ಇತ್ತೀಚಿನ ಸುದ್ದಿ
ಕೇರಳ- ಮಂಗಳೂರು ಪಾಸೆಂಜರ್ ರೈಲು ಆರಂಭದ ನಿರೀಕ್ಷೆಯಲ್ಲಿ ಕಾಸರಗೋಡು, ಕಣ್ಣೂರು ವಿದ್ಯಾರ್ಥಿಗಳು
January 5, 2021, 7:54 PM

ಕಾಸರಗೋಡು(reporterkarnataka news) : ಕರ್ನಾಟಕದಲ್ಲಿ ವಿದ್ಯಾರ್ಥಿಗಳಿಗೆ ತರಗತಿ ಆರಂಭಿಸಿದ ಹಿನ್ನಲೆಯಲ್ಲಿ ಚೆರುವತೂರು – ಮಂಗಳೂರು, ಕಣ್ಣೂರ್-ಮಂಗಳೂರು ಪಾಸೆಂಜರ್ ರೈಲುಗಳಿಗೆ ಸಂಚರಿಸಲು ಶೀಘ್ರದಲ್ಲಿ ಅನುಮತಿ ನೀಡಕೆಂದು ಬಿಜೆಪಿ ಜಿಲ್ಲಾಧ್ಯಕ್ಷ. ಕೆ. ಶ್ರೀಕಾಂತ್ ಕೇರಳ ಸರಕಾರವನ್ನು ಒತ್ತಾಯಿಸಿದ್ದಾರೆ.
ರೈಲು ಸಂಚಾರಕ್ಕೆ ಅನುಮತಿ ನೀಡಬಹುದೆಂದು ದಕ್ಷಿಣ ರೈಲ್ವೆಯ ತೀರ್ಮಾನವನ್ನು ವ್ಯಕ್ತಪಡಿಸಿದೆ. ಕರ್ನಾಟಕ, ತಮಿಳುನಾಡಿನಲ್ಲಿ ರೈಲು ಸಂಚಾರಕ್ಕೆ ಹಸಿರು ನಕಾಶೆ ಲಭಿಸಿದೆ. ಕಣ್ಣೂರು, ಕಾಸರಗೋಡು ಜಿಲ್ಲೆಯ ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ, ರೋಗಿಗಳಿಗೆ ಏಕೈಕ ಆಶ್ರಯವೇ ಪಾಸಂಜರ್ ರೈಲುಗಳು. ಆದರೆ ಪ್ರಸ್ತುತ ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳಿಗೆ ಜನರಲ್ ಕಂಪಾರ್ಟ್ಮೆಂಟ್ ಸೌಕರ್ಯ ಇಲ್ಲದಿರುವುದು ಹಾಗೂ ಕೆಲವು ಸ್ಟೇಷನ್ ಗಳಲ್ಲಿ ನಿಲುಗಡೆ ಇಲ್ಲದಿರುವುದು ಪ್ರಯಾಣಿಕರಿಗೆ ದಿಕ್ಕುತೋಚದಂತೆ ಮಾಡಿದೆ.
ಮುಂಗಡ ಟಿಕೆಟ್ ಲಭಿಸದ ಕಾರಣ ಹಲವಾರು ವಿದ್ಯಾರ್ಥಿಗಳು ಹಾಸ್ಟೆಲ್ ಗಳಲ್ಲಿ ವಾಸಿಸುತ್ತಿದ್ದಾರೆ.
ಬಹುಪಾಲು ಬಡ ಮತ್ತು ಸಾಮಾನ್ಯ ವಿದ್ಯಾರ್ಥಿಗಳಿಗೆ ಬಸ್ ಪ್ರಯಾಣ ಮತ್ತು ಹಾಸ್ಟೆಲ್ ವೆಚ್ಚವನ್ನು ಭರಿಸಲಾಗುವುದಿಲ್ಲ. ದೀರ್ಘ ದೂರದ-ಎಸಿ ಮತ್ತು ನಾನ್ ಎಸಿ ಬಸ್ ಸೇವೆಗಳನ್ನು ಸಹ ಮತ್ತೆ ಆರಂಭಿಸಲಾಗಿದೆ. ಆದರೆ ರೈಲು ಸಂಚಾರ ಮಾತ್ರ ಸ್ಥಗಿತಗೊಂಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಶ್ರೀಕಾಂತ್ ಹೇಳಿದ್ದಾರೆ.