6:44 PM Monday1 - March 2021
ಬ್ರೇಕಿಂಗ್ ನ್ಯೂಸ್
ಬಿಜೆಪಿ ಯುವ ಮೋರ್ಚಾ ನರಗುಂದ ಮಂಡಲ ವತಿಯಿಂದ ಗ್ರಾಮದಲ್ಲಿ ಸ್ವಚ್ಚತಾ ಕಾರ್ಯಕ್ರಮ ಜಾತಿ, ಮತ, ಕಟ್ಟುಪಾಡುಗಳನ್ನು ಮೀರಿ ಜನಪದ ಜನಮಾನಸದಲ್ಲಿ ನೆಲೆಗೊಂಡಿದೆ: ಎಡನೀರು ಮಠಾಧೀಶರು ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ ಸಚಿವ ಅಂಗಾರ ತವರಿನಲ್ಲಿ ಭಿನ್ನಮತ ಸ್ಫೋಟ: 3 ಮಂದಿ ಹಿರಿಯ ನಾಯಕರು ಬಿಜೆಪಿಯಿಂದ… ಅಥಣಿ ತಾಲೂಕಿನ ರಡೇರಹಟ್ಟಿ ಗ್ರಾಮದಲ್ಲಿ  ಆಕಸ್ಮಿಕವಾಗಿ ಬೆಂಕಿ ತಗುಲಿ ಗುಡಿಸಲು ಭಸ್ಮ: 4… ಒಂದೂವರೆ ತಿಂಗಳ ಅವಧಿಯಲ್ಲಿ 10 ಬಾರಿ ಇಂಧನ ದರ ಏರಿಕೆ: ಕೆಪಿಸಿಸಿ ಅಧ್ಯಕ್ಷ… ವೈದ್ಯಕೀಯ ಸೀಟುಗಳ ಬ್ಲಾಕಿಂಗ್ ದಂಧೆ: ಮಿನಿ ವಿಧಾನ ಸೌಧದ ಎದುರು ಎಬಿವಿಪಿ ಪ್ರತಿಭಟನೆ;… ಮಂಗಳೂರು ಮಹಾನಗರಪಾಲಿಕೆ  2020-21ನೇ  ಸಾಲಿನ ತೆರಿಗೆ ಪೂರ್ತಿ ಪಾವತಿಸಿದರೆ ಶೇ. 5% ವಿನಾಯಿತಿ ಮಹಿಳಾ ಸಿಬ್ಬಂದಿಗೆ ಮಾನಸಿಕ ಕಿರುಕುಳ ಪ್ರಕರಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ… ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ನೋಡಿ

ಇತ್ತೀಚಿನ ಸುದ್ದಿ

ಹಿಂದುತ್ವ ಎಂಬುದು ರಾಷ್ಟ್ರೀಯತೆ, ದೇಶದ ಆತ್ಮವಿದ್ದಂತೆ: ಶಾಸಕ ಡಾ. ವೈ. ಭರತ್ ಶೆಟ್ಟಿ

October 27, 2020, 3:04 PM

ಕಾವೂರು(reporterkarnataka news);

ಹಿಂದತ್ವ ಎಂಬುದು ರಾಷ್ಟ್ರೀಯತೆ,  ಹಿಂದೂ ದೇಶದ ಆತ್ಮವಿದ್ದಂತೆ. ಕೇವಲ ಆಚರಣೆಗೆ ಸೀಮಿತವಲ್ಲ. ಆದರೆ ರಾಜಕೀಯ ಕಾರಣಗಳಿಗಾಗಿ ಹಿಂದುತ್ವ ಎಂದರೆ ಅನ್ಯ ಧರ್ಮದ ವಿರೋಧಿ ಭಾವನೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಹೇಳಿದರು.

ಅವರು ಕಾವೂರಿನಲ್ಲಿ ಬಿಜೆಪಿ ಉತ್ತರ ಮಂಡಲದ ಕಾರ್ಯಕಾರಿಣಿ ಸಭೆಯಲ್ಲಿ ಮಂಗಳವಾರ ಭಾಗವಹಿಸಿ ಮಾತನಾಡಿದರು.

ಬಿಜೆಪಿ ರಾಷ್ಟ್ರೀಯ ಚಿಂತನೆಯ ಪರಿಕಲ್ಪನೆಯೊಂದಿಗೆ ರಾಷ್ಟ್ರೀಯತೆ ಬಗ್ಗೆ ಒತ್ತು, ಏಕತೆ , ಸರ್ವಧರ್ಮ ಮನೋಭಾವ, ಸಮಾಭಾವನೆಯನ್ನು ಹೊಂದಿದ ಪಕ್ಷವಾಗಿದೆ. ಆದರೆ ಬಿಜೆಪಿ ವಿರೋಧಿಸುವ ಪಕ್ಷಗಳು ಜಾತ್ಯತೀತತೆಯನ್ನು ಬಿಜೆಪಿ ಹಾಳು ಮಾಡುತ್ತಿದೆ ಎಂಬಂತೆ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸುತ್ತಿದೆ. ಹಿಂದುತ್ವ ಎನ್ನುವ ಪರಿಕಲ್ಪನೆಯ ಅರ್ಥವನ್ನೂ ತಿರುಚಿದೆ. ಬಿಜೆಪಿ ಕಾರ್ಯಕರ್ತರ ಅಧ್ಯಯನ ಶೀಲತೆ ಬೆಳೆಸಿಕೊಂಡು ವಿರೋಧಿಗಳ ಷಡ್ಯಂತ್ರವನ್ನು ವಿಫಲಗೊಳಿಸಬೇಕಿದೆ ಎಂದರು.

ಬಿಜೆಪಿ ಪಕ್ಷವಾಗಿ ಇಂದು ಕೇಂದ್ರದಿಂದ ಹಳ್ಳಿಯವರೆಗೆ ಅಧಿಕಾರ ಪಡೆದು ಸಮಗ್ರ ಅಭಿವೃದ್ಧಿ ಭಾರತವನ್ನು ನಿರ್ಮಾಣ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿದ್ದ ಎರಡು ಸಂವಿಧಾನ ಪರಿಕಲ್ಪನೆ ತೊಡೆದು ಹಾಕಿದರು. ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ ತಂದರು. ಹತ್ತು ಹಲವು ಯೋಜನೆ ಹಳ್ಳಿ ಜನತೆಗೆ ನೇರವಾಗಿ ಮುಟ್ಟುವಂತೆ ಮಾಡಿದರು. ಬಿಜೆಪಿ ಒಂದು ಕಾರ್ಯಕರ್ತರ ಪಕ್ಷ,ಕುಟುಂಬದ ಪಕ್ಷವಲ್ಲ ಎಂಬುದನ್ನು ತೋರಿಸಿಕೊಟ್ಟರು. ಅಭಿವೃದ್ಧಿಗಾಗಿ ಕೇಂದ್ರ , ರಾಜ್ಯದಿಂದ ಅನುದಾನ ಸಿಗುತ್ತಿದ್ದು ಮಂಗಳೂರು ಉತ್ತರ ನಿರಂತರ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದೆ. ಮುಂದಿನ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ನಮಗೆ ಅಭಿವೃದ್ಧಿಯೇ ಶ್ರೀ ರಕ್ಷೆ, ಕಾರ್ಯಕರ್ತರ ಶ್ರಮದಿಂದ ಹಳ್ಳಿ ಪ್ರದೇಶಗಳು ಬಿಜೆಪಿ ಗೆಲುವಿನೊಂದಿಗೆ ಹೊಸ ಬೆಳಕು ಕಾಣಲಿವೆ ಎಂದು ಅವರು ನುಡಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಉತ್ತರ ಮಂಡಲ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ, ಜಿಲ್ಲಾ ಸಹ ಪ್ರಭಾರಿ ರಾಜೇಶ್ ಕಾವೇರಿ, ಮಂಡಲ ಉಸ್ತುವಾರಿ, ಜಿ.ಪಂ.ಉಪಾಧ್ಯಕ್ಷೆ ಕಸ್ತೂರಿ ಪಂಜ, ಮಂಡಲ ಪ್ರಭಾರಿ ಪ್ರಭಾ ಮಾಲಿನಿ, ಜಿಲ್ಲಾ ಕಾರ್ಯದರ್ಶಿ ಪೂಜಾ ಪೈ ಮತ್ತಿತರರು ಉಪಸ್ಥಿತರಿದ್ದರು.

ಸಂದೀಪ್ ಪಚ್ಚನಾಡಿ ಸ್ವಾಗತಿಸಿದರು. ಮಹೇಶ್ ಮೂರ್ತಿ ಸುರತ್ಕಲ್ ನಿರೂಪಿಸಿದರು. ಪುಷ್ಪರಾಜ್ ಮುಕ್ಕ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು