ಇತ್ತೀಚಿನ ಸುದ್ದಿ
ಕೊವಾಕ್ಸಿನ್ ಲಸಿಕೆ ಪರೀಕ್ಷೆಗೆ ಗುರಿಯಾಗಿದ್ದ ಹರ್ಯಾಣ ಗೃಹ ಸಚಿವ ಅನಿಲ್ ವಿಜ್ ಗೆ ಕೊರೊನಾ ಸೋಂಕು
December 5, 2020, 1:58 PM

ಚಂಡೀಗಢ:ಕೊವಾಕ್ಸಿನ್ ಲಸಿಕೆಯ ಮೂರನೆ ಹಂತದ ಪರೀಕ್ಷೆಗೆ ಗುರಿಯಾಗಿದ್ದ ಹರ್ಯಾಣದ ಗೃಹ ಸಚಿವ ಅನಿಲ್ ವಿಜ್ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲಿ ಅವರು ಈ ಮಾಹಿತಿ ಬಹಿರಂಗಪಡಿಸಿದ್ದಾರೆ.
ನವೆಂಬರ್ 20ರಂದು ಸಚಿವ ಅನಿಲ್ ವಿಜ್ ಅವರು ಕೊವಾಕ್ಸಿನ್ ಮೂರನೆ ಹಂತದ ಪರೀಕ್ಷೆಯಲ್ಲಿ ಸ್ವಯಂ ಸ್ಪೂರ್ತಿಯಿಂದ ಭಾಗವಹಿಸಿದ್ದರು.
67 ವರ್ಷ ಪ್ರಾಯದ ಅನಿಲ್ ವಿಜ್ ಅವರನ್ನು ಅಂಬಾಲದಲ್ಲಿರುವ ಆಸ್ಪತ್ರೆಗೆ ಸೇರಿಸಲಾಗಿದೆ. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.