ಇತ್ತೀಚಿನ ಸುದ್ದಿ
ಕೇರಳದ ಮುನ್ನಾರ್ ಭೂ ಕುಸಿತ ಪ್ರಕರಣ: ಸತ್ತವರ ಸಂಖ್ಯೆ 50ಕ್ಕೆ ಏರಿಕೆ
August 11, 2020, 5:51 AM

ಇಡುಕ್ಕಿ(reporterkarnataka.com): ಇಡುಕ್ಕಿ ಜಿಲ್ಲೆಯ ಮುನ್ನಾರ್ ಬಳಿ ಸಂಭವಿಸಿದ ಭೂ ಕುಸಿತದಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ 50ಕ್ಕೆ ಏರಿದೆ.
ಇಂದು ಒಂದು ಮೃತದೇಹ ಪತ್ತೆ ಹಚ್ಚಲಾಗಿದೆ. ಇನ್ನೂ 22 ಮಂದಿಯನ್ನು ಪತ್ತೆ ಹಚ್ಚಬೇಕಾಗಿದೆ. ಇವರಲ್ಲಿ 15 ಮಕ್ಕಳು ಕೂಡ ಸೇರಿದ್ದಾರೆ.
ಭಾರೀ ಭೂ ಕುಸಿತದ ವೇಳೆ ಗುಡ್ಡ ಜರಿದು ಬಿದ್ದ ಪರಿಣಾಮ ಹಲವು ಮನೆಗಳು ನೆಲಸಮವಾಗಿದೆ. ಹಲವು ಮೃತದೇಹಗಳನ್ನು ಪಕ್ಕದಲ್ಲಿ ಹರಿಯುತ್ತಿರುವ ಹೊಳೆಯಲ್ಲಿ ಪತ್ತೆ ಮಾಡಲಾಗಿತ್ತು.
ಮೃತಪಟ್ಟ ಹೆಚ್ಚಿನವರು ಕೂಲಿ ಕಾರ್ಮಿಕರಾಗಿದ್ದಾರೆ. ಇವರೆಲ್ಲರೂ ತಮಿಳುನಾಡಿನವರಾಗಿದ್ದಾರೆ