3:44 AM Thursday25 - February 2021
ಬ್ರೇಕಿಂಗ್ ನ್ಯೂಸ್
ಸಿದ್ದರಾಮಯ್ಯರಿಗೆ ತಲೆ ಸರಿ ಇಲ್ಲ, ವಕೀಲ ಅಂತ ಹೇಳಿಕೊಳ್ಳಲು ನಾಚಿಗೆಯಾಗಬೇಕು: ಈಶ್ವರಪ್ಪ ಅಡುಗೆ ಅನಿಲ ಸಿಲಿಂಡರ್ ಬೆಲೆ ಮತ್ತೆ ಹೆಚ್ಚಳ: ಒಂದೇ ತಿಂಗಳಲ್ಲಿ 3ನೇ ಬಾರಿ… ಇಂಧನ ಬೆಲೆಯೇರಿಕೆ, ಇ- ವೇ ಬಿಲ್ ಖಂಡಿಸಿ ನಾಳೆ ಭಾರತ ಬಂದ್ :… ಶ್ರೀನಿವಾಸಪುರ: ರಾಷ್ಟ್ರೀಯ ಶ್ರವಣ ದೋಷ ನಿಯಂತ್ರಣ ಮತ್ತು ನಿರ್ಮೂಲನೆ ಕಾರ್ಯಕ್ರಮ ರೋವರ್ ನಿಂದ ಮಂಗಳನ ಮಣ್ಣು ಹಾಗೂ ಕಲ್ಲಿನ  ಸ್ಯಾಂಪಲ್ ಸಂಗ್ರಹ: ಹಾಗಾದರೆ ಅದನ್ನು… ಕಟೀಲು ಮೇಳ ಸೇವೆ ಆಟಗಳು: ಎಲ್ಲಿ ಏನೇನು? ನೀವೇ ಓದಿ ನೋಡಿ ತಂಬಾಕು ಜಾಗೃತಿ ಮೂಡಿಸಲು ‘ಗುಲಾಬಿ ಅಭಿಯಾನ’:  ಬೆಳುವಾಯಿ ಶಾಲಾ ಮಕ್ಕಳಿಂದ ಜಾಥಾ ಪೇಜಾವರ ಶ್ರೀಗಳಿಗೆ ಗುರು ವಂದನೆ: ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ 1 ಕೋಟಿ… ಆವಿಷ್ಕಾರ ಮತ್ತು ತಂತ್ರಜ್ಞಾನದ ಜಾಗತಿಕ ಕೇಂದ್ರವಾಗಿ ಮಂಗಳೂರು ಅಭಿವೃದ್ಧಿ: ಡಿಸಿಎಂ ಡಾ. ಅಶ್ವಥನಾರಾಯಣ ಜನರು ಮಾಸ್ಕ್ ಧರಿಸದಿದ್ದರೆ ಮತ್ತೆ ಲಾಕ್ ಡೌನ್: ಮುಖ್ಯಮಂತ್ರಿ ನಾಗರಿಕರಿಗೆ ಎಚ್ಚರಿಕೆ

ಇತ್ತೀಚಿನ ಸುದ್ದಿ

ಕರ್ನಾಟಕ ಜತೆಗಿನ ಗಡಿಗಳನ್ನು ಭದ್ರಗೊಳಿಸಿದ ಕೇರಳ:  ಗಡಿಯಲ್ಲಿ ಆಂಟಿಜೆನ್ ಟೆಸ್ಟ್ ವ್ಯವಸ್ಥೆ ಜಾರಿ

October 31, 2020, 10:48 AM

ಕಾಸರಗೋಡು(reporterkarnataka news):

