ಇತ್ತೀಚಿನ ಸುದ್ದಿ
ದುಷ್ಕರ್ಮಿಗಳಿಂದ ಮಧ್ಯರಾತ್ರಿ ಕೃತ್ಯ: ಕುಂಬಳೆ ಬಳಿ ನಾಯ್ಕಾಪುನಲ್ಲಿ ಯುವಕನ ಬರ್ಬರ ಹತ್ಯೆ
August 18, 2020, 2:52 AM

ಕಾಸರಗೋಡು(reporterkarnataka news):
ಕುಂಬಳೆ ಸಮೀಪದ ನಾಯ್ಕಾಪು ಎಂಬಲ್ಲಿ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮೃತಪಟ್ಟ ಯುವಕನನ್ನು ಹರೀಶ್ ಎಂದು ಗುರುತಿಸಲಾಗಿದೆ. ಸೋಮವಾರ ಮಧ್ಯರಾತ್ರಿ ಈ ದುಷ್ಕೃತ್ಯ ಎಸಗಲಾಗಿದೆ. ಆರೋಪಿಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ. ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