ಇತ್ತೀಚಿನ ಸುದ್ದಿ
ಕೆಎಂಎಫ್ ಡೈರಿಯಲ್ಲಿ ರಾಸಾಯನಿಕ ಸ್ಪೋಟ : ತೀವ್ರ ಗಾಯಗೊಂಡ ಕಾರ್ಮಿಕ ಆಸ್ಪತ್ರೆಗೆ ದಾಖಲು
December 15, 2020, 7:03 PM

ಮಂಗಳೂರು (Reporter Karnataka News)
ಕುಲಶೇಖರದ ಕೆಎಂಎಫ್ ಹಾಲಿನ ಡೈರಿಯಲ್ಲಿ ಟ್ಯಾಂಕ್ ಕ್ಲೀನಿಂಗ್ ನಡೆಸುತ್ತಿದ್ದ ವೇಳೆ ಕೆಮಿಕಲ್ ಬ್ಲಾಸ್ಟ್ ಆಗಿ ಒಬ್ಬ ಕಾರ್ಮಿಕನ ದೇಹ ಪೂರ್ತಿ ಸುಟ್ಟುಹೋದ ಘಟನೆ ನಡೆದಿದೆ.
ಮಧ್ಯಾಹ್ನ 12 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಗುತ್ತಿಗೆ ನೌಕರ, ಸುಳ್ಯ ಮೂಲದ ಸತೀಶ್ (21) ಎಂಬಾತ ಟ್ಯಾಂಕ್ ಮತ್ತು ಟ್ಯೂಬ್ ಕ್ಲೀನ್ ಮಾಡಲೆಂದು ಕುದಿಯುತ್ತಿದ್ದ ನೀರಿಗೆ ಕೆಮಿಕಲ್ ಸುರಿದಾಗ ನೀರು ಒಮ್ಮೆಲೇ ಹೊರಗೆಸೆಯಲ್ಪಟ್ಟು ಘಟನೆ ನಡೆದಿದೆ. ಸೂಕ್ತ ಮುಂಜಾಗ್ರತೆ ಮತ್ತು ನಿರ್ಲಕ್ಷ್ಯ ವಹಿಸಿದ್ದರಿಂದ ಘಟನೆ ನಡೆದಿದ್ದು ಸತೀಶ್ ದೇಹ ಬಿಸಿ ನೀರು ಮೈಗೆ ಬಿದ್ದು ಸುಟ್ಟು ಹೋಗಿದೆ.
ಇತರೇ ನೌಕರರು ಸೇರಿ ಕೂಡಲೇ ಸತೀಶ್ ನನ್ನು ನಗರದ ಎಜೆ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.