ಇತ್ತೀಚಿನ ಸುದ್ದಿ
ಕೇರಳದ ಸಮುದ್ರದಲ್ಲಿ ಆರು ಮೀನುಗಾರರು ನಾಪತ್ತೆ: ಶೋಧ ಕಾರ್ಯಕ್ಕೆ ಮಳೆ ಅಡ್ಡಿ
September 7, 2020, 2:44 AM

ಕೊಚ್ಚಿ(reporterkarnataka news): ಕೇರಳದಲ್ಲಿ ಆರು ಮೀನುಗಾರರು ನಾಪತ್ತೆಯಾಗಿದ್ದಾರೆ. ಮೀನುಗಾರಿಕೆಗೆ ಸಮುದ್ರಕ್ಕೆ ತೆರಳಿದ್ದ ಆರು ಮೀನುಗಾರರ ಕುರಿತು ಇದುವರೆಗೂ ಮಾಹಿತಿ ದೊರೆತಿಲ್ಲ. ಮಲಪುರಂ ಜಿಲ್ಲೆಯ ಸಮುದ್ರ ತೀರದಲ್ಲಿ ಈ ಘಟನೆ ಸಂಭವಿಸಿದೆ. ಮೀನುಗಾರರನ್ನು ಪತ್ತೆ ಹಚ್ಚಲು ಇದುವರೆಗೂ ಸಾಧ್ಯವಾಗಿಲ್ಲ. ಕೇರಳದಲ್ಲಿ ಮಳೆಯಾಗುತ್ತಿದ್ದು ಇದರಿಂದ ಶೋಧ ಕಾರ್ಯಕ್ಕೆ ಅಡ್ಡಿಯಾಗಿದೆ.
ಕೇರಳದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿತ್ತು. ಇದನ್ನು ನಿರ್ಲಕ್ಷಿಸಿ ಮೀನುಗಾರಿಕೆಗೆ ತೆರಳಿದ್ದರು.