ಕೊರೊನಾ ಹಿನ್ನೆಲೆಯಲ್ಲಿ ಕರ್ನಾಟಕದೊಂದಿಗೆ ಹಂಚಿಕೊಂಡಿರುವ ಎಲ್ಲ ಗಡಿಗಳನ್ನು ಕೇರಳ ಇನ್ನಷ್ಟು ಭದ್ರಗೊಳಿಸಿದೆ. ಕರ್ನಾಟಕದಿಂದ ಕಾಸರಗೋಡು ಜಿಲ್ಲೆಗೆ ಪ್ರವೇಶಿಸುವ 17 ಗಡಿ ರಸ್ತೆಗಳಲ್ಲಿ 5 ಗಡಿ ರಸ್ತೆಗಳ ಚೆಕ್ ಪೋಸ್ಟ್ ವ್ಯವಸ್ಥೆ ಮಾಡಲಾಗಿದೆ. ಇತರ ರಾಜ್ಯಗಳಿಂದ ಕೇರಳ ಪ್ರವೇಶಿಸುವ ಮಂದಿಯಲ್ಲಿ ಕೋವಿಡ್ ನೆಗೆಟಿವ್ ಆಗಿರುವ ಸರ್ಟಿಫೀಕೆಟ್ ಇಲ್ಲದ ಮಂದಿಗೆ ಆಂಟಿಜೆನ್ ಟೆಸ್ಟ್ ನಡೆಸಲು ಸೌಲಭ್ಯ ಸಜ್ಜುಗೊಳಿಸಲಾಗಿದೆ.

ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ

ವೀಡಿಯೋ ಕಾನ್ಪರೆನ್ಸ್ ಮೂಲಕ ನಡೆದ ಜಿಲ್ಲಾಮಟ್ಟದ ಕೊರೊನಾ ಕೋರ್ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ತಲಪಾಡಿ ಚೆಕ್ ಪೋಸ್ಟ್ (ಎನ್ಎಚ್ 66), ಅಡ್ಕಸ್ಥಳ- ಅಡ್ಯನಡ್ಕರಸ್ತೆ(ಎಸ್ಎಚ್ 55), ಆದೂರು-ಕೊಟ್ಯಾಡಿ-ಸುಳ್ಯ ರಾಜ್ಯ ಹೆದ್ದಾರಿ(ಎಸ್ಎಚ್ 55), ಪಾಣತ್ತೂರು-ಚೆಂಬೇರಿ-ಮಡಿಕೇರಿ(ಎಸ್ಎಚ್ 56), ಮಾಣಿಮೂಲೆ-ಸುಳ್ಯ ಎಂಬ ರಸ್ತೆಗಳಲ್ಲಿ ಚೆಕ್ ಪೋಸ್ಟ್ ಸಜ್ಜುಗೊಳಿಸಿ, ಆಂಟಿಜೆನ್ ಟೆಸ್ಟ್ ಗೆ ಸೌಲಭ್ಯ ವ್ಯವಸ್ಥೆ ಮಾಡಲಾಗಿದೆ. ಈ ಚೆಕ್ ಪೋಸ್ಟ್ ಗಳಲ್ಲಿ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಆಂಟಿಜೆನ್ ಟೆಸ್ಟ್ ಸೌಲಭ್ಯ ಇರುವುದು. ಈ  ಚೆಕ್ ಪೋಸ್ಟ್ ಗಳ ಮೂಲಕ ಸಂಜೆ 6 ಗಂಟೆಯ ನಂತರ ಬೆಳಗ್ಗೆ 6 ಗಂಟೆ ವರೆಗೆ ಇತರ ರಾಜ್ಯಗಳಿಮದ ಆಗಮಿಸುವ ಯಾತ್ರಿಕರು ಕೋವಿಡ್ ನೆಗೆಟಿವ್ ಸರ್ಟಿಫಿಕೆಟ್ ಹಾಜರುಪಡಿಸಬೇಕು. 

 12 ಪಾಯಿಂಟ್ ಗಳಲ್ಲಿ ಕೋವಿಡ್ ನೆಗೆಟಿವ್ ಸರ್ಟಿಫಿಕೆಟ್ ಹಾಜರುಪಡಿಸಬೇಕು. ತೂಮಿನಾಡ್ ರಸ್ತೆ, ಕೆದಂಪಾಡಿ ಪದವು ರಸ್ತೆ, ಸುಂಕದಕಟ್ಟೆ -ಮುಡಿಪು ರಸ್ತೆ, ಕುರುಡಪದವು ರಸ್ತೆ, ಮುಳಿಗದ್ದೆ ರಸ್ತೆ, ಬೆರಿಪದವು , ಸ್ವರ್ಗ-ಆರ್ಲಪದವು ರಸ್ತೆ, ಕೊಟ್ಯಾಡಿ-ಪಳ್ಳತ್ತೂರು-ಈಶ್ವರಮಂಗಲ ರಸ್ತೆ, ಕೊಟ್ಯಾಠಡಿ-ಅಡೂರು-ದೇವರಡ್ಕ ರಸ್ತೆ, ಗಾಳಿಮುಖ-ಈಶ್ವರಮಂಗಲ-ದೇಲಂಪಾಡಿ ರಸ್ತೆ, ನಾಟೆಕಲ್ಲು-ಸುಳ್ಯಪದವು ರಸ್ತೆ, ಚೆನ್ನಂಕುಂಡ್-ಚಾಮಕೊಚ್ಚಿ ರಸ್ತೆ ಎಂ 12 ಪಾಯಿಂಟ್ ಗಳಲ್ಲಿ ಕರ್ನಾಟಕದಿಂದ ಜಿಲ್ಲೆಗೆ ಪ್ರವೇಶಿಸುವ ಯಾತ್ರಿಕರು ಕೋವಿಡ್ ನೆಗೆಟಿವ್ ಸರ್ಟಿಫಿಕೆಟ್ ಹಾಜರುಪಡಿಸಬೇಕು. 

