ಇತ್ತೀಚಿನ ಸುದ್ದಿ
ಸಾಲ ಮರು ಪಾವತಿ ಮೋರೋಟೋರಿಯಂ ಇಂದು ಮುಕ್ತಾಯ
August 31, 2020, 3:47 AM

ನವದೆಹಲಿ(reporterkarnataka news): ಕೊರೊನಾ ಹಿನ್ನೆಲೆಯಲ್ಲಿ ಘೋಷಿಸಲಾಗಿದ್ದ ಮೋರೋಟೋರಿಯಂ ಇಂದು ಕೊನೆಗೊಳ್ಳಲಿದೆ. ನಾಳೆಯಿಂದ ಬ್ಯಾಂಕ್ ಗಳಿಗೆ ಸಾಲವನ್ನು , ಬಡ್ಡಿ ಮತ್ತು ಚಕ್ರ ಬಡ್ಡಿ ಸಹಿತ ಪಾವತಿಸಬೇಕಾಗಿದೆ. ಹಣಕಾಸು ಸಂಸ್ಥೆಗಳು ಈಗಾಗಲೇ ಸಾಲ ಮರು ವಸೂಲಾತಿ ಪ್ರಕ್ರಿಯೆ ಆರಂಭಿಸಿವೆ.
ಸಾಲ ಪಡೆದುಕೊಂಡವರಿಗೆ ನಿರಂತರವಾಗಿ ಕರೆ ಮಾಡಲು ಆರಂಭಿಸಿವೆ. ಇನ್ನು ಸಾಲ ವಸೂಲಾತಿ ಏಜೆಂಟರುಗಳು ಮನೆಗೆ ತೆರಳಿ ತಕ್ಷಣ ಸಾಲ ಮರು ವಾಪತಿಸುವಂತೆ ಒತ್ತಡ ಹೇರುತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿ ಬಂದಿದೆ.