9:05 PM Monday1 - March 2021
ಬ್ರೇಕಿಂಗ್ ನ್ಯೂಸ್
ಬಿಜೆಪಿ ಯುವ ಮೋರ್ಚಾ ನರಗುಂದ ಮಂಡಲ ವತಿಯಿಂದ ಗ್ರಾಮದಲ್ಲಿ ಸ್ವಚ್ಚತಾ ಕಾರ್ಯಕ್ರಮ ಜಾತಿ, ಮತ, ಕಟ್ಟುಪಾಡುಗಳನ್ನು ಮೀರಿ ಜನಪದ ಜನಮಾನಸದಲ್ಲಿ ನೆಲೆಗೊಂಡಿದೆ: ಎಡನೀರು ಮಠಾಧೀಶರು ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ ಸಚಿವ ಅಂಗಾರ ತವರಿನಲ್ಲಿ ಭಿನ್ನಮತ ಸ್ಫೋಟ: 3 ಮಂದಿ ಹಿರಿಯ ನಾಯಕರು ಬಿಜೆಪಿಯಿಂದ… ಅಥಣಿ ತಾಲೂಕಿನ ರಡೇರಹಟ್ಟಿ ಗ್ರಾಮದಲ್ಲಿ  ಆಕಸ್ಮಿಕವಾಗಿ ಬೆಂಕಿ ತಗುಲಿ ಗುಡಿಸಲು ಭಸ್ಮ: 4… ಒಂದೂವರೆ ತಿಂಗಳ ಅವಧಿಯಲ್ಲಿ 10 ಬಾರಿ ಇಂಧನ ದರ ಏರಿಕೆ: ಕೆಪಿಸಿಸಿ ಅಧ್ಯಕ್ಷ… ವೈದ್ಯಕೀಯ ಸೀಟುಗಳ ಬ್ಲಾಕಿಂಗ್ ದಂಧೆ: ಮಿನಿ ವಿಧಾನ ಸೌಧದ ಎದುರು ಎಬಿವಿಪಿ ಪ್ರತಿಭಟನೆ;… ಮಂಗಳೂರು ಮಹಾನಗರಪಾಲಿಕೆ  2020-21ನೇ  ಸಾಲಿನ ತೆರಿಗೆ ಪೂರ್ತಿ ಪಾವತಿಸಿದರೆ ಶೇ. 5% ವಿನಾಯಿತಿ ಮಹಿಳಾ ಸಿಬ್ಬಂದಿಗೆ ಮಾನಸಿಕ ಕಿರುಕುಳ ಪ್ರಕರಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ… ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ನೋಡಿ

ಇತ್ತೀಚಿನ ಸುದ್ದಿ

ದೇವಸ್ಥಾನ, ದೈವಸ್ಥಾನ ವ್ಯವಸ್ಥಾಪನಾ ಸಮಿತಿಯಲ್ಲಿ ನೀವೂ ಕೂಡ ಸದಸ್ಯರಾಗಬಹುದು! 

July 29, 2020, 3:00 AM

ಮಂಗಳೂರು(reporterkarnataka news): 

ದ.ಕ. ಜಿಲ್ಲೆಯ ಮಂಗಳೂರಿನ ಪ್ರವರ್ಗ ಬಿ ಮತ್ತು ಸಿ ವರ್ಗದ 2020 ಜೂನ್ ತಿಂಗಳಲ್ಲಿ ಅವಧಿ ಮುಗಿದಿರುವ ಈ ಕೆಳಕಂಡ ಅಧಿಸೂಚಿತ ಸಂಸ್ಥೆಗಳಿಗೆ 9 ಸದಸ್ಯರಿರುವ ವ್ಯವಸ್ಥಾಪನಾ ಸಮಿತಿಯನ್ನು ರಚಿಸುವ ಸಲುವಾಗಿ ಆಸಕ್ತ ಭಕ್ತಾದಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 

ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ಅಂತಿಮ ದಿನಾಂಕ ಆಗಸ್ಟ್ 15 ರೊಳಗಾಗಿ ಸಹಾಯಕ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ, ಮಂಗಳೂರು ಇವರಿಗೆ ಸಲ್ಲಿಸಬೇಕು.  ನಿಗಧಿತ ದಿನಾಂಕದ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಅರ್ಜಿ ನಮೂನೆಯು ಸಹಾಯಕ ಆಯುಕ್ತರು ಧಾರ್ಮಿಕ ದತ್ತಿ ಇಲಾಖೆ ಮಂಗಳೂರು ಮತ್ತು ಜಿಲ್ಲಾಧಿಕಾರಿಗಳ ಕಚೇರಿಯ ಧಾರ್ಮಿಕ ದತ್ತಿ ಶಾಖೆಯಲ್ಲಿ ಲಭ್ಯವಿರುತ್ತದೆ. 
 ಮಂಗಳೂರು ತಾಲೂಕಿಗೆ ಸಂಬಂಧಪಟ್ಟ ಪ್ರವರ್ಗ ‘ಸಿ’ ಪಟ್ಟಿಯ ದೇವಸ್ಥಾನಗಳ ವಿವರ ಇಂತಿವೆ:- ಬೊಡಂತಿಲ ಗ್ರಾಮದ ಶ್ರೀ ಮುಂಡಿತ್ತಾಯ ದೇವಸ್ಥಾನ, ಮಲ್ಲೂರು ಗ್ರಾಮದ ಶ್ರೀ ಈಶ್ವರ ದೇವಸ್ಥಾನ, ಬಂಡಿಕೊಟ್ಟಿಗೆ ಗ್ರಾಮದ  ಶ್ರೀ ಮಲರಾಯ ದೇವಸ್ಥಾನ, ತಿರುವೈಲು ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಮೊಗ್ರುಗುಡ್ಡೆ, ಕೆಂಜಾರು ಗ್ರಾಮದ ಶ್ರೀ ಮೋಗ್ರುಗುಡ್ಡೆ ಮಹಾದೇವ ದೇವಸ್ಥಾನ, ಕೊಂಪದವು ಗ್ರಾಮದ ಶ್ರೀ ಧೂಮಾವತಿ ದೈವಸ್ಥಾನ, ಮೂಳೂರು ಗ್ರಾಮದ ಶ್ರೀ ಸದಾಶಿವ ದೇವಸ್ಥಾನ, ಬಾರ್ದಿಲ, ಕುಪ್ಪೆಪದವು ಗ್ರಾಮದ ಶ್ರೀ ಸಾಂಬಸದಾಶಿವ ದೇವಸ್ಥಾನ, ಪಡುಪೆರಾರ್ ಗ್ರಾಮದ ಶ್ರೀ ಶಾಸ್ತಾವು ಬ್ರಹ್ಮ ದೇವಸ್ಥಾನ.
 ಬಂಟ್ವಾಳ ತಾಲೂಕಿಗೆ ಸಂಬಂಧಪಟ್ಟ ಪ್ರವರ್ಗ ‘ಸಿ’ ಪಟ್ಟಿಯ ದೇವಸ್ಥಾನಗಳ ವಿವರ ಇಂತಿವೆ:- ಸಜಿಪ ಮುನ್ನೂರು ಗ್ರಾಮದ ಶ್ರೀ ಸುಬ್ರಾಯ ದೇವಸ್ಥಾನ, ಪೆರಾಜೆ ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ವಿಟ್ಲ ಪಡ್ನೂರು ಗ್ರಾಮದ ಶ್ರೀ ಕಾಪಿನಮಲರಾಯ ದೈವಸ್ಥಾನ.
 ಬೆಳ್ತಂಗಡಿ ತಾಲೂಕಿಗೆ ಸಂಬಂಧಪಟ್ಟ ಪ್ರವರ್ಗ ‘ಬಿ’ ಪಟ್ಟಿಯ ದೇವಸ್ಥಾನಗಳ ವಿವಿರ ಇಂತಿವೆ:- ಬೆಳಾಲು ಗ್ರಾಮದ ಶ್ರೀ ಮಾಯಾ ಮಹಾದೇವಿ ದೇವಸ್ಥಾನ.
  ಬೆಳ್ತಂಗಡಿ ತಾಲೂಕಿಗೆ ಸಂಬಂಧಪಟ್ಟ ಪ್ರವರ್ಗ ‘ಸಿ’ ಪಟ್ಟಿಯ ದೇವಸ್ಥಾನಗಳ ವಿವಿರ ಇಂತಿವೆ:-ಬೈಲಂಗಡಿ, ತೋಟತ್ತಡಿ ಗ್ರಾಮದ ಶ್ರೀ ಸೋಮನಾಥೇಶ್ವರ ದೇವಸ್ಥಾನ, ಮಚ್ಚಿನ ಗ್ರಾಮದ ಶ್ರೀ ಮಸೂರು ಶಾಸ್ತಾವು ದೇವರು ದೇವಸ್ಥಾನ, ಸೋಣಂದೂರು ಗ್ರಮದ ಶ್ರೀ ಮುಂಡರಿ ಪಿಲಿಚಂಡಿ ದೇವಿ, ಪಾರಂಕಿ ಗ್ರಾಮದ ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನ, ಕಾಶಿಪಟ್ಣ ಗ್ರಾಮದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ವೇಣೂರು ಗ್ರಾಮದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ.
