4:41 PM Thursday25 - February 2021
ಬ್ರೇಕಿಂಗ್ ನ್ಯೂಸ್
ಅಡುಗೆ ಅನಿಲ ಸಿಲಿಂಡರ್ ಬೆಲೆ ಮತ್ತೆ ಹೆಚ್ಚಳ: ಒಂದೇ ತಿಂಗಳಲ್ಲಿ 3ನೇ ಬಾರಿ… ಇಂಧನ ಬೆಲೆಯೇರಿಕೆ, ಇ- ವೇ ಬಿಲ್ ಖಂಡಿಸಿ ನಾಳೆ ಭಾರತ ಬಂದ್ :… ಶ್ರೀನಿವಾಸಪುರ: ರಾಷ್ಟ್ರೀಯ ಶ್ರವಣ ದೋಷ ನಿಯಂತ್ರಣ ಮತ್ತು ನಿರ್ಮೂಲನೆ ಕಾರ್ಯಕ್ರಮ ರೋವರ್ ನಿಂದ ಮಂಗಳನ ಮಣ್ಣು ಹಾಗೂ ಕಲ್ಲಿನ  ಸ್ಯಾಂಪಲ್ ಸಂಗ್ರಹ: ಹಾಗಾದರೆ ಅದನ್ನು… ಕಟೀಲು ಮೇಳ ಸೇವೆ ಆಟಗಳು: ಎಲ್ಲಿ ಏನೇನು? ನೀವೇ ಓದಿ ನೋಡಿ ತಂಬಾಕು ಜಾಗೃತಿ ಮೂಡಿಸಲು ‘ಗುಲಾಬಿ ಅಭಿಯಾನ’:  ಬೆಳುವಾಯಿ ಶಾಲಾ ಮಕ್ಕಳಿಂದ ಜಾಥಾ ಪೇಜಾವರ ಶ್ರೀಗಳಿಗೆ ಗುರು ವಂದನೆ: ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ 1 ಕೋಟಿ… ಆವಿಷ್ಕಾರ ಮತ್ತು ತಂತ್ರಜ್ಞಾನದ ಜಾಗತಿಕ ಕೇಂದ್ರವಾಗಿ ಮಂಗಳೂರು ಅಭಿವೃದ್ಧಿ: ಡಿಸಿಎಂ ಡಾ. ಅಶ್ವಥನಾರಾಯಣ ಜನರು ಮಾಸ್ಕ್ ಧರಿಸದಿದ್ದರೆ ಮತ್ತೆ ಲಾಕ್ ಡೌನ್: ಮುಖ್ಯಮಂತ್ರಿ ನಾಗರಿಕರಿಗೆ ಎಚ್ಚರಿಕೆ ಕೊರೊನಾ ಭಯಕ್ಕೆ ಗಡಿಯಲ್ಲಿ ಹೈ ಅಲರ್ಟ್: ಕರ್ನಾಟಕ – ಮಹಾರಾಷ್ಟ್ರ ಗಡಿಗಳಲ್ಲಿ ಚೆಕ್…

ಇತ್ತೀಚಿನ ಸುದ್ದಿ

ಸ್ವ ಸಾಮರ್ಥ್ಯದಿಂದ ಸಮಾಜದಲ್ಲಿ ಸದೃಢವಾಗಬೇಕು: ನಾವೂರು ಕುಲಾಲರ ಸಂಘ ಪದಗ್ರಹಣದಲ್ಲಿ ಕಸ್ತೂರಿ ಪಂಜ

October 13, 2020, 8:36 AM

ಬೆಳ್ತಂಗಡಿ(reporterkarnataka news) : ಕುಲಾಲ ಸಮುದಾಯ ಅಧರ್ಮವನ್ನು ಬಯಸದೆ ನ್ಯಾಯ ನೀತಿಯಲ್ಲಿರುವ ಹಿಂದೂ ಧರ್ಮದ ಒಂದು ಜಾತಿ. ಇನ್ನೊಬ್ಬರನ್ನು ಮೆಟ್ಟದೆ ಸ್ವ ಸಾಮರ್ಥ್ಯದಿಂದ ಮೇಲೇರಿದರೆ ಸಮಾಜದಲ್ಲಿ ಶಾಶ್ವತವಾಗಿ ಸದೃಢವಾಗಿರಬಹುದು’ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಹೇಳಿದರು.

ಅವರು ಭಾನುವಾರ ನಾವೂರು ಕುಲಾಲ ಸಭಾ ಭವನದಲ್ಲಿ ನಾವೂರು ಮೂಲ್ಯರ ಯಾನೆ ಕುಲಾಲರ ಸಂಘ, ಕುಲಾಲರ ಯುವ ವೇದಿಕೆ, ಕುಂಭಶ್ರೀ ಮಹಿಳಾ ಮಂಡಲದ 2020-22ನೇ ಸಾಲಿನ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

‘ಹಳೆ ಬೇರು – ಹೊಸ ಚಿಗುರು ಸೇರಿರಲು ಮರ ಸೊಬಗು ಎಂಬ ಮಾತಿನಂತೆ ನಾವು ಕುಟುಂಬದ ಜೊತೆ ಸಂಸ್ಕೃತಿಯನ್ನು ಬೆಳೆಸಿಕೊಂಡು ಹೋಗಬೇಕು. ಸಂಘಟನೆಯಿಂದ ಸಮಾಜವನ್ನು ಬೆಳೆಸುವ ಕೆಲಸವಾಗಬೇಕು’ ಎಂದರು.

