11:31 PM Sunday24 - January 2021
ಬ್ರೇಕಿಂಗ್ ನ್ಯೂಸ್
ಬಲ್ಯ ಸಮೀಪ ಕಾರು- ಬೊಲೆರೋ ಅಪಘಾತ:  ಒಬ್ಬ ಸಾವು, 4 ಮಂದಿ ತೀವ್ರ… ಕಾಸರಗೋಡು: ಮೆಡಿಕಲ್ ಶಾಪ್ ಗೆ ಔಷಧ ಖರೀದಿಸಲು ಬಂದ ವ್ಯಕ್ತಿಯನ್ನು ಗುಂಪೊಂದು ಥಳಿಸಿ… ಕಾಳು ಹಾಕಿ ಕೋಳಿ ಕದಿಯುವ ಭಿಕ್ಷುಕರಿದ್ದಾರೆ ಎಚ್ಚರಿಕೆ: ನಿಮ್ಮ ಮನೆಗೂ ಬಂದಾರು ಜೋಕೆ!… ವಿವಾದಾತ್ಮಕ ವಾಟ್ಸಾಪ್ ಚಾಟ್ : ಮಹಾರಾಷ್ಟ್ರ ಸರಕಾರದಿಂದ ಅರ್ನಾಬ್ ಮತ್ತೆ ಬಂಧನ ಸಾಧ್ಯತೆ ವೈರಲ್ ಆಗುತ್ತಿದೆ ಕೆ.ಎಲ್. ರಾಹುಲ್ – ಆಶಿಕಾ ರಂಗನಾಥ್ ಜೋಡಿಯ ಫೋಟೋ: ನೆಟ್ಟಿಗರಿಂದ… ಗಣರಾಜ್ಯೋತ್ಸವ ದಿನ ಬೆಂಗಳೂರಿನಲ್ಲೂ ನಡೆಯಲಿದೆ ರೈತ- ಕಾರ್ಮಿಕರ ಟ್ರ್ಯಾಕ್ಟರ್ ಪರೇಡ್  ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ನೋಡಿ ಕೆಪಿಎಸ್ ಇ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ: ಬಂಧಿತರಿಂದ 24 ಲಕ್ಷ ರೂ.… ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಡೆಯಿತೇ ರಹಸ್ಯ ಸಭೆ: ಬಿಜೆಪಿಯೊಳಗಿನ ಮುನಿಸು ತಣ್ಣಗಾಗಿಲ್ವೇ?  ಶ್ರೀನಿವಾಸಪುರ ತಾಲೂಕಿನ 25 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪ್ರಕಟ: ವಿವರಕ್ಕೆ ನೀವೇ…

ಇತ್ತೀಚಿನ ಸುದ್ದಿ

ಕೊನೆಗೂ ಅರಣ್ಯ ಇಲಾಖೆ ಬೋನಿಗೆ ಬಿದ್ದ ಕರಡಿ: ನಿಟ್ಟುಸಿರು ಬಿಟ್ಟ ಮುದ್ಗಲ್ ಗ್ರಾಮಸ್ಥರು

December 12, 2020, 9:53 AM

ಅಮರೇಶ್ ಜಿ.

info.reporterkarnataka@gmail.com

ಲಿಂಗಸುಗೂರು(reporterkarnataka news):

ಲಿಂಗಸುಗೂರು ತಾಲೂಕಿನ ಮುದ್ಗಲ್ ಹೊಬಳಿ ಪಿಕಳಿಹಾಳ ಗುಡ್ಡದಲ್ಲಿ ಕರಡಿ ಕಾಣಿಸಿಕೊಂಡಿದ್ದು,

ಜನರು ಭಯಭೀತರಾಗಿದ್ದರು. ಇದೀಗ ಅರಣ್ಯ ಇಲಾಖೆ ಬೋನು ಇಟ್ಟು ಕರಡಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪಿಕಳಿಹಾಳ ಗುಡ್ಡದಲ್ಲಿ ಹಲವು ದಿನಗಳಿಂದ 

ಕರಡಿ ಕಂಡ ಗ್ರಾಮಸ್ಥರು ಭಯಭೀತರಾಗಿದ್ದರು. ಓಡಾಟಕ್ಕೆ ಹೆದರಿದ ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದರು. ತಕ್ಷಣ ಸ್ಪಂದಿಸಿದ ಅರಣ್ಯ ಅಧಿಕಾರಿಗಳು ಗುಡ್ಡಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕರಡಿ ಬರುವುದನ್ನು

ಖಚಿತಪಡಿಸಿಕೊಂಡ ಅರಣ್ಯ ಇಲಾಖೆಯ ಅಧಿಕಾರಿಗಳು ಕರಡಿಯ ಸೆರೆಗೆ ಬೋನ್ ಇಟ್ಟರು.

ಶುಕ್ರವಾರ ಬೆಳಗ್ಗೆ 7 ಗಂಟೆಗೆ ಬೋನಿಗೆ ಬಿದ್ದ ಕರಡಿಯನ್ನು ಲಿಂಗಸುಗೂರು ಕಾರ್ಯಾಲಯಕ್ಕೆ ತಂದು ಪಶು ವೈದ್ಯಾಧಿಕಾರಿಯಿಂದ  ತಪಾಸಣೆ ಮಾಡಿದ ನಂತರ ಕರಡಿಯನ್ನು ಹೊಸಪೇಟೆ

ಸಮೀಪದ ಕರಡಿ ಧಾಮಕ್ಕೆ ಕಳಿಹಿಸಿ ಕೊಡಲಾಯಿತು. ಗ್ರಾಮದ ಜನರು ಇದೀಗ ನಿಟ್ಟುಸಿರು ಬಿಟ್ಟಿದ್ದಾರೆ.

ಈ  ಸಂದರ್ಭದಲ್ಲಿ ವಲಯ ಅಧಿಕಾರಿಗಳು ಲಿಂಗಸುಗೂರು ಚನ್ನಬಸವರಾಜ್ ಕಟ್ಟಿಮನಿ, ಉಪವಲಯ ಅರಣ್ಯ ಅಧಿಕಾರಿಗಳಾದ ಮುದಗಲ್ ಹುಸೇನಬಾಷ್, ಹುಲ್ಲಗಪ್ಪ ಹುಚ್ಚಪ್ಪ  ಇನ್ನಿತರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು