5:48 AM Tuesday9 - March 2021
ಬ್ರೇಕಿಂಗ್ ನ್ಯೂಸ್
ಸಾಗರಮಾಲಾ ಯೋಜನೆಯ ಕೋಸ್ಟಲ್ ಬರ್ತ್  ರದ್ದುಪಡಿಸಲು ಒತ್ತಾಯಿಸಿ ಬೆಂಗರೆಯಲ್ಲಿ ಪ್ರತಿಭಟನೆ ಮೂಡುಬಿದರೆ: ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳಿಂದ ಎರಡು ದಿನಗಳ ಶೈಕ್ಷಣಿಕ ಪ್ರವಾಸ, ಚಾರಣ ಮಹಿಳಾ ದಿನಾಚರಣೆ ದಿನದಂದೇ ಶಾಕಿಂಗ್ ನ್ಯೂಸ್: ಪೊದೆಯಲ್ಲಿ ನವಜಾತ ಹೆಣ್ಣು ಶಿಶು ಪತ್ತೆ 50 ಟನ್ ಬೂದುಗುಂಬಳ ಬೆಳೆಸಿದ ತೀರ್ಥಹಳ್ಳಿ ರೈತ: ಖರೀದಿಗೆ ಸಗಟು ವರ್ತಕರಿಲ್ಲದೆ ಸೋತ!… ಮಂಗಳೂರಿನ ಸಿಮ್ರಾನ್ ಕೋಚಿಂಗ್ ಸೆಂಟರ್ ನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂಭ್ರಮ ರಾಜ್ಯ ಬಜೆಟ್ : ಪೆಟ್ರೋಲ್, ಡೀಸೆಲ್ ಮೇಲೆ ತೆರಿಗೆ ಹೆಚ್ಚಳ ಇಲ್ಲ. 45 ಲಕ್ಷ… ಮಹಿಳೆ ಮತ್ತು ನಾಯಕತ್ವ ಕ್ರೈಸ್ತ ಸಮುದಾಯ ವಿರುದ್ಧ ಸಂಸದ ಪ್ರತಾಪ ಸಿಂಹ ವಿವಾದಿತ ಹೇಳಿಕೆ: ಕಾಂಗ್ರೆಸ್ ಪ್ರತಿಭಟನೆ ಇಂದು ರಾಜ್ಯ ಬಜೆಟ್: ಮಧ್ಯಾಹ್ನ 12 ಗಂಟೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಮಂಡನೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಜಿಲ್ಲಾ ಮಹಿಳಾ ಕಾಂಗ್ರೆಸ್ ನಿಂದ ಥ್ರೋಬಾಲ್ ಪಂದ್ಯಾಟ

ಇತ್ತೀಚಿನ ಸುದ್ದಿ

ಮಾಂಸದ ಮಾರುಕಟ್ಟೆಗೆ ಮೇಯರ್ ತಂಡ ದಿಢೀರ್ ದಾಳಿ, ವ್ಯಾಪಾರಿಗಳಿಗೆ ತರಾಟೆ

October 14, 2020, 1:16 PM

ಮಂಗಳೂರು(reporterkarnataka news):
ಮಾಂಸದ ಮಾರುಕಟ್ಟೆಯಲ್ಲಿ ದನದ ಮಾಂಸವನ್ನು ಬೆರೆಸಲಾಗುತ್ತದೆ ಎಂಬ ಆರೋಪದ ಹಿನ್ನೆಲೆಯಲ್ಲಿ 
ಮೇಯರ್ ದಿವಾಕರ ಪಾಂಡೇಶ್ವರ್ ನಗರದ
ಮಾಂಸದ ಮಾರುಕಟ್ಟೆಗಳಿಗೆ ದಿಢೀರ್ ದಾಳಿ ನಡೆಸಿದ್ದಾರೆ.


ನಗರದ ಉರ್ವಾ, ಉರ್ವಾ ಸ್ಟೋರ್ ಮತ್ತು ಕುದ್ರೋಳಿ ಕಸಾಯಿಖಾನೆಗೆ ಭೇಟಿ ನೀಡಿದ ಮೇಯರ್ ದಿವಾಕರ್ ಅವರು ಪಾಲಿಕೆಯ
ಅಧಿಕಾರಿಗಳ ಜತೆ ಪರಿಶೀಲನೆ ನಡೆಸಿದರು. 
ಮಾಂಸದ ಮಾರುಕಟ್ಟೆಗಳಲ್ಲಿ ಪ್ರತಿದಿನದ ವ್ಯಾಪಾರವಾಗುವ ಮಾಂಸದ ಪ್ರಮಾಣ, ಕಡಿಯುವ ಕುರಿ, ಆಡುಗಳ ಕುರಿತು ರಶೀದಿ ಇಟ್ಟುಕೊಳ್ಳದಿರುವ ವಿಚಾರದ ಬಗ್ಗೆ ಮೇಯರ್ ವ್ಯಾಪಾರಿಗಳನ್ನು ತರಾಟೆಗೆ ತೆಗೆದುಕೊಂಡರು.


ಎಲ್ಲಿಂದ ಕುರಿ, ಆಡುಗಳನ್ನು ತರುತ್ತೀರಿ, ಎಷ್ಟು ಕಡಿಯುತ್ತೀರಿ ಮತ್ತು ಮಾಂಸದ ಪ್ರಮಾಣ ಎಷ್ಟು ಎನ್ನುವ ಬಗ್ಗೆ ಕಂಪ್ಯೂಟರೈಸ್ಡ್ ಬಿಲ್ ಇಟ್ಟುಕೊಳ್ಳಬೇಕು. ಈ ಬಗ್ಗೆ ಪಾಲಿಕೆಯ ಆರೋಗ್ಯ ಇಲಾಖೆ ಅಧಿಕಾರಿಗಳು ದಿನವೂ ಚೆಕ್ ಮಾಡಬೇಕು ಎಂದು ಸೂಚನೆ ನೀಡಿದರು.


ದಾಳಿ ವೇಳೆ, ದನದ ಮಾಂಸ ಪತ್ತೆಯಾಗಿಲ್ಲ ಎಂದು ಮೇಯರ್ ದಿವಾಕರ್ ಹೇಳಿದ್ದಾರೆ. 
ದಿನವೂ ದನ, ಆಡುಗಳನ್ನು ಕಡಿಯುವ ವೇಳೆ, ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿರಬೇಕು. ಅಧಿಕಾರಿಗಳ ಅನುಮತಿಯ ಬಳಿಕವೇ ವಧೆ ಮಾಡಬೇಕೆಂದು ನಿಯಮ ಇದೆ. ಆರೋಗ್ಯ ಅಧಿಕಾರಿಗಳು ಇದನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಸೂಚನೆ ನೀಡಿದರು. 

ಇತ್ತೀಚಿನ ಸುದ್ದಿ

ಜಾಹೀರಾತು