 ಪುತ್ತೂರು ತಾಲೂಕಿಗೆ ಸಂಬಂಧಪಟ್ಟ ಪ್ರವರ್ಗ ‘ಬಿ’ ಪಟ್ಟಿಯ ದೇವಸ್ಥಾನಗಳ ವಿವಿರ ಇಂತಿವೆ:-ಕ್ಯಾಮಣ ಗ್ರಾಮದ ಶ್ರೀ ಅಗಳಿ ಸದಾಶಿವ ದೇವಸ್ಥಾನ.
 ಪುತ್ತೂರು ತಾಲೂಕಿಗೆ ಸಂಬಂಧಪಟ್ಟ ಪ್ರವರ್ಗ ‘ಸಿ’ ಪಟ್ಟಿಯ ದೇವಸ್ಥಾನಗಳ ವಿವಿರ ಇಂತಿವೆ:-ಮಂಡೂರು ಗ್ರಾಮದ ಶ್ರೀ ಮೃತ್ಯುಂಜೇಶ್ವರ  ದೈವಸ್ಥಾನ, ಸವಣೂರು ಗ್ರಾಮದ ಶ್ರೀ ಮೊಗ್ರು ಕುಂಡಡ್ಕ ವಿಷ್ಣುಮೂರ್ತಿ ದೇವಸ್ಥಾನ, ಶಾಂತಿಗೋಡು ಗ್ರಾಮದ ಶ್ರೀ ಶಾಸ್ತವು ದೇವರು ದೇವಸ್ಥಾನ, ಸರ್ವೆ ಗ್ರಾಮದ ಶ್ರೀ ಸುಬ್ರಾಯ ದೇವಸ್ಥಾನ, ಬಲ್ನಾಡು ಗ್ರಾಮದ ಶ್ರೀ ಸಂಪ್ಯ ವಿಷ್ಣುಮೂರ್ತಿ ದೇವಸ್ಥಾನ, ಕುರಿಯ ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಕುರಿಯ ಗ್ರಾಮದ ಶ್ರೀ ಅಂಗಾಜ ವಿಷ್ಣುಮೂರ್ತಿ ದೇವಸ್ಥಾನ, ಮುಡ್ನೂರು ಗ್ರಾಮದ ಶ್ರೀ ಆಲಡ್ಕ ಸದಾಶಿವ ದೇವಸ್ಥಾನ, ಮುಡ್ನೂರು ಗ್ರಾಮದ ಶ್ರೀ ಕುಕ್ಕಿನಡ್ಕ ಸುಬ್ರಾಯ ದೇವಸ್ಥಾನ, ಕೋಳ್ತಿಗೆ ಗ್ರಾಮದ ಶ್ರೀ ಮಣಿಕಂಠ ವಿಷ್ಣುಮೂರ್ತಿ ದೇವಸ್ಥಾನ, ಚಾರ್ವಾಕ ಗ್ರಾಮದ ಶ್ರೀ  ಕುಂಟ್ಲಾಡಿ ಕುಕ್ಕೆನಾಥ ದೇವರು ದೇವಸ್ಥಾನ, ಶಾಂತಿಗೋಡು ಗ್ರಾಮದ ಮರಕ್ಕೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಶಾಂತಿಗೋಡು ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನ.
 ಸುಳ್ಯ ತಾಲೂಕಿಗೆ ಸಂಬಂಧಪಟ್ಟ ಪ್ರವರ್ಗ ‘ಸಿ’ ಪಟ್ಟಿಯ ದೇವಸ್ಥಾನಗಳ ವಿವಿರ ಇಂತಿವೆ:-ಬಳ್ಪ ಗ್ರಾಮದ ಯಜ್ಞಮೂರ್ತಿ ದೇವಸ್ಥಾನ, ಮುರಳ್ಯ ಗ್ರಾಮದ ಶ್ರೀ ಪೊದೆ ವಿಷ್ಣುಮೂರ್ತಿ ದೇವಸ್ಥಾನ, ಬಳ್ಪ ಗ್ರಾಮದ ಶ್ರೀ ಸೋಲಾಡಿ ವಿಷ್ಣುಮೂರ್ತಿ ದೇವಸ್ಥಾನ, ಕೇನ್ಯ ಗ್ರಾಮದ ಶ್ರೀ ಬಟ್ರಪಾಡಿ ದೇವಸ್ಥಾನ, ಬಾಳುಗೋಡು ಗ್ರಾಮದ ಶ್ರೀ ಕಾಡುಮುಂಡೂರು ಉರಿಯಪ್ಪ ದೇವರು ದೇವಸ್ಥಾನ, ಕೊಲ್ಲಮೊಗ್ರು ಗ್ರಾಮದ ಶ್ರೀ ಕೊಚ್ಚಿಲ ಸುಬ್ರಹ್ಮಣ್ಯ ದೇವರು ದೇವಸ್ಥಾನ.  

ಇತ್ತೀಚಿನ ಸುದ್ದಿ

ಜಾಹೀರಾತು