ಇತ್ತೀಚಿನ ಸುದ್ದಿ
ಲಾಟರಿ ಆಸೆಗೆ ಲಕ್ಷಗಟ್ಟಲೆ ಹಣ ಕಳೆದುಕೊಂಡ ಉಡುಪಿಯ ಯುವಕ !
September 18, 2020, 5:54 PM

ಉಡುಪಿ ( Reporter Karnataka News)
ಲಾಟರಿ ಗೆದ್ದಿದ್ದೀರಿ ಎನ್ನುವ ಮೊಬೈಲ್ ಸಂದೇಶವನ್ನು ನಂಬಿ ಯುವಕನೊಬ್ಬ ಲಕ್ಷಾಂತರ ರೂ. ಕಳೆದುಕೊಂಡ ಘಟನೆ ಬೆಳ್ಮಣ್ನಲ್ಲಿ ನಡೆದಿದೆ.
ಬೆಳ್ಮಣ್ ಪುನಾರ್ ನಿವಾಸಿ ಸುರೇಶ್ ಪ್ರಭು ಎಂಬವರ ಮಗ ಸುಜಿತ್ ಪ್ರಭು ಎನ್ನುವವರ ಮೊಬೈಲ್ಗೆ ಸೆ.4ರಂದು 12,18,095ರೂ. ಲಾಟರಿ ಗೆದ್ದಿರುವುದಾಗಿ ಸಂದೇಶ ಬಂದಿದ್ದು, ತದನಂತರ ವ್ಯಕ್ತಿಯೊಬ್ಬ ಕರೆ ಮಾಡಿ, ಲಾಟರಿಯಲ್ಲಿ ಗೆದ್ದ 17,400 ಡಾಲರ್ ಹಣ ವನ್ನು ರೂಪಾಯಿಗೆ ವರ್ಗಾವಣೆ ಮಾಡಲು 6,500ರೂ. ಪಾವತಿಸಬೇಕು ಎಂದು ನಂಬಿಸಿದ್ದ ಎನ್ನಲಾಗಿದೆ.
ಸುಜಿತ್ ಪ್ರಭು ಹಣವನ್ನು ಅವರ ಖಾತೆಗೆ ಹಾಕಿದ್ದನು. ನಂತರ ಮತ್ತೊಬ್ಬ ಕರೆ ಮಾಡಿ ಬೇರೆ ಬೇರೆ ಖಾತೆಯ ನಂಬ್ರಗಳನ್ನು ನೀಡಿ ಆ ಖಾತೆಗಳಿಗೆ ಹಣ ಡಿಪಾಸಿಟ್ ಮಾಡುವಂತೆ ತಿಳಿಸಿದ್ದು, ಹೀಗೆ ಸುಜಿತ್ ಒಟ್ಟು 2,05,500ರೂ. ಹಣವನ್ನು ಡಿಪಾಸಿಟ್ ಮಾಡಿ ವಂಚನೆಗೆ ಒಳಗಾಗಿದ್ದಾರೆ.
ಈ ಬಗ್ಗೆ ಉಡುಪಿ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.