ಇತ್ತೀಚಿನ ಸುದ್ದಿ
ಕೂಳೂರು ಸೇತುವೆಯಿಂದ ನದಿಗೆ ಹಾರಿದ ಕೃಷ್ಣಾಪುರದ ಗೃಹಿಣಿಯ ರಕ್ಷಿಸಿದ ಪೊಲೀಸರು
December 26, 2020, 8:31 PM

ಮಂಗಳೂರು(reporterkarnataka news):
ಸ್ಕೂಟರ್ ನಲ್ಲಿ ಬಂದು ಕೂಳೂರು ಸೇತುವೆಯಿಂದ ನದಿಗೆ ಹಾರಿದ ಮಹಿಳೆಯನ್ನು ರಕ್ಷಿಸಲಾಗಿದೆ.
ಕೃಷ್ಣಾಪುರ ನಿವಾಸಿಯಾದ ವಿವಾಹಿತೆ
ಮಹಿಳೆಯೊಬ್ಬರು ತನ್ನ ದ್ವಿಚಕ್ರವಾಹನ ನಿಲ್ಲಿಸಿ ನದಿಗೆ ಹಾರಿದ್ದರು. ಇದನ್ನು ಕಂಡ
ಸಂಚಾರ ಉತ್ತರ ಠಾಣೆ ಹೈವೆ ಪೆಟ್ರೋಲ್ ವಾಹನದ ಸಿಬಂದಿಗಳು ಈಕೆಯ ರಕ್ಷಣೆಗೆ ಮುಂದಾದರು. ನದಿಯಲ್ಲಿದ್ದ ದೋಣಿ ಮೂಲಕ ಮಹಿಳೆಯನ್ನು ರಕ್ಷಿಸಲಾಯಿತು. ಬಳಿಕ ಅವರನ್ನು
ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.