5:05 PM Thursday22 - October 2020
ಬ್ರೇಕಿಂಗ್ ನ್ಯೂಸ್
ನಳಿನ್ ಮಂಗಳೂರಿನಲ್ಲಿ ಬೀದಿ ಅಲೆಯುತ್ತಿದ್ದ ಪೋಕರಿ: ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿ ಮಂಗಳೂರು ವೆಂಕಟರಮಣ ದೇಗುಲದ ಶಾರದೆಗೆ ಮಹಾಲಕ್ಷ್ಮಿ ಅಲಂಕಾರ ಬಿಹಾರ ಚುನಾವಣೆ: ಬಿಜೆಪಿ ಪ್ರಣಾಳಿಕೆ ಬಿಡುಗಡೆ; ಭರಪೂರ ಭರವಸೆ ಹುಲಿಯ ಹಲ್ಲು ವಶ: ನಾಲ್ವರು ಆರೋಪಿಗಳ ಬಂಧನ ಆಕ್ಸ್ ಫರ್ಡ್ ಲಸಿಕೆ  ಪ್ರಯೋಗದ ವೇಳೆ ದುರಂತ: ಬ್ರೆಜಿಲ್ ನಲ್ಲಿ ಓರ್ವ ಬಲಿ ಸಜೀಪನಡು ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶರನ್ನವರಾತ್ರಿ ಪೂಜೋತ್ಸವ ಇಂದು ಶಿರಾದಲ್ಲಿ ಬಿಜೆಪಿಯಿಂದ ಸಂಸದ ತೇಜಸ್ವಿ ಸೂರ್ಯ ಚುನಾವಣಾ ಪ್ರಚಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಹುಟ್ಟು ಹಬ್ಬದ ಸಂಭ್ರಮ ಟಿಆರ್ ಪಿ ಹಗರಣ: ಇಂದು ರಿಪಬ್ಲಿಕನ್ ಪ್ರಿಯಾ ಮುಖರ್ಜಿ ವಿಚಾರಣೆ ಪಚ್ಚನಾಡಿ ತ್ಯಾಜ್ಯ ದುರಂತ: ವರ್ಷದ ಬಳಿಕ  ರಾಜ್ಯ ಸರಕಾರದಿಂದ 14 ಕೋಟಿ ಪರಿಹಾರ…

ಇತ್ತೀಚಿನ ಸುದ್ದಿ

ಕೊಂಚಾಡಿ ಕಾಶಿ ಮಠದಲ್ಲಿ ಅಧಿಕ ಮಾಸ ಪ್ರಯುಕ್ತ ವಿಶೇಷ ಯಾಗ- ಯಜ್ಞಗಳು

September 19, 2020, 9:04 PM

ಮಂಗಳೂರು(reporterkarnataka news) :

ಚಿತ್ರಗಳು : ಮಂಜು ನೀರೇಶ್ವಾಲ್ಯ

ಕೊಂಚಾಡಿಯಲ್ಲಿರುವ ಕಾಶಿ ಮಠದಲ್ಲಿ ಮೊಕ್ಕಾಂ ಮಾಡಿರುವ ಕಾಶಿ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಆದೇಶ ಪ್ರಕಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು , ಯಜ್ಞ ಹವನಾದಿಗಳನ್ನು ಅಧಿಕ ಮಾಸ ಪ್ರಯುಕ್ತ

ಆಯೋಜಿಸಲಾಯಿತು.

ಮಹಾಭಾರತ ವನಪರ್ವ , ಸುಮಧ್ವ ವಿಜಯ ಪಾರಾಯಣ , ಪ್ರವಚನ , ನರಸಿಂಹ ಪುರಾಣ ಪಾರಾಯಣ , ವಾಯು ಸ್ತುತಿ , ನರಸಿಂಹ ಸ್ತುತಿ , ಮನ್ಯು ಸೂಕ್ತ ಹವನ , ಹರಿವಂಶ ಪಾರಾಯಣ , ಸಂತಾನ ಗೋಪಾಲ ಹವನ , ಶತಚಂಡಿ ಮಹಾ ಯಾಗ , ಇಂತಹ ಅನೇಕ ವಿಶೇಷ ಕಾರ್ಯಕ್ರಮಗಳನ್ನು ನಡೆಸಲಾಯಿತು.

ಅಧಿಕಮಾಸದ ಪ್ರಥಮ ದಿನವಾದ ಶುಕ್ರವಾರ ಶ್ರೀ ದೇವಳದ ಯಜ್ಞ ಮಂಟಪದಲ್ಲಿ ಋಗ್ ಸಂಹಿತಾ ಯಾಗವು ಪ್ರಾರಂಭಗೊಂಡು ಶ್ರೀಗಳವರ ಅಮೃತ ಹಸ್ತಗಳಿಂದ ಯಜ್ಞ ಮಂಟಪದಲ್ಲಿ ದೀಪ ಪ್ರಜ್ವಲನೆಯ ಮುಖಾಂತರ ವಿಧ್ಯುಕ್ತವಾಗಿ ಯಜ್ಞವು ಪ್ರಾರಂಭಗೊಂಡಿತು . ಬಳಿಕ ವಿವಿಧ ಗೋತ್ರೆಯ ವೈದಿಕರಿಂದ ಯಜ್ಞ ಪ್ರಾರಂಭವಾಯಿತು. ಈ ಯಾಗವು ಏಳು ದಿನಗಳ ಪರ್ಯಂತ ನಡೆಯಲಿದ್ದು ಕೊನೆಯ ದಿನದಂದು ಶ್ರೀಗಳವರ ದಿವ್ಯಹಸ್ತಗಳಿಂದ ಮಹಾ ಪೂರ್ಣ ಹುತಿ ನಡೆಯಲಿರುವುದು . 

ಇತ್ತೀಚಿನ ಸುದ್ದಿ

ಜಾಹೀರಾತು