ಇತ್ತೀಚಿನ ಸುದ್ದಿ
ಲೈಂಗಿಕ ದೌರ್ಜನ್ಯ.ಆರೋಪ: ಅನುರಾಗ್ ಕಶ್ಯಪ್ ವಿರುದ್ಧ ಇಂದು ಪೊಲೀಸರಿಗೆ ದೂರು?
September 21, 2020, 8:26 AM

ಮುಂಬೈ( reporterkarnataka news): ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ದ ಇಂದು ಪೊಲೀಸರಿಗೆ ದೂರು ನೀಡುವ ಸಾಧ್ಯತೆಗಳಿವೆ. ನಟಿ ಪಾಯಲ್ ಘೋಷ್ ಪರ ವಕೀಲರು ಇದನ್ನು ತಿಳಿಸಿದ್ದಾರೆ. ಮುಂಬೈನ ಒಶಿವಾರ ಪೊಲೀಸ್ ಠಾಣೆಯಲ್ಲಿ ದೂರು ನೀಡುವುದಾಗಿ ಅವರು ಹೇಳಿದ್ದಾರೆ.
ಅನುರಾಗ್ ಕಶ್ಯಪ್ ತಮ್ಮ ಮೇಲೆ ಲೈಂಗಿನ ದೌರ್ಜನ್ಯ ಎಸಗಿದ್ದಾರೆ ಎಂದು ನಟಿ ಪಾಯಲ್ ಘೋಷ್ , ಸಾಮಾಜಿಕ ಜಾಲ ತಾಣದ ಮೂಲಕ ಆರೋಪಿಸಿದ್ದರು. ಇದೇ ವೇಳೆ ಅನುರಾಗ್ ಕಶ್ಯಪ್ ಅವರ ಮೊದಲ ಪತ್ನಿ ಆರತಿ ಬಜಾಜ್, ಕಶ್ಯಪ್ ಬೆಂಬಲಕ್ಕೆ ನಿಂತಿದ್ದಾರೆ.