ಇತ್ತೀಚಿನ ಸುದ್ದಿ
ಕೊಹ್ಲಿಗಿಂತ ರೋಹಿತ್ ಶರ್ಮಾ ಉತ್ತಮ ನಾಯಕ:ಕ್ರಿಕೆಟಿಗ ಪಾರ್ಥಿವ್ ಪಟೇಲ್
November 25, 2020, 2:11 PM

ಮುಂಬೈ(reporterkarnataka news): ಭಾರತ ಕ್ರಿಕೆಟ್ ತಂಡವನ್ನು ಮುನ್ನೆಡೆಸಲು ವಿರಾಟ್ ಕೊಹ್ಲಿಗಿಂತ ರೋಹಿತ್ ಶರ್ಮಾ ಹೆಚ್ಚು ಸಮರ್ಥರಾಗಿದ್ದಾರೆ ಎಂದು ಕ್ರಿಕೆಟಿಗ ಪಾರ್ಥಿವ್ ಪಟೇಲ್ ಅಭಿಪ್ರಾಯಪಟ್ಟಿದ್ದಾರೆ.
ಏಕ ದಿನ ಮತ್ತು ಟಿ- 20 ಪಂದ್ಯಗಳ ನಾಯಕತ್ವವನ್ನು ರೋಹಿತ್ ಶರ್ಮಾ ಅವರಿಗೆ ನೀಡಬೇಕೇಂಬ ಕೂಗು ಇತ್ತೀಚಿನ ದಿನಗಳಲ್ಲಿ ತೀವ್ರಗೊಳ್ಳುತ್ತಿದೆ.
ಪಾರ್ಥಿವ್ ಪಟೇಲ್ ಆರ್ ಸಿ ಬಿ ತಂಡದ ಸದಸ್ಯರಾಗಿದ್ದಾರೆ. ಆದರೆ ಒಂದೂ ಪಂದ್ಯದಲ್ಲಿ ಆಡಲು ಅವಕಾಶ ನೀಡಿರಲಿಲ್ಲ. ಪಾರ್ಥಿವ್ ಪಟೇಲ್ ಬೆಂಚ್ ಬಿಸಿ ಮಾಡಿದ್ದರು.