ಇತ್ತೀಚಿನ ಸುದ್ದಿ
ಕೇರಳ ಭೂ ಕುಸಿತ ದುರಂತ: ಮತ್ತೆ ನಾಲ್ವರ ಮೃತದೇಹ ಪತ್ತೆ, ಸತ್ತವರ ಸಂಖ್ಯೆ 62ಕ್ಕೆ ಏರಿಕೆ
August 20, 2020, 4:41 AM

ಇಡುಕ್ಕಿ: ಕೇರಳದ ಮುನ್ನಾರ್ ಸಮೀಪ ಸಂಭವಿಸಿದ ಭೂ ಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 62ಕ್ಕೆ ಏರಿದೆ. ಸಮೀಪದ ಹೊಳೆಯಲ್ಲಿ ನಾಲ್ಕು ಮೃತದೇಹಗಳನ್ನು ಬುಧವಾರ ಪತ್ತೆ ಹಚ್ಚಲಾಗಿತ್ತು.
ಭೂಕುಸಿತದ ವೇಳೆ ಮಣ್ಣಿನ ರಭಸಕ್ಕೆ ಮೃತದೇಹಗಳು ಕೊಚ್ಚಿಕೊಂಡು ಹೋಗಿವೆ.
ಭೂ ಕುಸಿತ ಸಂಭವಿಸಿ 14 ದಿನಗಳಾಗಿದ್ದು, ಇನ್ನೂ ಎಂಟು ಮಂದಿಯನ್ನು ಪತ್ತೆ ಹಚ್ಚಬೇಕಾಗಿದೆ. ಸಾವನ್ನಪ್ಪಿದವರಲ್ಲಿ ಹೆಚ್ಚಿನವರು ತಮಿಳುನಾಡು ಮೂಲದವರಾಗಿದ್ದಾರೆ