ಸಾಧಾರಣ ಮತದಾನ ಶುರುವಾಗಿದೆ.