ಇತ್ತೀಚಿನ ಸುದ್ದಿ
ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಆಗಿ ಮೇಲ್ದರ್ಜೆಗೆ:ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಘೋಷಣೆ
November 18, 2020, 2:56 PM

ಮಂಗಳೂರು(reporterkarnataka news) : ಪಟ್ಟಣ ಪಂಚಾಯತ್ ಆಗಿ ಕಿನ್ನಿಗೋಳಿ ಮೇಲ್ದರ್ಜೆಗೇರಿದೆ. ಬುಧವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಅನುಮೋದನೆ ನೀಡಲಾಗಿದೆ.
ಕಿನ್ನಿಗೋಳಿ, ಮೆನ್ನಬೆಟ್ಟು ಹಾಗೂ ಕಟೀಲು ಗ್ರಾಮಗಳನ್ನು ಸೇರಿಕೊಂಡು ಪಟ್ಟಣ ಪಂಚಾಯತ್ ರಚಿಸಲಾಗಿದೆ. ಅಭಿವೃದ್ಧಿ ದೃಷ್ಟಿಯಿಂದ ಇದು ಮಹತ್ತರ ಹೆಜ್ಜೆಯಾಗಿದೆ. ಹಲವು ಮೂಲಸೌಕರ್ಯ ಕಾಮಗಾರಿಗಳು ನಡೆಯಬಹುದು ಎಂಬ ನಿರೀಕ್ಷಿಸಲಾಗಿದೆ.
ಮೂಲ್ಕಿ ಮೂಡಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್ ಅವರ ನಿರಂತರ ಪ್ರಯತ್ನ ಫಲವಾಗಿ
ಬುಧವಾರ ನಡೆದ ರಾಜ್ಯ ಕ್ಯಾಬಿನೆಟ್ ಸಭೆಯಲ್ಲಿ ಪಟ್ಟಣ ಪಂಚಾಯತ್ ಘೋಷಣೆಯಾಯಿತು.
ಜನರಿಗೆ ಏನು ಲಾಭ…?
* ಕಿನ್ನಿಗೋಳಿ ಆದಾಯವಿರುವ ಗ್ರಾಮೀಣ ಪ್ರದೇಶವಾಗಿದ್ದು, ಇಲ್ಲಿ ಮೂಲಸೌಕರ್ಯ ಕಾರ್ಯಗಳು ಇನ್ನಷ್ಟು ಆಗಬೇಕಾಗಿದೆ. ಈ ಕಾರಣ ಹಲವು ಪ್ರದೇಶಗಳನ್ನು ಸೇರಿಸಿಕೊಂಡು ಪಟ್ಟಣ ಪಂಚಾಯತ್ ಮಾಡಲಾಗಿದೆ.
ಗ್ರಾಮ ಪಂಚಾಯತ್ ಗಳಲ್ಲಿ ಒಂದಿಷ್ಟು ಸೀಮಿತ ಅನುದಾನ ಬಂದರೆ ಪಟ್ಟಣ ಪಂಚಾಯತ್ ನಲ್ಲಿ ಅನುದಾನ ಹೆಚ್ಚುತ್ತದೆ.
* ನಗರಾಭಿವೃದ್ಧಿ ಇಲಾಖೆಯಿಂದ ಬಹುತೇಕ ಅನುದಾನ ನಗರ ಪಂಚಾಯತ್, ಪಟ್ಟಣ ಪಂಚಾಯತ್, ಪುರಸಭೆಗಳಿಗೆ ಹೋಗುತ್ತದೆ.ಇದರಿಂದ ಹೆಚ್ಚು ಅನುದಾನ ಪಡೆಯಲು ಸಾಧ್ಯ.
* ಕುಡಿಯುವ ನೀರಿನ ಕುರಿತ ಸಮಸ್ಯೆಗಳು ಶಾಶ್ವತ ಪರಿಹಾರ ಕಾಣಬಹುದಾಗಿದೆ.
* ದರ ಹೆಚ್ಚಳ ಹಾಗೂ ಉದ್ದಿಮೆ ಹೆಚ್ಚಳಕ್ಕೆ ಮತ್ತು ಹಳ್ಳಿ ಪಟ್ಟಣ ಕಲ್ಪನೆಯ ಪ್ರದೇಶವಾಗಿ ಬೆಳವಣಿಗೆ ಸಾಧ್ಯ.
*ರಸ್ತೆಗಳ ಅಭಿವೃದ್ಧಿಗೆ ಅಧಿಕ ಹಣ ದೊರೆಯುತ್ತದೆ.