6:43 AM Saturday23 - January 2021
ಬ್ರೇಕಿಂಗ್ ನ್ಯೂಸ್
ಕಾಳ ಸಂತೆಯಲ್ಲಿ ಆಹಾರ ದಾಸ್ತಾನು ಹೆಚ್ಚಾಗುವ ಭೀತಿಯಿದೆ: ಮಾಜಿ ಸಚಿವ ಯು.ಟಿ ಖಾದರ್ ಅರ್ನಾಬ್ ಗೋಸ್ವಾಮಿ ವಾಟ್ಸಾಪ್ ಚಾಟ್ ಬಗ್ಗೆ ಕೇಂದ್ರ ಯಾಕೆ ಮಾತನಾಡುತ್ತಿಲ್ಲ: ಸೋನಿಯಾ ಪ್ರಶ್ನೆ  ಒತ್ತಡ ರಾಜಕೀಯಕ್ಕೆ ಮಣಿದು ಖಾತೆ ಮರು ಹಂಚಿಕೆ  ಮಾಡಿದ ಮುಖ್ಯಮಂತ್ರಿ ಬಿಎಸ್ ವೈ ಶಿವಮೊಗ್ಗದಲ್ಲಿ ನಡೆದದ್ದು ಭೂ ಕಂಪನವಲ್ಲ, ರೈಲ್ವೆ ಕ್ರಷರ್ ಸ್ಫೋಟ: 10ಕ್ಕೂ ಅಧಿಕ ಸಾವು… ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನವನ ಇಂದು ಸುಬ್ರಹ್ಮಣ್ಯದಲ್ಲಿ ಉದ್ಘಾಟನೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಇಂದು ರಾಜ್ಯ ಧಾರ್ಮಿಕ ಪರಿಷತ್ ವಿಶೇಷ… ಶಿವಮೊಗ್ಗ, ಭದ್ರಾವತಿ, ಚಿಕ್ಕಮಗಳೂರಿನಲ್ಲಿ ಭೂ ಕಂಪನದ ಅನುಭವ: ಮನೆಯಿಂದ ಬೀದಿಗೆ ಓಡಿದ ಜನರು ಮಂಗಳೂರಿನಲ್ಲಿ  ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ 5ನೇ ಪುಣ್ಯತಿಥಿ ಆಚರಣೆ ಮಡಿಕೇರಿ ತಾಲೂಕು ಅಕ್ರಮ- ಸಕ್ರಮ ಸಮಿತಿ ಸಭೆಯಲ್ಲಿ ಹಲವು ಅರ್ಜಿಗಳ ವಿಲೇವಾರಿ  … ನಟಿ ರಾಗಿಣಿ ದ್ವಿವೇದಿಗೆ ಕೊನೆಗೂ ಸಿಕ್ಕಿತು ಜಾಮೀನು: 140 ದಿನಗಳ ಬಳಿಕ ಬಿಡುಗಡೆ…

ಇತ್ತೀಚಿನ ಸುದ್ದಿ

ಕೋಲಾರ: ಮೊಬೈಲ್ ತಯಾರಿಕೆಯ ವಿಸ್ಟಾನ್ ಕಂಪನಿಗೆ ಗೌರವ್ ಗುಪ್ತಾ ನೇತೃತ್ವದ ನಿಯೋಗ ಭೇಟಿ

November 24, 2020, 8:22 PM

ಕೋಲಾರ(reporterkarnataka news) :

ಕರ್ನಾಟಕ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ನಿಯೋಗ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಮೆ : Wistron Infocomm Manufacturing India Pvt Ltd ಕಂಪನುಗೆ ಭೇಟಿ ನೀಡಿ ಕಂಪನಿಯ ಉಪಾಧ್ಯಕ್ಷ ವಿನ್ಸೆಂಟ್ ಲೀ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಸುದಿಪ್ಲೋ ಗುಪ್ತ  ಅವರನ್ನು ಭೇಟಿ ಮಾಡಿ ಚರ್ಚಿಸಿತು.

ಕಂಪನಿಯು ಕೆಐಎಡಿಬಿ ಹಂಚಿಕೆ ಮಾಡಿರುವ 49 ಎಕರೆ ಜಮೀನಿನಲ್ಲಿ ಮೊಬೈಲ್ ಫೋನುಗಳ ತಯಾರಿಕೆಯ ಘಟಕವನ್ನು ಪ್ರಾರಂಭಿಸಿರುತ್ತದೆ .

ಘಟಕವು ಪ್ರಸ್ತುತ ಸುಮಾರು 10,000 ಜನರಿಗೆ ಉದ್ಯೋಗವನ್ನು ಒದಗಿಸಿರುತ್ತದೆ . ಘಟಕವು ಕೋಲಾರ ಜಿಲ್ಲೆಯಲ್ಲಿ ತನ್ನ ವಿವಿಧ ಉತ್ಪನ್ನಗಳ ಚಟುವಟಿಕೆಗಳನ್ನು ವಿಸ್ತರಿಸಲು ಯೋಜಿಸುತ್ತಿದ್ದು , ನರಸಾಪುರ ಕೈಗಾರಿಕಾ ಪ್ರದೇಶದ ಮಿಂಡಹಳ್ಳಿ ಗ್ರಾಮದ ಬಳಿ 2 ನೇ ಹಂತದಲ್ಲಿ ಸುಮಾರು 100 ಎಕರೆ ಜಮೀನನ್ನು ಹಂಚಿಕೆ ಮಾಡಲು ಬೇಡಿಕೆ ಇಟ್ಟಿರುತ್ತದೆ . ಉನ್ನತ ಮಟ್ಟದ ಅಧಿಕಾರಿಗಳ ತಂಡವು ಮಿಂಡಹಳ್ಳಿಯಲ್ಲಿ ಹೊಸದಾಗಿ ಸ್ವಾಧೀನ ಪಡಿಸಿಕೊಂಡಿರುವ ಭೂಮಿಯನ್ನು ಪರಿಶೀಲಿಸಿತು. ಗೌರವ್ ಗುಪ್ತ ರವರು ಸರ್ಕಾರದಿಂದ ನೀಡಬೇಕಾಗಿರುವ ಅನುಮೋದನೆಗಳು & ಸೌಲಭ್ಯಗಳನ್ನು ತ್ವರಿತಗತಿಯಲ್ಲಿ ನೀಡುವ ಭರವಸೆ ನೀಡಿದರು ಹಾಗೂ ಮೆ : ವಿಸ್ಟಾನ್ ಕಂಪನಿ ಹಾಗೂ ಅದರ ಬಿಡಿ ಭಾಗಗಳ ತಯಾರಕರು ಕೋಲಾರ ಜಿಲ್ಲೆಯಲ್ಲಿ ತಮ್ಮ ಬಂಡವಾಳ ಹೂಡಿಕೆ ಮಾಡಿ ಘಟಕಗಳನ್ನು ಪ್ರಾರಂಭಿಸಬೇಕೆಂದು ಮನವಿಗೆ ಸ್ಪಂದಿಸಿದ ವಿಸ್ಪ್ಯಾನ್ ಕಂಪನಿಯು ತೈವಾನ್ ದೇಶದಿಂದ ಹಲವಾರು ಕಂಪನಿಗಳನ್ನು ಕೋಲಾರಕ್ಕೆ ಕರೆತರುವುದಾಗಿ ಭರವಸೆ ನೀಡಿದರು . ಇದೇ ಸಂದರ್ಭದಲ್ಲಿ ಕೈಗಾರಿಕಾಭಿವೃದ್ಧಿ ಆಯುಕ್ತರಾದ ಗುಂಜನ್ ಕೃಷ್ಣ , ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು , ಕೆಐಎಡಿಬಿ ಶಿವಶಂಕರ್ , ಜಿಲ್ಲಾಧಿಕಾರಿಗಳು ಸಿ . ಸತ್ಯಭಾಮ ಸೇರಿದಂತೆ ಕೈಗಾರಿಕೆ ಇಲಾಖೆ , ಕೆಐಎಡಿಬಿ ಮತ್ತು ಕಂದಾಯ ಇಲಾಖೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು .

ಇತ್ತೀಚಿನ ಸುದ್ದಿ

ಜಾಹೀರಾತು