11:08 AM Sunday17 - January 2021
ಬ್ರೇಕಿಂಗ್ ನ್ಯೂಸ್
ಇಟಗಿಹಾಳ: ಮಧ್ಯದಂಗಡಿ ತೆರವಿಗೆ ಆಗ್ರಹಿಸಿ 3ನೇ ಬಾರಿ ಗ್ರಾಮಸ್ಥರಿಂದ ಭಾರಿ ರಸ್ತೆ ತಡೆ… ಕಾಮಾಜೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ವಿವೇಕಾ ಸಂದೇಶ 2021’ ಕಾರ್ಯಕ್ರಮ ರಾಜ್ಯದ ಎಲ್ಲ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ನೇಮಕ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ ಭದ್ರಾವತಿ: ಕ್ಷಿಪ್ರ ಕಾರ್ಯಪಡೆ ಕಚೇರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೂಮಿ… ಕೊರೊನಾ ತಡೆಗೆ ಸ್ವದೇಶಿ ವ್ಯಾಕ್ಸಿನ್ ಭಾರತದ ಸಾಧನೆಯ ಪ್ರತೀಕ: ಪ್ರಧಾನಿ ನರೇಂದ್ರ ಮೋದಿ ಲಿಂಗಸುಗೂರು: ಕೋವಿಡ್ 19 ಲಸಿಕೆ ಬಾಕ್ಸ್ ಗೆ ಪೂಜೆ ಸಲ್ಲಿಸಿ ಬರಮಾಡಿಕೊಂಡ ತಾಲೂಕು… ಬ್ಲ್ಯಾಕ್ ಮೇಲ್ ಮಾಡಿ ಮಂತ್ರಿ ಸ್ಥಾನ: ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆಗೆ ಎಸ್.… ಮಲ್ಪೆಯಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಬೋಟ್ ನಿಂದ ಬಿದ್ದು ಮೀನುಗಾರ ಸಾವು ಸರಕಾರಿ ನೌಕರರ ಕ್ರೀಡಾಕೂಟದಲ್ಲಿ ಮಹಿಳಾ ಸಿಬ್ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕೋಲಾರ ಜಿಲ್ಲಾಧಿಕಾರಿ… ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷರಾಗಿ  ದೇರಳಕಟ್ಟೆ ರೆಂಜಡಿಯ ಡಾ. ಅಬ್ದುಲ್ ಶಕೀಲ್ ನೇಮಕ

ಇತ್ತೀಚಿನ ಸುದ್ದಿ

ಲೆಬನಾನ್ ಭೀಕರ ಸ್ಫೋಟದ ಬಳಿಕ ಆಂತರಿಕ ದಂಗೆ:  ಭ್ರಷ್ಟಾಚಾರ ಆರೋಪದ ಮೇಲೆ ಪ್ರಧಾನಿ ರಾಜೀನಾಮೆ

August 11, 2020, 9:25 AM

ಬೈರುತ್(reporterkarnaraka): ಲೆಬನಾನಿನ ರಾಜಧಾನಿಯಲ್ಲಿ ಕಳೆದ ವಾರ ಸಂಭವಿಸಿದ ಭೀಕರ ಸ್ಫೋಟ ಹಾಗೂ ನಂತರ ದೇಶಾದ್ಯಂತ ನಡೆದ ಪ್ರತಿಭಟನೆ ಮತ್ತು ಹಿಂಸಾಚಾರಕ್ಕೆ ತಲೆಬಾಗಿ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಪ್ರಧಾನಿ ಹಸನ್ ಡಯಾಬ್  ನೇತೃತ್ವದ ಸರಕಾರ ರಾಜೀನಾಮೆ ನೀಡಿದೆ.

ಅಧ್ಯಕ್ಷ ಮೈಕೆಲ್ ಒಯುನ್ ಸೋಮವಾರ ಡಯಾಬ್ ಅವರ ರಾಜೀನಾಮೆಯನ್ನು ಅಂಗೀಕರಿಸಿದರು ಮತ್ತು ಹೊಸ ಕ್ಯಾಬಿನೆಟ್ ರಚನೆಯಾಗುವವರೆಗೂ ಉಸ್ತುವಾರಿ ಸರಕಾರದ ಹೊಣೆ ವಹಿಸುವಂತೆ ಸೂಚಿಸಿದ್ದಾರೆ.

ಬೈರುತ್ ಬಂದರಿನಲ್ಲಿ ಭಾರಿ ಸ್ಫೋಟ ಸಂಭವಿಸಿದ ನಂತರ ದೇಶದಲ್ಲಿ ಉದ್ವಿಗ್ನತೆ ಹಾಗೂ ಹಿಂಸಾಚಾರ ಘಟನೆಗಳು ಹೆಚ್ಚಿವೆ. ದಂಗೆಯಲ್ಲಿ ಸುಮಾರು 200 ಮಂದಿ ಸಾವನ್ನಪ್ಪಿದ್ದಾರೆ. 6000 ಹೆಚ್ಚು ಜನರು ಗಾಯಗೊಂಡಿದ್ದಾರೆ

ನಾನು ಈ ಸರಕಾರದ ರಾಜೀನಾಮೆಯನ್ನು ಘೋಷಿಸುತ್ತೇನೆ. ದೇವರು ಲೆಬನಾನ್  ರಕ್ಷಿಸಲಿ’ ಎಂದು ಡಯಾಬ್ ಕೊನೆಯ ನುಡಿಗಟ್ಟನ್ನು ದೂರದರ್ಶನದಲ್ಲಿ ಮಾಡಿದ ಭಾಷಣದ ವೇಳೆ ಮೂರು ಬಾರಿ ಪುನರಾವರ್ತಿಸಿದರು. 

ಆಗಸ್ಟ್ 4ರ ಮಧ್ಯಾಹ್ನ ಲೆಬನಾನ್ ರಾಜಧಾನಿ ಬೈರುತ್ ಬಂದರಿನಲ್ಲಿ ಅವಳಿ ಸ್ಫೋಟ ಸಂಭವಿಸಿತ್ತು. ಸುಮಾರು 2,750 ಟನ್‌ನಷ್ಟು ಅಮೋನಿಯಂ ನೈಟ್ರೇಟ್ ಸ್ಫೋಟಗೊಂಡ ಪರಿಣಾಮ ಬೈರುತ್ ಛಿದ್ರ ಛಿದ್ರವಾಗಿತ್ತು. ಘಟನೆಯಲ್ಲಿ ಈಗಾಗಲೇ 220 ಮಂದಿ ಮೃತಪಟ್ಟಿದ್ದು, 6000ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಏರುತ್ತಿರುವುದರ ಜೊತೆಗೆ, 3 ಲಕ್ಷ ಮಂದಿ ನಿರಾಶ್ರಿತರಾಗಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು