ಇತ್ತೀಚಿನ ಸುದ್ದಿ
ಲಂಡನ್ ನಿಂದ ಆಗಮಿಸಿದ 35ರ ಹರೆಯದ ಮಹಿಳೆ: ಬೆಳಗಾವಿ ಜನರಲ್ಲಿ ಆತಂಕ
December 22, 2020, 5:42 PM

ಬೆಳಗಾವಿ(reporterkarnataka news): ಲಂಡನ್ ನಿಂದ ಸೋಮವಾರ 35ರ ಹರೆಯದ ಮಹಿಳೆಯೊಬ್ಬರು ಬೆಳಗಾವಿಗೆ ಆಗಮಿಸಿದ್ದು, ಕುಂದ ನಗರಿಯಲ್ಲಿ ಜನರನ್ನು ಆತಂಕಕ್ಕೀಡು ಮಾಡಿದೆ. ಈ ನಡುವೆ ಮಹಿಳೆಯನ್ನು ಕೊರೊನಾ ಟೆಸ್ಟ್ ಗೆ ಒಳಪಡಿಸಲಾಗಿದೆ.
ಮಹಿಳೆ ಲಂಡನ್ ನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ನಂತರ ಬೆಂಗಳೂರಿನಿಂದ ಬೆಳಗಾವಿಗೆ ವಿಮಾನದ ಮೂಲಕವೇ ತೆರಳಿದ್ದಾರೆ. ನಂತರ ಆಕೆ ಖಡೇಬಜಾರದಲ್ಲಿರುವ ತನ್ನ ಮನೆಗೆ ತೆರಳಿದ್ದಾಳೆ.
ಮಾಹಿತಿ ತಿಳಿದ ಆರೋಗ್ಯ ಇಲಾಖೆಯ ಅಧಿಕಾರಿಗಳು ಮಹಿಳೆಯ ಮನೆಗೆ ತೆರಳಿ ಪರೀಕ್ಷೆ ನಡೆಸಿದ್ದಾರೆ. ಜೊತೆಗೆ ಆಕೆ ಮತ್ತು ಆಕೆಯ ಸಂಪರ್ಕಕ್ಕೆ ಬಂದವರನ್ನು ಹೋಮ್ ಕ್ವಾರಂಟೈನ್ ಗೆ ಒಳಪಡಿಸಿದ್ದಾರೆ.