5:03 PM Thursday22 - October 2020
ಬ್ರೇಕಿಂಗ್ ನ್ಯೂಸ್
ನಳಿನ್ ಮಂಗಳೂರಿನಲ್ಲಿ ಬೀದಿ ಅಲೆಯುತ್ತಿದ್ದ ಪೋಕರಿ: ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿ ಮಂಗಳೂರು ವೆಂಕಟರಮಣ ದೇಗುಲದ ಶಾರದೆಗೆ ಮಹಾಲಕ್ಷ್ಮಿ ಅಲಂಕಾರ ಬಿಹಾರ ಚುನಾವಣೆ: ಬಿಜೆಪಿ ಪ್ರಣಾಳಿಕೆ ಬಿಡುಗಡೆ; ಭರಪೂರ ಭರವಸೆ ಹುಲಿಯ ಹಲ್ಲು ವಶ: ನಾಲ್ವರು ಆರೋಪಿಗಳ ಬಂಧನ ಆಕ್ಸ್ ಫರ್ಡ್ ಲಸಿಕೆ  ಪ್ರಯೋಗದ ವೇಳೆ ದುರಂತ: ಬ್ರೆಜಿಲ್ ನಲ್ಲಿ ಓರ್ವ ಬಲಿ ಸಜೀಪನಡು ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶರನ್ನವರಾತ್ರಿ ಪೂಜೋತ್ಸವ ಇಂದು ಶಿರಾದಲ್ಲಿ ಬಿಜೆಪಿಯಿಂದ ಸಂಸದ ತೇಜಸ್ವಿ ಸೂರ್ಯ ಚುನಾವಣಾ ಪ್ರಚಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಹುಟ್ಟು ಹಬ್ಬದ ಸಂಭ್ರಮ ಟಿಆರ್ ಪಿ ಹಗರಣ: ಇಂದು ರಿಪಬ್ಲಿಕನ್ ಪ್ರಿಯಾ ಮುಖರ್ಜಿ ವಿಚಾರಣೆ ಪಚ್ಚನಾಡಿ ತ್ಯಾಜ್ಯ ದುರಂತ: ವರ್ಷದ ಬಳಿಕ  ರಾಜ್ಯ ಸರಕಾರದಿಂದ 14 ಕೋಟಿ ಪರಿಹಾರ…

ಇತ್ತೀಚಿನ ಸುದ್ದಿ

ಲೋಡ್ ಗೆ 2 ಸಾವಿರದಂತೆ ಮರಳು ಒದಗಿಸಿ: ಸಂಸದ ನಳಿನ್ ಗೆ ರಮಾನಾಥ ರೈ ಸವಾಲು

September 19, 2020, 6:23 PM

ಮಂಗಳೂರು(reporterkarnataka news): ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದಂತೆ ಒಂದು ಲೋಡ್ ಗೆ ಎರಡು ಸಾವಿರ ರೂಪಾಯಿಯಂತೆ ಮರಳು ಒದಗಿಸಲಿ ಎಂದು ಮಾಜಿ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಸವಾಲು ಎಸಗಿದ್ದಾರೆ.

ನಗರದ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ ಆಡಳಿತ ಕಾಲದಲ್ಲಿ ಜಿಲ್ಲೆಯಲ್ಲಿ 105 ಮಂದಿಗೆ ಪರವಾನಿಗೆ ನೀಡಲಾಗಿತ್ತು. ಕಳೆದ ಒಂದು ವರ್ಷದಿಂದ ಹೊಸ ಪರವಾನಿಗೆ ನೀಡಿಲ್ಲ. ಆದರೆ ಡ್ರಜ್ಜಿಂಗ್, ಜೆಸಿಬಿ ಬಳಸಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಸಂಸದರ ಬೆಂಬಲಿಗರೇ ನೇರವಾಗಿ ಇದರಲ್ಲಿ ಇದ್ದಾರೆ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ ನಡೆದ ಹತ್ಯೆಯಲ್ಲಿ ಕಾಂಗ್ರೆಸ್ ನ ಯಾವುದೇ ಕಾರ್ಯಕರ್ತರು ಭಾಗಿಯಾಗಿಲ್ಲ. ಎಫ್ ಐ ಆರ್ ನಲ್ಲಿ ಯಾವುದೇ ಕಾಂಗ್ರೆಸ್ ಕಾರ್ಯಕರ್ತರ ಹೆಸರಿಲ್ಲ ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು