ಇತ್ತೀಚಿನ ಸುದ್ದಿ
ಕೋಲಾರ ಐ ಫೋನ್ ಕಂಪನಿ ಕಾರ್ಮಿಕರ ಮೇಲೆ ಲ್ಯಾಪ್ ಟಾಪ್, ಫೋನ್ ಬಿಡಿ ಭಾಗ ಕದ್ದ ಆರೋಪ
December 13, 2020, 9:51 AM

ಕೋಲಾರ(reporterkarnataka news): ಕಾರ್ಮಿಕರ ದಾಂಧಲೆಯಿಂದ ಇಲ್ಲಿನ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ದೇಶದ ಮೊದಲ ಐಫೋನ್ ಕಂಪನಿಗೆ 50 ಕೋಟಿಗೂ ಹೆಚ್ಚು ಹಾನಿಯಾಗಿದ್ದು, ಘಟನೆಯಲ್ಲಿ ಅಪಾರ ಪ್ರಮಾಣದ ವಸ್ತುಗಳು ಕಳುವಾಗಿದೆ ಎನ್ನಲಾಗಿದೆ, ಆಪಲ್ ಲ್ಯಾಪ್ಟಾಪ್, ಫೊನ್ ಬಿಡಿಭಾಗಗಳನ್ನ ಕಾಮಿರ್ಕರು ಕದ್ದಿರುವ ಆರೊಫವು ಕೇಳಿಬಂದಿದೆ ಎಂದು ಐಜಿಪಿ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.
ಕಂಪನಿಯ ಎರಡು ಮಹಡಿಯಲ್ಲಿ ಸಂಫೂರ್ಣವಾಗಿ ಗಾಜುಗಳು ಹಾಗೂ ಯಂತ್ರಗಳು ನಜ್ಜು ಗುಜ್ಜಾಗಿದ್ದು, ಒಟ್ಟು ನಷ್ಟ 50 ಕೋಟಿಗೂ ಅಧಿಕ ಎಂದು ಅಂದಾಜಿಸಲಾಗಿದೆ ಎಂದು ಮಾಧ್ಯಮ ಜತೆ ಮಾತನಾಡಿದ ಅವರು ತಿಳಿಸಿದರು.
ಒಟ್ಟಿನಲ್ಲಿ ಕಾರ್ಮಿಕರ ಆಕ್ರೋಶದ ಕಟ್ಟೆ ಒಡೆದ ಪರಿಣಾಮ ದಾಂಧಲೆ ಸೃಷ್ಟಿಯಾಗಿದ್ದು, ಇಷ್ಟಕ್ಕೆಲ್ಲಾ ಐ ಫೋನ್ ಬಿಡಿಭಾಗಗಳ ತಯಾರಿಸುತ್ತಿರುವ ವಿಸ್ಟ್ರಾನ್ ಕಂಪನಿಯೊಂದಿಗೆ ಗುತ್ತಿಗೆ ಪಡೆದಿರುವ ಗುತ್ತಿಗೆದಾರರು ಹಾಗೂ ಮಾನವ ಸಂಪನ್ಮೂಲ ವಿಭಾಗದ ವೀರಭದ್ರಯ್ಯ ಕಾರಣವೆಂದು ಆರೋಪಗಳು ಕೇಳಿ ಬಂದಿದೆ.