7:45 AM Friday4 - December 2020
ಬ್ರೇಕಿಂಗ್ ನ್ಯೂಸ್
ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ತರಲು ತಡವೇಕೆ?: ಮಾಜಿ ಸಚಿವ ಖಾದರ್… ದೋಣಿ ದುರಂತದಲ್ಲಿ ಮೃತಪಟ್ಟ ಮೀನುಗಾರರ ಕುಟುಂಬಕ್ಕೆ ತಲಾ 6 ಲಕ್ಷ ರೂ. ಪರಿಹಾರ… ರೈತರ ಬೆಂಬಲಕ್ಕೆ ನಿಂತ ಅಕಾಲಿ ನಾಯಕ  ಬಾದಲ್ :  ಪದ್ಮವಿಭೂಷಣ ಪ್ರಶಸ್ತಿ ವಾಪಸ್ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕನಕ ಜಯಂತಿ ಆಚರಣೆ ಮಂಗಳೂರಿನಲ್ಲಿ ಉಗ್ರರ ಪರ ಗೋಡೆ ಬರಹ: ಫುಡ್ ಡೆಲಿವರಿ ಬಾಯ್ ಪೊಲೀಸ್ ವಶಕ್ಕೆ ಪಿಎಫ್ಐ ಅಧ್ಯಕ್ಷರ ಎರಡೂ ನಿವಾಸಗಳ ಮೇಲೆ ಇಡಿ ದಾಳಿ: ಶೋಧ ಕಾರ್ಯ ಆರಂಭ ಮಾಜಿ ಸಚಿವ ವರ್ತೂರ್ ಪ್ರಕಾಶ್ ಅಪಹರಣ ಪ್ರಕರಣ: ಓರ್ವನ ವಿಚಾರಣೆ ಆರದಿರಲಿ ಬದುಕು ಆರಾಧನ ತಂಡದ ನವೆಂಬರ್ ತಿಂಗಳ ಸಹಾಯ ಧನ ಹಸ್ತಾಂತರ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ ರೈತ ಮುಖಂಡರೊಂದಿಗೆ ಇಂದು ಕೇಂದ್ರ ಸರಕಾರ ಚರ್ಚೆ: 35 ಸಂಘಟನೆಗಳಿಗೆ ಆಹ್ವಾನ

ಇತ್ತೀಚಿನ ಸುದ್ದಿ

ಕುಡ್ಲದ ಹುಡುಗ ರಾಹುಲ್ ರಾಜ ನಡೆ, ಮ್ಯಾಚ್ ಕೈಚೆಲ್ಲಿದ ಕೋಹ್ಲಿ ಪಡೆ

September 24, 2020, 11:06 PM

ದುಬಾಯಿ(reporter Karnataka News)

ಇಲ್ಲಿಯ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಡ್ರೀಮ್ಸ್ 11 ಐಪಿಎಲ್‌ನ ಕಿಂಗ್ಸ್ ಇಲೆವನ್ ಪಂಜಾಬ್ ಹಾಗೂ ಆರ್‌ಸಿಬಿ ನಡುವಿನ ಪಂದ್ಯದಲ್ಲಿ ಕನ್ನಡಿಗ ಕುಡ್ಲದ ಹುಡುಗ ಕೆ.ಎಲ್.ರಾಹುಲ್ ನೇತೃತ್ವದ ಪಂಜಾಬ್ 97 ರನ್ನುಗಳ ಭರ್ಜರಿ ಗೆಲುವನ್ನು ದಾಖಲಿಸಿದೆ.


ಮೊದಲ ಪಂದ್ಯದಲ್ಲಿ ಎಸ್‌ಆರ್‌ಎಚ್ ವಿರುದ್ಧ ಗೆದ್ದು ಬೀಗಿದ್ದ ಬೆಂಗಳೂರು ಪಂಜಾಬ್ ಎದುರು ಸಂಪೂರ್ಣ ನೆಲಕಚ್ಚಿತು. ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಂಜಾಬ್ ನಾಯಕ ರಾಹುಲ್ ಭರ್ಜರಿ ಶತಕದ ಅಮೋಘ ಇನ್ನಿಂಗ್ಸ್ ನೆರವಿನಿಂದ 206 ರನ್ನುಗಳ ಬೃಹತ್ ಮೊತ್ತವನ್ನು ದಾಖಲಿಸಿತು. ಕೆ.ಎಲ್.ರಾಹುಲ್ ಕೇವಲ 69 ಎಸೆತಗಳಿಂದ 132 ರನ್ ಚಚ್ಚಿ ಪಂಜಾಬ್‌ನ್ನು 200ರ ಗಡಿ ದಾಟಿಸಿದರು.
ಪ್ರಸ್ತಕ ಸಾಲಿನ ಐಪಿಎಲ್‌ನ ಮೊದಲ ಶತಕ ಇದಾಗಿದ್ದು, ಈ ಅಮೋಘ ಇನ್ನಿಂಗ್ಸ್‌ 14 ಬೌಂಡರಿ ಹಾಗೂ 7 ಮನಮೋಹಕ ಸಿಕ್ಸರ್‌ಗಳನ್ನು ಒಳಗೊಂಡಿತ್ತು.
ಅಂತಿಮ ಮೂರು ಓವರ್‌ಗಳಲ್ಲಿ ರನ್ ಹೊಳೆಯೇ ಹರಿದು ಬೆಂಗಳೂರಿಗೆ ಪಂದ್ಯ ಮತ್ತಷ್ಟು ಕಠಿಣವಾಯಿತು.

