3:09 PM Friday26 - February 2021
ಬ್ರೇಕಿಂಗ್ ನ್ಯೂಸ್
ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ನೋಡಿ ಎಸ್ಸೆಸ್ಸೆಲ್ಸಿ ಸ್ಟೇಟ್ ಸಿಲೆಬಸ್ ವಿದ್ಯಾರ್ಥಿಗಳಿಗೆ 3 ತಿಂಗಳ ಕ್ರ್ಯಾಶ್ ಕೋರ್ಸ್: ಶ್ಲಾಘ್ಯದಲ್ಲಿ ಅಡ್ಮಿಷನ್ ಆರಂಭ ಸಿದ್ದರಾಮಯ್ಯರಿಗೆ ತಲೆ ಸರಿ ಇಲ್ಲ, ವಕೀಲ ಅಂತ ಹೇಳಿಕೊಳ್ಳಲು ನಾಚಿಗೆಯಾಗಬೇಕು: ಈಶ್ವರಪ್ಪ ಅಡುಗೆ ಅನಿಲ ಸಿಲಿಂಡರ್ ಬೆಲೆ ಮತ್ತೆ ಹೆಚ್ಚಳ: ಒಂದೇ ತಿಂಗಳಲ್ಲಿ 3ನೇ ಬಾರಿ… ಇಂಧನ ಬೆಲೆಯೇರಿಕೆ, ಇ- ವೇ ಬಿಲ್ ಖಂಡಿಸಿ ನಾಳೆ ಭಾರತ ಬಂದ್ :… ಶ್ರೀನಿವಾಸಪುರ: ರಾಷ್ಟ್ರೀಯ ಶ್ರವಣ ದೋಷ ನಿಯಂತ್ರಣ ಮತ್ತು ನಿರ್ಮೂಲನೆ ಕಾರ್ಯಕ್ರಮ ರೋವರ್ ನಿಂದ ಮಂಗಳನ ಮಣ್ಣು ಹಾಗೂ ಕಲ್ಲಿನ  ಸ್ಯಾಂಪಲ್ ಸಂಗ್ರಹ: ಹಾಗಾದರೆ ಅದನ್ನು… ಕಟೀಲು ಮೇಳ ಸೇವೆ ಆಟಗಳು: ಎಲ್ಲಿ ಏನೇನು? ನೀವೇ ಓದಿ ನೋಡಿ ತಂಬಾಕು ಜಾಗೃತಿ ಮೂಡಿಸಲು ‘ಗುಲಾಬಿ ಅಭಿಯಾನ’:  ಬೆಳುವಾಯಿ ಶಾಲಾ ಮಕ್ಕಳಿಂದ ಜಾಥಾ ಪೇಜಾವರ ಶ್ರೀಗಳಿಗೆ ಗುರು ವಂದನೆ: ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ 1 ಕೋಟಿ…

ಇತ್ತೀಚಿನ ಸುದ್ದಿ

ಕೊಂಚಾಡಿ ಕಾಶೀ ಮಠದಲ್ಲಿ ದಶಮ ಸ್ಕಂದ ಹವನ

September 1, 2020, 2:04 AM

ಚಿತ್ರ : ಮಂಜು ನೀರೇಶ್ವಾಲ್ಯ

ಮಂಗಳೂರು(reporterkarnataka news) : ಕೊಂಚಾಡಿ ಶ್ರೀ ಕಾಶೀ  ಮಠದಲ್ಲಿ ಭಾಗವತಾಂತರ್ಗತ  ದಶಮಸ್ಕಂದ ಹವನ ನಡೆದಿದ್ದು ಸೋಮವಾರ ಶ್ರೀ ಸಂಸ್ಥಾನದ  ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ  ತೀರ್ಥ ಸ್ವಾಮೀಜಿಯವರ ದಿವ್ಯ ಹಸ್ತಗಳಿಂದ ಮಹಾ ಪೂರ್ಣಾಹುತಿ ಜರುಗಿತು.

ಗೌಡ ಸಾರಸ್ವತ ಸಮಾಜದ ಪರಮ ಪೂಜ್ಯ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ  ತೀರ್ಥ ಸ್ವಾಮೀಜಿಯವರ ಚಾತುರ್ಮಾಸ ವ್ರತವು  ಸೆಪ್ಟೆಂಬರ್ 2ರಂದು ಸಮಾಪನಗೊಳ್ಳಲಿರುವುದು. ಈ ಪ್ರಯುಕ್ತ  ಶ್ರೀಗಳವರ ಚಾತುರ್ಮಾಸ ವ್ರತದ ಸೀಮೋಲಂಘನ ಕಾರ್ಯಕ್ರಮ ನಡೆಯಲಿದೆ.

ಶ್ರೀಗಳವರ  ಸೀಮೋಲಂಘನ ಕಾರ್ಯಕ್ರಮ ಪ್ರಯುಕ್ತ  ಶ್ರೀಗಳವರು ಸಂಜೆ 5.30ಕ್ಕೆ ಶ್ರೀ ವೆಂಕರಮಣ  ದೇವಳಕ್ಕೆ ಭೇಟಿ ನೀಡಿ ವೀರ ವೆಂಕಟೇಶ ದೇವರ ದರ್ಶನ ಪಡೆಯಲಿದ್ದಾರೆ.

ಬಳಿಕ ಸಮಸ್ತ  ಸಮಾಜ ದ ಪರವಾಗಿ ಶ್ರೀ ದೇವಳದ  ಆಡಳಿತ ಮಂಡಳಿ ಯವರಿಂದ ಶ್ರೀ ಗಳವರ  ಪಾದ ಪೂಜೆ ನೆರವೇರಲಿದೆ . ಬಳಿಕ ದೇವಳದಲ್ಲಿ  ಶ್ರೀಗಳವರಿಂದ ಆಶೀರ್ವಚನ ಕಾರ್ಯಕ್ರಮ ನಡೆಯಲಿರುವುದು.

ಕೊರೊನಾ ಮಹಾಮಾರಿಯನ್ನು ತಡೆಗಟ್ಟು ವ ಹಿನ್ನೆಲೆಯಲ್ಲಿ ಸರಕಾರದ  ಆದೇಶ ಹಾಗೂ ನಿಯಮ ಪ್ರಕಾರ ದೇವಳದ ಒಳಗಡೆ 50 ಜನರಿಗಿಂತ ಹೆಚ್ಚು ಜನರು   ಪಾಲ್ಗೊಳ್ಳುವ ಅವಕಾಶ  ಇಲ್ಲದಿರುವುದರಿಂದ ದೇವಳದ ಆಡಳಿತ ಮಂಡಳಿ ಮತ್ತು ಅರ್ಚಕ ರಿಗೆ ಹಾಗೂ ವಿಶೇಷ ಆಹ್ವಾನಿತರಿಗೆ ಮಾತ್ರ ದೇವಳದ ಒಳಗಡೆ ಪ್ರವೇಶಿಸುವ ಅವಕಾಶ ಕಲ್ಪಿಸಲಾಗುವುದು.

….

ಚಿತ್ರ : ಮಂಜು ನೀರೇಶ್ವಾಲ್ಯ

ಇತ್ತೀಚಿನ ಸುದ್ದಿ

ಜಾಹೀರಾತು