12:09 AM Wednesday21 - October 2020
ಬ್ರೇಕಿಂಗ್ ನ್ಯೂಸ್

ಇತ್ತೀಚಿನ ಸುದ್ದಿ

ಕೊಂಚಾಡಿ ಕಾಶೀ ಮಠದಲ್ಲಿ ಲೋಕ ಕಲ್ಯಾಣಾರ್ಥ ಶತಚಂಡಿ ಯಾಗ: 16ರಂದು ಪೂರ್ಣಾಹುತಿ        

October 12, 2020, 6:21 PM

ಮಂಗಳೂರು(reporterkarnataka news) : ನಗರದ ಕೊಂಚಾಡಿ ಕ್ಷೇತ್ರದ ಕೊಂಚಾಡಿ  ಕಾಶೀ ಮಠದಲ್ಲಿ ಲೋಕ ಕಲ್ಯಾಣಾರ್ಥ ಶತಚಂಡಿ ಯಾಗ  ಅಕ್ಟೋಬರ್ 12ರಂದು ಆರಂಭಗೊಂಡಿದ್ದು, 16ರ ನೆರವೇರಲಿದೆ .                      

ಇಡೀ ಪ್ರಪಂಚಕ್ಕೆ ತಗಲಿರುವ ಮಹಾಮಾರಿಯು ಅತ್ಯಂತ ಬೇಗನೆ ತೊಲಗಲಿ , ಆಸ್ತಿಕ ಬಾಂಧವರಲ್ಲಿ ಕಂಡು ಬಂದ ಭಯ ಹಾಗೂ ಆತಂಕ ನಿವಾರಣೆಗಾಗಿ , ಜನರ ಆರ್ಥಿಕ ಪರಿಸ್ಥಿತಿ ಸುಧಾರಣೆಗಾಗಿ ಹಾಗೂ ಎಲ್ಲಾ ರೀತಿಯ ತೊಂದರೆಗಳ ನಿವಾರಣೆಗಾಗಿ ನಮ್ಮೆಲ್ಲರ ಜಗನ್ಮಾತೆ ಮಹಾಲಕ್ಷ್ಮಿ ದೇವಿಯ ಪ್ರೀತ್ಯರ್ಥ ಶತ ಚಂಡಿಕಾ ಹವನ ನಡೆಯಲಿರುವುದು . 

ದೇವಿ ಉಪಾಸನೆಯ ಪ್ರಮುಖ ಭಾಗವೇ ದುರ್ಗಾಸಪ್ತಶತಿ ಪಾರಾಯಣ ದುರ್ಗಾಸಪ್ತಶತಿಯಲ್ಲಿ 700 ಶ್ಲೋಕಗಳಿವೆ. ಪ್ರತಿಯೊಂದು ಶ್ಲೋಕವನ್ನು ಮಂತ್ರರೂಪಕವಾಗಿ ಚರುವಿನ ಮೂಲಕ ಮಾಡುವ ಯಜ್ಞವೇ ಚಂಡಿಕಾಯಾಗ. ಚಂಡಿಕಾಯಾಗದ ಮೂಲಕ ಮಹಾಲಕ್ಷ್ಮಿ, ಮಹಾಸರಸ್ವತಿ ಮತ್ತು ಮಹಾದುರ್ಗಿಯರನ್ನು ಸ್ತೋತ್ರಭಾಗದಿಂದ ಆರಾಧಿಸಲಾಗುತ್ತದೆ.  ಲೋಕ ಪಾವನಿಯಾಗಿ, ಲೋಕ ಕಲ್ಯಾಣವನ್ನು ಮಾಡುತ್ತಾಳೆ.ನಕಾರಾತ್ಮಕ ಅಂಶಗಳು ನಕಾರಾತ್ಮಕ ಅಂಶಗಳು ಮರೆಯಾಗಿ ಸಕಾರಾತ್ಮಕ ಚಿಂತನೆ, ಶಕ್ತಿ ಉಂಟಾಗುತ್ತದೆ. ಮರೆಯಾಗಿ ಸಕಾರಾತ್ಮಕ ಚಿಂತನೆ, ಶಕ್ತಿ ಉಂಟಾಗುತ್ತದೆ.

ಈ ಪ್ರಯುಕ್ತ ಅಧಿಕ ಆಶ್ವೀಜ  ಮಾಸದ ಬಹುಳ ದ್ವಾದಶಿ ತಾ-12-10-2020 ಸೋಮವಾರ ದಿಂದ ಅಮಾವಾಸ್ಯೆ 16-10-2020 ಶುಕ್ರವಾರದ ಪರ್ಯಂತ ಕೊಂಚಾಡಿ ಶಾಖಾ ಮಠದಲ್ಲಿ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಹಾಗು ಮಾರ್ಗದರ್ಶನದಲ್ಲಿ ಲೋಕ ಕಲ್ಯಾಣಾರ್ಥ ಶತಚಂಡಿ ಯಾಗ ವು ನಡೆಯಲಿರುವುದು.

ಶತ ಚಂಡಿಕಾ ಯಾಗದ ಪ್ರಥಮ ದಿನದಂದು ಇಂದು ಶ್ರೀ ಸಂಸ್ಥಾನದ ಆರಾಧ್ಯ ದೇವರಾದ ಶ್ರೀ ವ್ಯಾಸರಘುಪತಿ ನರಸಿಂಹ ದೇವರ ಸನ್ನಿಧಾನದಲ್ಲಿ ಶ್ರೀಗಳವರ ದಿವ್ಯ ಉಪಸ್ಥಿತಿಯಲ್ಲಿ ಮಹಾ ಪ್ರಾರ್ಥನೆ ನಡೆಯಿತು ಬಳಿಕ ವಿವಿಧ ಗೋತ್ರೆಯ ವೈಧಿಕರಿಗೆ ರತ್ವಿಜಾವರಣ ತದನಂತರ ದುರ್ಗಾಸಪ್ತಶತಿ ಪಾರಾಯಣ ವೈಧಿಕರಿಂದ  ನಡೆಯಿತು.   

ಈ ಯಾಗದಲ್ಲಿ ಚಂಡಿಕಾ ಪಾರಾಯಣ , ಪುಷ್ಪಾಅಂಜಲಿ, ಕುಂಕುಮಾರ್ಚನೆ  , ಮಹಾ ಪೂರ್ಣಾಹುತಿ ಸಾಹಿತ್ಯ  ( ಸುಹಾಸಿನಿ ) ಕುಮಾರಿ ಪೂಜೆ ಸಮರ್ಪಣೆ ಮಾಡಲಿಚ್ಚಿಸುವವರು ಶ್ರೀ ದೇವಸ್ತಾನದ ಆಫೀಸಿನಲ್ಲಿ ತಿಳಿಸ ಬೇಕಾಗಿ ಕೋರಲಾಗಿದೆ .  ಎಂದು ಕೊಂಚಾಡಿ ಕಾಶಿ ಮಠದ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷರಾದ ಡಿ . ವಾಸುದೇವ ಕಾಮತ್ ಹಾಗೂ ಕಸ್ತೂರಿ ಸದಾಶಿವ ಪೈ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು