ಇತ್ತೀಚಿನ ಸುದ್ದಿ
ಕ್ಯಾಸಿನೊ ಮಾದಕ ದ್ರವ್ಯ ಅಡ್ಡೆಗಳಲ್ಲ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಭಿಮತಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಭಿಮತ
September 13, 2020, 6:58 AM

ಬೆಂಗಳೂರು(reporterkarnataka news): ಕ್ಯಾಸಿನೊಗಳನ್ನು ಮಾದಕ ದ್ರವ್ಯ ಅಡ್ಡೆಗಳಂತೆ ಬಿಂಬಿಸುವುದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಕ್ಯಾಸಿನೊಗಳಲ್ಲಿ ಮಾದಕ ದ್ರವ್ಯ ಸೇವನೆ ನಡೆಯುತ್ತಿಲ್ಲ. ಬದಲಾಗಿ ಲೇಟ್ ನೈಟ್ ಪಾರ್ಟಿಗಳಲ್ಲಿ ಇದು ಕಂಡು ಬರುತ್ತಿದೆ ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ತಮ್ಮ ಕ್ಯಾಸಿನೋ ಭೇಟಿ ಕುರಿತು ಕೂಡ ಅವರು ಮಾಹಿತಿ ಬಹಿರಂಗಪಡಿಸಿದ್ದಾರೆ. 1983ರಲ್ಲಿ ಮಲೇಷ್ಯಾಕ್ಕೆ ಭೇಟಿ ನೀಡಿದ್ದ ವೇಳೆ ಕ್ಯಾಸಿನೋ ನೋಡಿದ್ದೆ. ಈ ಸಂದರ್ಭದಲ್ಲಿ ತಮ್ಮ ಪತ್ನಿ ಕೂಡ ಜತೆಗಿದ್ದರು ಎಂದು ಕುಮಾರಸ್ವಾಮಿ ಬಹಿರಂಗಪಡಿಸಿದ್ದಾರೆ.
ತನಿಖೆಯ ದಿಕ್ಕು ತಪ್ಪಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಪಾರದರ್ಶಕ ತನಿಖೆ ನಡೆದು ಅಪರಾಧಿಗಳಿಗೆ ಶಿಕ್ಷೆಯಾಗಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.