ಇತ್ತೀಚಿನ ಸುದ್ದಿ
ಕಾಲ್ಬೆರಳಲ್ಲೆ ಪರೀಕ್ಷೆ ಬರೆದ ಕೌಶಿಕ್ ಫರ್ಸ್ಟ್ ಕ್ಲಾಸ್ ಪಾಸ್
August 10, 2020, 11:08 AM

ಮಂಗಳೂರು (reporter Karnataka)
ಬಂಟ್ವಾಳ ತಾಲೂಕಿನ ಎಸ್.ವಿ.ಎಸ್.ಪ್ರೌಢಶಾಲೆಯ ಕೌಶಿಕ್ ಎನ್ನುವ ವಿದ್ಯಾರ್ಥಿ ಯಾರ ಸಹಾಯವಿರದೆ ಕಾಲ್ಬೆರಳಲ್ಲೆ ಹತ್ತನೆ ತರಗತಿ ಪರೀಕ್ಷೆ ಬರೆದಿದ್ದು, ಇದೀಗ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಬಂಟ್ವಾಳ ಕಂಚಿಕಾರಪೇಟೆಯ ಕೌಶಿಕ್ ಸಣ್ಣ ವಿಷಯಗಳಿಗೆಲ್ಲಾ ಆತ್ಮಹತ್ಯೆ ಮಾಡಿಕೊಳ್ಳುವ ಅಧೀರರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದು.
ರಾಜೇಶ್ ಆಚಾರ್ಯ ಮತ್ತು ಜಲಜಾಕ್ಷಿ ದಂಪತಿಯ ಪುತ್ರನಾದ ಈತ ಬಡತನದ ಜತೆಗೆ ಕೈಗಳಲ್ಲಿಯೂ ವೈಕಲ್ಯವಿದ್ದರೂ ಈ ಸಾಧನೆಯ ಮೂಲಕ ಮಾದರಿಯಾಗಿದ್ದಾನೆ.
ಹೆತ್ತವರ ಜತೆ ಅಣ್ಣ ಕಾರ್ತಿಕ್. ತಮ್ಮ ಮೋಕ್ಷಿತ್. ಪುಟ್ಟ ಮನೆಯಲ್ಲಿ ವಾಸ. ತಂದೆಗೆ ಮರಗೆಲಸ.
ಸೈಕಲ್ ನಲ್ಲೇ ಶಾಲೆಗೆ ಹೋಗುತ್ತಿದ್ದ. ಡ್ಯಾನ್ಸ್, ಆಟೋಟಗಳಲ್ಲಿ ಈತ ಶೈನಿಂಗ್ ಸ್ಟಾರ್. ಪಕ್ಕದ ನೇತ್ರಾವತಿಯಲ್ಲಿ ಈಜಲು ಈತ ಹಿಂದೇಟು ಹಾಕಿಲ್ಲ. ಅಸೀಮ ಧೈರ್ಯಶಾಲಿ ಕೌಶಿಕ್ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವ ಮೂಲಕ ಮತ್ತೆ ಸುದ್ದಿಯಾಗಿದ್ದಾನೆ. ಸಚಿವ ಎಸ್.ಸುರೇಶ್ ಕುಮಾರ್ ಕೂಡ ಇವನ ಬಗ್ಗೆ ತಮ್ಮ ಫೆಸ್ ಬುಕ್ ವಾಲ್ನಲ್ಲಿ ಮಾಹಿತಿ ಹಂಚಿಕೊಂಡಿದ್ದರು.