ಇತ್ತೀಚಿನ ಸುದ್ದಿ
ಪ್ರಾಕೃತಿಕವಾಗಿ ಹುಟ್ಟಿ ಗಮನ ಸೆಳೆಯುತ್ತಿರುವ ಕೋಡಿಕೆರೆಯ ಈ ಗಣಪನನ್ನು ನೋಡಿದ್ದೀರಾ ? ಪಿಓಪಿ, ಆವೆ ಮಣ್ಣು ಮೊದಲಾದ ವಸ್ತುಗಳಿಂದ ತಯಾರಾದ ಗಣಪ ಎಲ್ಲರಿಗೂ ಗೊತ್ತು. ನಿಸರ್ಗದೊಳಗಿನ ಗಣಪನನ್ನು ನೋಡಿ
August 21, 2020, 4:40 PM

ಜಿ.ಎನ್.ಎ.
info.reporterkarnataka@gmail.com
ಚಿತ್ರ : ಜೀವರಾಜ್ ಕೋಡಿಕೆರೆ
ದೇವರು ಪ್ರತಿಯೊಂದು ಕಣದಲ್ಲೂ ಇದ್ದಾರೆ ಎನ್ನುವುದು ಎಲ್ಲರ ನಂಬಿಕೆ ಅದಕ್ಕೆ ಪೂರಕವಾಗಿ ಕೋಡಿಕೆರೆಯಲ್ಲಿ ದಟ್ಟವಾಗಿ ಬೆಳೆದ ನಾಗಬನದಲ್ಲಿ ಮೂಡಿರುವ ಈ ಗಣಪ ಗಮನ ಸೆಳೆಯುತ್ತಿದ್ದಾನೆ.

ವಿವಿಧ ಬಗೆಗಳಲ್ಲಿ ಪೂಜಿಸಲ್ಪಡುವ ವಿಘ್ನವಿನಾಶಕನನ್ನು ಮೂರ್ತಿಯನ್ನು ಕಣ್ತುಂಬಿಕೊಳ್ಳಲು ಈ ವರ್ಷ ಕಷ್ಟ ಸಾದ್ಯ. ಮನುಷ್ಯನ ಅಧರ್ಮಕೆ ಪ್ರಕೃತಿ ಒಂದು ಕಡೆ ಮುನಿದರೂ ಮತ್ತೊಂದು ಕಡೆ ನಾಗಬನದಲ್ಲಿ ಎತ್ತರವಾಗಿ ಬೆಳೆದ ಮರಗಳ ಮೇಲೆ ಬಳ್ಳಿಗಳು ಹರಡಿ ನೋಡಲು ವಿಘ್ನ ವಿನಾಶಕನದೇ ದರ್ಶನ ನೀಡುತ್ತಿದೆ.

ಈ ದೃಶ್ಯವನ್ನು ಸೆರೆ ಹಿಡಿದ ಸ್ಥಳೀಯರಾದ ಜೀವರಾಜ್ ಕೋಡಿಕೆರೆ ಅವರು ಕ್ಲಿಕ್ಕಿಸಿದ
ಪ್ರಕೃತಿಯ ವೈಶಿಷ್ಟ್ಯಪೂರ್ಣ ಚಿತ್ರಗಳು ನಿಮಗಾಗಿ ಇಲ್ಲಿದೆ.
ಮಂಗಳೂರು ತಾಲೂಕಿನ ಕುಳಾಯಿ ಸಮೀಪದ ಕೋಡಿಕೆರೆಯ ರೇಲ್ವೆ ಟ್ರಾಕ್ ಹತ್ತಿರ ಈ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು.