ಇತ್ತೀಚಿನ ಸುದ್ದಿ
ಕುಂಬಳೆ ಬಳಿ ಓರ್ವನ ಹತ್ಯೆ ಪ್ರಕರಣ: ಇಬ್ಬರ ಆತ್ಮಹತ್ಯೆ, ಕಾಡಿನಲ್ಲಿ ಶವ ಪತ್ತೆ
August 19, 2020, 3:23 AM

ಕಾಸರಗೋಡು(reporterkarnataka news);
ಕುಂಬಳೆ ಸಮೀಪದ ನಾಯ್ಕಾಪು ಬಳಿ ಯುವಕನೊಬ್ಬನ ಹತ್ಯೆಯ ಬೆನ್ನಲ್ಲೇ ಇಬ್ಬರು ಯುವಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹರೀಶ್ ಎಂಬ ಯುವಕನನ್ನು ಎರಡು ದಿನಗಳ ಹಿಂದೆ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ದುಷ್ಕರ್ಮಿಯೊಬ್ಬ ಅವರನ್ನು ಹತ್ಯೆ ಮಾಡಿದ್ದ.
ಈ ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ ಇಬ್ಬರು ಯುವಕರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕುಂಬಳೆ ಸಮೀಪದ ಕುಂಟಗೇರಡ್ಕ ನಿವಾಸಿಗಳಾಗಿದ್ದ ರೋಶನ್ ಮತ್ತು ಮಣಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದಕ್ಕೆ ಕಾರಣ ತಿಳಿದು ಬಂದಿಲ್ಲ.
ಶೇಡಿಗುಮ್ಮೆ ಕಾಡಿನಲ್ಲಿ ಇಬ್ಬರು ಯುವಕರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.