ಇತ್ತೀಚಿನ ಸುದ್ದಿ
ಕೇರಳದಲ್ಲಿ ಮತ್ತೊಂದು ಕಳ್ಳಭಟ್ಟಿ ದುರಂತ: 3 ಮಂದಿ ಸಾವು, ತನಿಖೆಗೆ ಆದೇಶ
October 19, 2020, 9:13 AM

ಪಾಲಕ್ಕಾಡ್(reporterkarnataka news): ಕೇರಳದಲ್ಲಿ ಮತ್ತೊಂದು ಕಳ್ಳಭಟ್ಟಿ ದುರಂತ ಸಂಭವಿಸಿದೆ. ಪಾಲಕ್ಕಾಡ್ ಜಿಲ್ಲೆಯ ಕಂಚಿಕೋಡ್ ಬಳಿ ಈ ದುರಂತ ಸಂಭವಿಸಿದೆ. ಕಳ್ಳಭಟ್ಟಿ ಸೇವಿಸಿದ ಮೂವರು ಅಸುನೀಗಿದ್ದಾರೆ. ಹಲವಾರು ಮಂದಿ ಅಸ್ವಸ್ಥರಾಗಿದ್ದಾರೆ.
ಮೃತಪಟ್ಟವರನ್ನು ಶಿವನ್, ರಾಮನ್ ಮತ್ತು ಅಯ್ಯಪ್ಪನ್ ಎಂದು ಗುರುತಿಸಲಾಗಿದೆ. ರಾಜ್ಯ ಸರ್ಕಾರ ಈ ಸಂಬಂಧ ತನಿಖೆಗೆ ಆದೇಶ ನೀಡಿದೆ.