ಇತ್ತೀಚಿನ ಸುದ್ದಿ
ಕೊಂಕಣಿ ಮಾಧ್ಯಮದಲ್ಲಿ ಶಿಕ್ಷಣ: ಸಚಿವ ಸುರೇಶ್ ಕುಮಾರ್ ಜತೆ ಕೊಂಕಣಿ ಸಾಹಿತ್ಯ ಅಕಾಡೆಮಿ ಚರ್ಚೆ
December 14, 2020, 6:09 PM

ಬೆಂಗಳೂರು(reporterkarnataka news):
ಹೊಸ ಶಿಕ್ಷಣ ನೀತಿಯ ಪ್ರಕಾರ ಮಾತೃಭಾಷೆಯಲ್ಲೇ ಶಿಕ್ಷಣ ಇದರನ್ವಯ ಕೊಂಕಣಿ ಮಾತೃಭಾಷಿಕರಿಗಾಗಿ ಕೊಂಕಣಿ ಮಾಧ್ಯಮವನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಾರಂಭಿಸುವ ಬಗ್ಗೆ ರಾಜ್ಯ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ನಿಯೋಗ
ಚರ್ಚೆ ನಡೆಸಿತು.
ಇದಕ್ಕೆ ಸ್ಪಂದಿಸಿದ ಸಚಿವರು ಇದರ ಅನುಷ್ಟಾನಕ್ಕೆ ಬೇಕಾಗಿರುವ ನಿಯಮ ನಿಬಂಧನೆಗಳನ್ನು ಮನನ ಮಾಡಿ, ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರದ ಸಹಕಾರದೊಂದಿಗೆ ಮುಂದಿನ ದಿನಗಳಲ್ಲಿ ಈ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ನಿಯೋಗದಲ್ಲಿ ಅಕಾಡೆಮಿ ಅಧ್ಯಕ್ಷರು ಡಾ. ಜಗದೀಶ್ ಪೈ, ಸದಸ್ಯರಾದ ಅರುಣ್ ಜಿ. ಶೇಟ್, ನವೀನ ನಾಯಕ್, ಗುರುಮೂರ್ತಿ ವಿ. ಶೇಟ್, ನರಸಿಂಹ ಕಾಮತ್ ಉಪಸ್ಥಿತರಿದ್ದರು.