ಇತ್ತೀಚಿನ ಸುದ್ದಿ
ಕೋವಿಡ್, ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿವೃಷ್ಠಿ ಕಾರಣ ಸಾರ್ವಜನಿಕವಾಗಿ ಹುಟ್ಟುಹಬ್ಬ ಆಯೋಜಿಸ ಬೇಡಿ: ಅಭಿಮಾನಿಗಳಿಗೆ ಈಶ್ವರ್ ಖಂಡ್ರೆ ಮನವಿ
January 12, 2021, 9:44 PM

ಬೆಂಗಳೂರು( reporterkarnataka news):
ಕೋವಿಡ್ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತೀವೃಷ್ಠಿ ಬಾಧಿತರಾಗಿ ಜನತೆ ಸಂಕಷ್ಟದಲ್ಲಿರುವುದರಿಂದ ಈ ಬಾರಿ ಸಾರ್ವಜನಿಕವಾಗಿ ಹುಟ್ಟುಹುಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರು, ಶಾಸಕ ಈಶ್ವರ್ ಖಂಡ್ರೆ
ಹೇಳಿದ್ದಾರೆ.
ಪ್ರತಿ ವರ್ಷ ಜನವರಿ 15 ರಂದು ಭಾಲ್ಕಿ ಕ್ಷೇತ್ರದ ಜನತೆ, ಪಕ್ಷದ ಕಾರ್ಯಕರ್ತರು, ಅಭಿಮಾನಿ ವೃಂದದವರು ಹಾಗೂ ನನ್ನ ಹಿತೈಷಿಗಳು ಸೇರಿ ನನ್ನ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದೀರಿ. ನಿಮ್ಮೆಲ್ಲರ ಪ್ರೀತಿ, ಅಭಿಮಾನಕ್ಕೆ ತಲೆಬಾಗಿ ನೀವು ಆಯೋಜಿಸುತ್ತಿದ್ದ ನನ್ನ ಜನ್ಮದಿನ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದೆ, ಆದರೇ ಈ ಬಾರಿ ವಿಶ್ವವೇ ಕೊರೊನಾ ಸಂಕಷ್ಟದಲ್ಲಿರುವಾಗ ನನ್ನ ಸ್ವಕ್ಷೇತ್ರ ಭಾಲ್ಕಿ ಸಹಿತ ಕಲ್ಯಾಣ ಕರ್ನಾಟದ ಜನತೆ ಅತಿವೃಷ್ಠಿಯಿಂದ ಭಾಧಿತರಾಗಿರುವಾಗ ಸಂಭ್ರಮಿಸದಿರಲು ನಿರ್ಧರಿಸಿದ್ದೇನೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಸಮಾಜದ ಪ್ರಧಾನ ಕಾರ್ಯದರ್ಶಿಗಳು ಆಗಿರುವ ಈಶ್ವರ್ ಭೀಮಣ್ಣ
ಖಂಡ್ರೆ ಹೇಳಿದ್ದಾರೆ.
ಕರ್ನಾಟಕದಾದ್ಯಂತ ಇರುವ ತನ್ನ ಅಭಿಮಾನಿಗಳಿಗೆ ಜ 15 ರಂದು ಹಾರಾ, ತುರಾಯಿ, ಶಾಲು ಇತ್ಯಾದಿಗೆ ಹಣ ವೆಚ್ಚ ಮಾಡದೇ ಇರುವಲ್ಲಿಂದಲೇ ಶುಭ ಕೋರುವಂತೆ ಮನವಿ ಮಾಡಿದ್ದಾರೆ.