ಇತ್ತೀಚಿನ ಸುದ್ದಿ
ಕೋಲಾರ ಐ ಫೋನ್ ಕಂಪನಿಯಲ್ಲಿ ಕಾರ್ಮಿಕರ ದಾಂಧಲೆ: ಎಚ್ ಆರ್ ವಿಭಾಗದ ನಿರ್ಲಕ್ಷ್ಯವೇ ಕಾರಣ?
December 13, 2020, 10:20 AM

ಕೋಲಾರ(reporterkarnataka news): ಹಲವು ದಿನಗಳಿಂದ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದರೂ ಐ ಫೋನ್ ಬಿಡಿಭಾಗಗಳ ತಯಾರಿಸುತ್ತಿರುವ ವಿಸ್ಟ್ರಾನ್ ಕಂಪನಿಯ
ಆಡಳಿತ ವಿಭಾಗ ಗಂಭೀರವಾಗಿ ಪರಿಗಣಿಸದಿರುವುದು ಮತ್ತು ಪೊಲೀಸರಿಗೆ ಕಾಟಾಚಾರಕ್ಕಷ್ಟೇ ಮಾಹಿತಿ ನೀಡಿರುವುದು
ಹಿಂಸಾಚಾರ ಮತ್ತು ಪರಿಸ್ಥಿತಿ ವಿಷಮತೆಗೆ ತಿರುಗಲು ಕಾರಣ ಎನ್ನಲಾಗಿದೆ.
ವಿಸ್ಟ್ರಾನ್ ಕಂಪನಿಯೊಂದಿಗೆ ಗುತ್ತಿಗೆ ಪಡೆದಿರುವ ಗುತ್ತಿಗೆದಾರರು ಹಾಗೂ ಮಾನವ ಸಂಪನ್ಮೂಲ ವಿಭಾಗದ ವೀರಭದ್ರಯ್ಯ ಅವರ
ನಿರ್ಲಕ್ಷ್ಯ ಮನೋಭಾವ ಇಷ್ಟೆಲ್ಲ ಅನಾಹುತಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಆಡಳಿತ ವಿಭಾಗದ ನಿರ್ಲಕ್ಷ್ಯ ದಿಂದ ರೊಚ್ಚಿಗೆದ್ದ ಕಾರ್ಮಿಕರು ಸಿಕ್ಕ ಸಿಕ್ಕ ಕಡೆಯಲ್ಲೆಲ್ಲಾ ಕಂಪನಿಯೊಳಕ್ಕೆ ನುಗ್ಗಿ ಗಾಜುಗಳನ್ನ ಒಡೆದು ಪುಡಿ ಪುಡಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಪ್ರತಿಭಟನೆಯ ಮಾಹಿತಿ ಇದ್ದರೂ ಪೊಲೀಸ್ ಇಲಾಖೆಗೆ ಕಾಟಾಚಾರಕ್ಕೆ ಮಾತ್ರ ತಿಳಿಸಲಾಗಿದೆ ಎಂದು ಹೇಳಲಾಗಿದೆ. ನೌಕರರ ಸಮಸ್ಯೆಯನ್ನು ಆಲಿಸದೆ ನಿರ್ಲಕ್ಷ್ಯ ವಹಿಸಿದೇ ಇಂತಹ ಧಾಂಧಲೆಗೆ ಕಾರಣವೆಂಬುದು ಸ್ಪಷ್ಟವಾಗಿದೆ.