ಇತ್ತೀಚಿನ ಸುದ್ದಿ
ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮನೆಗೆ ಸಿಬಿಐ ದಾಳಿ: ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
October 5, 2020, 10:44 AM

ಬೆಂಗಳೂರು(reporterkarnataka news): ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿ ನಡೆಸಿರುವುದನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಖಂಡಿಸಿದ್ದಾರೆ. ಇದು ಬಿಜೆಪಿಯ ರಾಜಕೀಯ ದುಷ್ಟತನದ ಪರಮಾವಧಿ ಎಂದು ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
ರಾಜಕೀಯವಾಗಿ ಕಾಂಗ್ರೆಸ್ ಎದುರಿಸಲು ಅಸಮರ್ಥವಾಗಿರುವ ಬಿಜೆಪಿಯ ನೈತಿಕ ದಿವಾಳಿತನಕ್ಕೆ ಇದು ಸಾಕ್ಷಿ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.
ರಾಜ್ಯದಲ್ಲಿ ಉಪ ಚುನಾವಣೆಗೆ ವೇದಿಕೆ ಸಿದ್ದವಾಗಿರುವಾಗಲೇ ನಡೆದಿರುವ ಸಿಬಿಐ ದಾಳಿ , ಹಲವು ಪ್ರಶ್ನೆಗಳನ್ನು ಕೂಡ ಹುಟ್ಟು ಹಾಕಿದೆ.