ಕ್ಯಾಚ್ ಚೆಲ್ಲಿದ ಕೊಹ್ಲಿ :
ಕೆ.ಎಲ್.ರಾಹುಲ್ ಶತಕದ ಸನಿಹದಲ್ಲಿದ್ದಾಗ ಎರಡು ಬಾರಿ ಕ್ಯಾಚ್ ಅವಕಾಶವನ್ನು ಕೈ ಚೆಲ್ಲಿದ ಕೊಹ್ಲಿ ಮ್ಯಾಚನ್ನೇ ಕಳೆದುಕೊಂಡರು. ಒಂದು ಬಾರಿ ಲಾಂಗ್ ಆನ್ ಕ್ಷೇತ್ರದಲ್ಲಿ ಕ್ಯಾಚ್ ಕೈ ಚೆಲ್ಲಿದ ಕೊಹ್ಲಿ ಮತ್ತೆ ಶಾರ್ಟ್ ಮಿಡ್ ಆಫ್‌ನಲ್ಲೂ ಕೈ ಚೆಲ್ಲಿದ ಕೊಹ್ಲಿ ಪಂಜಾಬ್ ರನ್‌ನ್ನು ನಿಯಂತ್ರಿಸುವ ಅವಕಾಶ ಕಳೆದಯಕೊಂಡರು. ಬಳಿಕ ಬೀಸಿದ್ದು ರಾಹುಲ್ ಸುಂಟರಗಾಳಿ. ಕಡೆಯ ಎರಡು ಓವರಿನಲ್ಲಿ 50ಕ್ಕೂ ಅಧಿಕ ರನ್ ಹರಿದು ಬಂತು.

ಏಳಿಗೆ ಕಾಣದ ಬೆಂಗಳೂರು
ಆರಂಭದಿಂದಲೇ ಕುಸಿತವನ್ನು ಕಂಡ ಬೆಂಗಳೂರು ಈ ವಿಶಾಲ ಮೊತ್ತವನ್ನು ಬೆನ್ನಟ್ಟುವಲ್ಲಿ ಸಂಪೂರ್ಣವಾಗಿ ವಿಫಲವಾಯಿತು. ಕಳೆದ ಪಂದ್ಯದಲ್ಲಿ ಭರವಸೆ ಮೂಡಿದ ಯುವ ಕ್ರಿಕೆಟಿಗ ಪಡಿಕ್ಕಲ್ ಇಂದು ಕೇವಲ 1 ರನ್ ಗಳಿಸಿ ಕಾಟ್ರೆಲ್‌ಗೆ ವಿಕೆಟ್ ಒಪ್ಪಿಸಿದರು. ಶಾನ್ ಫಿಲಿಪ್ಪೆ ಕೂಡ ಶೂನ್ಯ ಸಾಧನೆಗೈದರು. ಕಪ್ತಾನ ವಿರಾಟ್ ಕೊಹ್ಲಿ ಮತ್ತೆ ಅಭಿಮಾನಿಗಳನ್ನು ನಿರಾಸೆಗೊಳಿಸದರು. ಅವರೂ ಒಂದಕ್ಕಿಯ ರನ್ ಗಳಿಸಿ ಕಾಟ್ರೆಲ್‌ಗೆ ವಿಕೆಟ್ ಒಪ್ಪಿಸಿ ಪೆಲಿವಿಯನ್ ಕಡೆಗೆ ಸಾಗಿದರು. ಈ ಸಂದರ್ಭ ಬೆಂಗಳೂರು 4 ರನ್‌ಗೆ 3 ವಿಕೆಟ್ ಕಳೆದುಕೊಂಡಿತು. ಅಲ್ಲಿಗೆ ಬೆಂಗಳೂರಿನ ಕಾಲು ಕಥೆ ಮುಗಿದ್ದಿತ್ತು. ಬಳಿಕ ಉಳಿದ್ದಿದ್ದು ಎಬಿಡಿ ಹಾಗೂ ಫಿಂಚ್ ಫಿಂಚ್ ಕೂಡ 20 ರನ್‌ಗೆ ಆಟ ನಿಲ್ಲಿಸಿದರು. ತೂಫಾನಿನ ಸೂಚನೆ ಕೊಟ್ಟ ಎಬಿಡಿಯನ್ನು ಮು.ಅಶ್ವಿನ್ ಗೂಗ್ಲಿ ಬಲೆಗೆ ಬೀಳಿಸಿದರು. ಅವರ ಗಳಿಕೆ 28 ರನ್.
ಇಲ್ಲಿಗೆ ಬೆಂಗಳೂರಿನ ಸೋಲು ನಿಶ್ಚಯವೆ ಆಗಿತ್ತು. ಆಮೇಲೆ ಬ್ಯಾಟ್ ಹಿಡಿದು ಬಂದ ವಾಷಿಂಗ್ಟನ್ ಸುಂದರ್ 30 ರನ್ ಗಳಿಸಿ ಔಟಾದರು. ಅವರದೇ ಅಧಿಕ ಕೊಡುಗೆ ಬೆಂಗಳೂರು ಇನ್ನಿಂಗ್ಸ್‌ನಲ್ಲಿ. ಕಡೆಗೆ 109 ರನ್‌ಗೆ ಅಲೌಟ್ ಆದ ಬೆಂಗಳೂರು 97 ರನ್ನುಗಳ ಬೃಹತ್ ಸೋಲನುಂಡಿತು.

ಇತ್ತೀಚಿನ ಸುದ್ದಿ

ಜಾಹೀರಾತು