10:21 AM Friday27 - November 2020
ಬ್ರೇಕಿಂಗ್ ನ್ಯೂಸ್
ಸಂಸದರ ಜತೆ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಮಹತ್ವದ ಚರ್ಚೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಕಚೇರಿ ಇಂದು ಉದ್ಘಾಟನೆ ನಿವಾರ್ ಚಂಡಮಾರುತದ ಪ್ರಭಾವ: ಬೆಂಗಳೂರಿನಲ್ಲಿ  ಸೇರಿ 6 ಜಿಲ್ಲೆಗಳಲ್ಲಿ ಯಲ್ಲೊ ಅಲರ್ಟ್  ಕೋವಿಡ್ ಆಸ್ಪತ್ರೆಯಲ್ಲಿ ಬೆಂಕಿ: 5 ಮಂದಿ ರೋಗಿಗಳು ಸಜೀವ ದಹನ, ತನಿಖೆಗೆ ಆದೇಶ ರಾಜ್ಯ ಸಚಿವ ಸಂಪುಟದ ಮಹತ್ವದ ಸಭೆ ಇಂದು: ವಿಜಯ ನಗರ ಜೆಲ್ಲೆ ರಚನೆ… ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಳದ ನೂತನ ಮೇಳದ ಪ್ರಥಮ ವರ್ಷದ ತಿರುಗಾಟ 27ರಂ ವಿದ್ಯುತ್ ಸಂಪರ್ಕವೇ ಕಾಣದ 2 ಮನೆಗಳಿಗೆ  ಕೊನೆಗೂ ಬಂತು ಬೆಳಕು ! ಶ್ರೀನಗರದಲ್ಲಿ ಭದ್ರತಾ ಪಡೆಯ ಮೇಲೆ ಭಯೋತ್ಪಾದಕರ ದಾಳಿ: ಸ್ಥಳಕ್ಕೆ ಹೆಚ್ಚುವರಿ ಸೇನೆ ಚಿಕ್ಕಬಳ್ಳಾಪುರದ ಬಳಿ ಕಾರುಗಳಿಗೆ ಡಿಕ್ಕಿ ಹೊಡೆದು ಅಂಗಡಿಗೆ ನುಗ್ಗಿದ  ಕ್ಯಾಂಟರ್ : ನಾಲ್ವರ… ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ: ನಾಳೆ ಸಂಸದರ ಸಭೆ ಕರೆದ ಸಿಎಂ ಯಡಿಯೂರಪ್ಪ

ಇತ್ತೀಚಿನ ಸುದ್ದಿ

ಲೇಡಿಗೋಶನ್ ಆಸ್ಪತ್ರೆ ಇತಿಹಾಸದಲ್ಲೇ ಹೊಸ ದಾಖಲೆ: ಒಂದೇ ತಿಂಗಳಲ್ಲಿ 800 ಶಿಶುಗಳ ಜನನ!

November 20, 2020, 7:21 AM

ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com

ಜಿಲ್ಲೆಯ ಬಡ ಹಾಗೂ ಮಧ್ಯಮ ವರ್ಗದವರ ಪಾಲಿನ ಬೆಳಕಾದ ಮಂಗಳೂರು ಲೇಡಿಗೋಶನ್ ಆಸ್ಪತ್ರೆಯಲ್ಲಿ ದಾಖಲೆ ಹೆರಿಗೆಯಾಗಿದೆ. ಈ ಹಿಂದಿನ ಎಲ್ಲ ರೆಕಾರ್ಡ್ ಗಳನ್ನು ಮುರಿದು ಒಂದು ತಿಂಗಳಲ್ಲಿ 800 ಶಿಶುಗಳ ಜನನವಾಗಿದೆ.

ಲೇಡಿಗೋಶನ್ ಆಸ್ಪತ್ರೆಗೆ ಖ್ಯಾತಿಯೂ ಇದೆ, ಕುಖ್ಯಾತಿಯೂ ಇದೆ. ಬೆಡ್ ಇಲ್ಲದೆ ಬಸುರಿ/ಬಾಣಂತಿಯರನ್ನು ನೆಲದ ಮೇಲೆ ಮಲಗಿಸಿದ ಉದಾಹರಣೆಯೂ ಇದೆ. ಸಾಮಾನ್ಯವಾಗಿ ಮೆರಿಟ್ ಇದ್ದಲ್ಲಿ ಡಿಮೆರಿಟ್ ಇದ್ದೇ ಇರುತ್ತದೆ. ತಪ್ಪುಗಳನ್ನು ಹುಡುಕುತ್ತಾ ಹೋದರೆ ಸಾವಿರ ಸಿಗುತ್ತದೆ. ಒಳ್ಳೆ ಯದನ್ನು ಹುಡುಕಿದರೆ ನೂರಾರು ಸಿಗುತ್ತದೆ. ಲೇಡಿಗೋಶನ್ ಈ ತಪ್ಪು ಒಪ್ಪುಗಳಿಗೆ ಒಂದು ಜೀವಂತ ನಿದರ್ಶನ. ಇಲ್ಲಿ ಸಾಮಾನ್ಯವಾಗಿ ಪ್ರತಿ ತಿಂಗಳು 350ರಿಂದ 450 ಮಂದಿ ಗರ್ಭಿಣಿಯರು ಹೊಸ ಜೀವಕ್ಕೆ ಜನ್ಮ ನೀಡುತ್ತಾರೆ‌. ಕಳೆದ ಸೆಪ್ಟೆಂಬರ್ ನಲ್ಲಿ ಲೇಡಿಗೋಶನ್ ನಲ್ಲಿ 600 ಮಕ್ಕಳು ಜನಿಸಿದ್ದವು. ಇದು ಆಸ್ಪತ್ರೆಯಲ್ಲಿ ದಾಖಲೆ ಪ್ರಮಾಣದ ಶಿಶು ಜನನವಾಗಿತ್ತು. ಆದರೆ ಅಕ್ಟೋಬರ್ ತಿಂಗಳಿನಲ್ಲಿ ಈ ದಾಖಲೆಯನ್ನು ಮುರಿದು ಹೊಸ ದಾಖಲೆ ಬರೆಯಲಾಯಿತು. ಅದೇನೆಂದರೆ ಅಕ್ಟೋಬರ್ ಒಂದೇ ತಿಂಗಳಿನಲ್ಲಿ 800 ಶಿಶುಗಳ ಜನನವಾಗಿದೆ. ಇದರಲ್ಲಿ 379 ಸಿಸೇರಿಯನ್ ಹೆರಿಗೆಯಾಗಿತ್ತು. ಉಳಿದವುಗಳು ಸಾಮಾನ್ಯ ಹೆರಿಗೆ ಎಂದು ಇಲ್ಲಿ ನ ವೈದ್ಯರು ಹಾಗೂ ಸಿಬ್ಬಂದಿಗಳು ಹೆಮ್ಮೆಯಿಂದಲೇ ಹೇಳುತ್ತಾರೆ.

ಆಸ್ಪತ್ರೆಯಲ್ಲಿ ಒಂದೇ ತಿಂಗಳು 800 ಶಿಶುಗಳ ಜನನವಾಗಿರುವುದು ಇಲ್ಲಿನ ಇತಿಹಾಸದಲ್ಲೇ ಮೊದಲ ಬಾರಿ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಇತ್ತೀಚಿನ ಸುದ್ದಿ

ಜಾಹೀರಾತು