ಇತ್ತೀಚಿನ ಸುದ್ದಿ
ಕೇಂದ್ರ ಸರಕಾರದ ಕೃಷಿ ನೀತಿ ವಿರುದ್ಧ 25ನೇ ದಿನಕ್ಕೆ ಕಾಲಿರಿಸಿದ ರೈತರ ಪ್ರತಿಭಟನೆ
December 20, 2020, 8:34 AM

ನವದೆಹಲಿ( reporterkarnataka news): ಕೇಂದ್ರ ಸರ್ಕಾರದ ಕೃಷಿ ನೀತಿ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟ 25ನೇ ದಿನಕ್ಕೆ ಕಾಲಿರಿಸಿದೆ. ಕೊರೆಯುವ ಚಳಿ ಮಧ್ಯೆ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಇದೇ ವೇಳೆ ಕಾನೂನು ರದ್ದುಪಡಿಸುವ ತನಕ ಮಾತುಕತೆ ಇಲ್ಲ ಎಂದು ರೈತ ಸಂಘಟನೆಗಳ ನಾಯಕರು ಸ್ಪಷ್ಟಪಡಿಸಿದ್ದಾರೆ.
ಸರ್ಕಾರದ ಮಾತುಕತೆ ಪ್ರಸ್ತಾಪವನ್ನು ರೈತ ಮುಖಂಡರು ತಳ್ಳಿಹಾಕಿದ್ದಾರೆ.