ಒಂದೇ ದಿನ ಆಗಮಿಸಿ ಮರಳುವ, ದಿನನಿತ್ಯ ಪ್ರಯಾಣ ನಡೆಸುವವರು ನೆಗೆಟಿವ್ ಸರ್ಟಿಫಿಕೆಟ್ ಹಾಜರುಪಡಿಸುವುದು ಅಥವಾ ಗಡಿಪ್ರದೇಶದ ಆಂಟಿಜೆನ್ ಟೆಸ್ಟ್ ಗೆ ಒಳಗಾಗುವುದು ಅಗತ್ಯವಿಲ್ಲ. ಚಿಕಿತ್ಸೆ ಅಥವಾ ತುರ್ತು ಅಗತ್ಯಗಳಿಗೆ ದಕ್ಷಿಣ ಕನ್ನಡ ಜಿಲ್ಲೆಗೆ ತೆರಳಿ ಅದೇ ದಿನ ಮರಳುವ ಮಂದಿಗೆ, ದಿನನಿತ್ಯ ಯಾತ್ರೆ ನಡೆಸುವ ಮಂದಿಗೆ ನೆಗೆಟಿವ್ ಸರ್ಟಿಫಿಕೆಟ್ ಹಾಜರುಪಡಿಸುವುದು ಯಾ ಗಡಿಪ್ರದೇಶದ ಆಂಟಿಜೆನ್ ಟೆಸ್ಟ್ ಗೆ ಒಳಗಾಗುವುದು ಅಗತ್ಯವಿಲ್ಲ. 

ಕರ್ನಾಟಕದ ಸಮೀಪದ ಗ್ರಾಮ ಪಂಚಾಯತ್ ಗಳೀಗೆ ಮಾತ್ರ ಗಡಿ ದಾಟಿ ಬರುವ ಮಂದಿಗೆ ನೋಂದಣಿಯಿಲ್ಲದೆ ಪ್ರಯಾಣಿಸಲು ಮಂಜೂರಾತಿ ಇರುವುದು. ಅವರು ಈ ಗಡಿ ಮೀರಿ ಸಂಚಾರ ನಡೆಸುವುದಿಲ್ಲ ಎಂಬ ಸಂಬಂಧಿಸಿದ ಗ್ರಾಮ ಪಂಚಾಯತ್ ನ ದೃಡೀಕರಣ ಪಡೆದಿರಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

 ಸುಳ್ಯಪದವು ಗಡಿ ಮೂಲಕ ನಾಟೆಕಲ್ಲಿಗೆ ಅಕ್ರಮವಾಗಿ ಕರ್ನಾಟಕದ ಟ್ಯಾಕ್ಸಿಗಳು ಸಂಚಾರ ನಡೆಸುತ್ತಿರುವ ಬಗ್ಗೆ ಮಾಹಿತಿ ಲಭಿಸಿದ್ದು, ಈ ಬಗ್ಗೆ ತಪಾಸಣೆ ನಡೆಸಿ ಕ್ರಮ ಕೈಗೊಳ್ಳಲು ಆರ್.ಟಿ.ಒ.ಗೆ ಸಭೆ ಆದೇಶ ನೀಡಿದೆ.

ಇತ್ತೀಚಿನ ಸುದ್ದಿ

ಜಾಹೀರಾತು