ಕುಲಾಲ ಕುಂಬಾರ ಯುವ ವೇದಿಕೆಯ ಜಿಲ್ಲಾಧ್ಯಕ್ಷ ಸುಧಾಕರ ಕುಲಾಲ್ ಪದಗ್ರಹಣ ಕಾರ್ಯಕ್ರಮ ನೆರವೇರಿಸಿ, ‘ಯುವ ಸಮುದಾಯ ಸಂಘಟನೆ ಬಲಪಡಿಸುವ ಜೊತೆಗೆ ಸಮುದಾಯದ ಅಸಕ್ತ ಕುಟುಂಬಕ್ಕೆ ನೆರವಾಗಬೇಕು ಎಂದು ಹೇಳಿ ಯುವ ವೇದಿಕೆಯ ನಡೆ ಹಾಗೂ ವಿಸ್ತರಣೆಯ ಕುರಿತು ಮಾತನಾಡಿದರು.

ಅತಿಥಿ ಮಂಗಳೂರು ಉತ್ತರ ಕ್ಷೇತ್ರದ ಕುಲಾಲರ ಯುವ ವೇದಿಕೆ ಅಧ್ಯಕ್ಷ ಗಣೇಶ್ ಕುಲಾಯಿ ಮಾತನಾಡಿ, ‘ ಸಂಘಟನೆಯಲ್ಲಿ ಸಕ್ರೀಯವಾಗಿ ತೊಡಗಿಕೊಂಡು ಬಲಪಡಿಸುತ್ತಾ ಹೋಗುವಾಗ ಟೀಕೆಗಳು ಸಾಮಾನ್ಯ. ಅದರ ಬಗ್ಗೆ ಕುಗ್ಗದೆ ಸಮುದಾಯದ ಪೋಷಣೆಯಲ್ಲಿ ತೊಡಗಿದಾಗ ರಚನಾತ್ಮಕವಾದ ಸಮಾಜ ನಿರ್ಮಾಣವಗಲು ಸಾಧ್ಯ’ ಎಂದರು

ತಾಲೂಕು ಮೂಲ್ಯರ ಯಾನೆ ಕುಲಾಲರ ಸಂಘದ ಅಧ್ಯಕ್ಷ ಹರೀಶ್ ಕಾರಿಂಜ ಸಮಾರಂಭದ ಅಧ್ಯಕ್ಷತೆ ವಹಿಸಿ, ಹಿರಿಯರ ಮಾರ್ಗದರ್ಶನದಲ್ಲಿ ಯುವ ಸಮುದಾಯದ ಪಾಲ್ಗೊಳ್ಳುವಿಕೆಯಿಂದ ಕುಲಾಲ ಸಮಾಜ ಎಲ್ಲಾ ಕ್ಷೇತ್ರದಲ್ಲೂ ಸದೃಢವಾಗಿ ಬೆಳೆಯಲಿದೆ. ಬಲಿಷ್ಠ ಸಂಘ ರಚಿಸುವ ಸಲುವಾಗಿ ಯುವ ವೇದಿಕೆ ನಿರ್ಮಾಣವಾಗಿದೆ. ಎಂದರು.

ತಾಲೂಕು ಕುಲಾಲರ ಯುವ ವೇದಿಕೆಯ ಸಂಘಟನಾ ಕಾರ್ಯದರ್ಶಿ ಉಮೇಶ್ ಕುಲಾಲ್, ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ವೇದಾವತಿ ಸಮಾರಂಭ ಉದ್ದೇಶಿಸಿ ಮಾತನಾಡಿದರು.

ವೇದಿಕೆಯಲ್ಲಿ ವಗ್ಗದ ಉದ್ಯಮಿ ಕೂಸಪ್ಪ ಮೂಲ್ಯ, ನಾವೂರು ಪಂಚಾಯಿತಿ ಮಾಜಿ ಅಧ್ಯಕ್ಷೆ ಲಲಿತಾ, ನಾವೂರು ಮೂಲ್ಯರ ಯಾನೆ ಕುಲಾಲರ ಸಂಘದ ಅಧ್ಯಕ್ಷ ನಾರಾಯಣ ಮೂಲ್ಯ, ಕುಂಭಶ್ರೀ ಮಹಿಳಾ ಮಂಡಲದ ಅಧ್ಯಕ್ಷೆ ಜಯಂತಿ ಕುಶಾಲಪ್ಪ ಗೌಡ ಕಣಾಲು ಇದ್ದರು.

ಕುಲಾಲ ಸಮುದಾಯದ ಹಿರಿಯ ಗುರಿಕಾರರದ ಸುಂದರ ಮೂಲ್ಯ ಬೀಮಂಡೆ, ಡಾಕಯ್ಯ ಮೂಲ್ಯ ರನ್ನು ಸನ್ಮಾನಿಸಲಾಯಿತು. ಹಾಗೆ

ಸಂಘ ಕಟ್ಟಿ ಬೆಳೆಸುತ್ತಿರುವ ತಾಲೂಕು ಸಂಘದ ಅಧ್ಯಕ್ಷರಾದ ಹರೀಶ್ ಕಾರಿಂಜ ಮತ್ತು ತಾಲೂಕು ಸಂಘದ ನಿರ್ದೇಶಕರಾದ ಪುಷ್ಪರಾಜ ಲಾಯಿಲ ರನ್ನು ಸನ್ಮಾನಿಸಲಾಯಿತು.

ರಾಜ್ ಕುಮಾರ್ ಲಾಯಿಲ ಸ್ವಾಗತಿಸಿದರು. ಪುಷ್ಪರಾಜ್ ಲಾಯಿಲ ನಿರೂಪಿಸಿದರು. ವಿಜಯ್ ಕುಲಾಲ್ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು