10:53 AM Thursday28 - January 2021
ಬ್ರೇಕಿಂಗ್ ನ್ಯೂಸ್
ರಾಜ್ಯ ವಿಧಾನ ಮಂಡಲ ಅಧಿವೇಶನ ಇಂದಿನಿಂದ ಆರಂಭ: ರಾಜ್ಯಪಾಲರ ಭಾಷಣ ಬಂಧನ ಭೀತಿಯಿಂದ ಸಿಎಂ ಯಡಿಯೂರಪ್ಪ, ನಿರಾಣಿ ಬಚಾವ್: ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು… ಪದ್ಮವಿಭೂಷಣ ಪ್ರಶಸ್ತಿಗೆ ಆಯ್ಕೆಯಾದ ಡಾ. ಬಿ.ಎಂ. ಹೆಗ್ಡೆ ಅವರಿಗೆ ಸಂಸದ ನಳಿನ್, ಶಾಸಕ ಕಾಮತ್… ಖ್ಯಾತ ಕ್ರಿಕೆಟಿಗ ಸೌರವ್ ಗಂಗೂಲಿ ಮತ್ತೆ ಆಸ್ಪತ್ರೆಗೆ ದಾಖಲು: ಪುನಃ ಕಾಣಿಸಿಕೊಂಡ ಎದೆನೋವು ಅಕ್ರಮ ಆಸ್ತಿ ಪ್ರಕರಣದಲ್ಲಿ ಶಿಕ್ಷೆಗೀಡಾದ ಜಯಲಲಿತಾ ಆಪ್ತೆ ಶಶಿಕಲಾ ಇಂದು ಜೈಲಿನಿಂದ ಬಿಡುಗಡೆ  ರೇಡಿಯೋ ಸಾರಂಗ್ ಮತ್ತು ಎನ್.ಎಸ್.ಎಸ್. ವಿದ್ಯಾರ್ಥಿಗಳಿಂದ ಬೆಂಗ್ರೆ ಬೀಚ್ ಸ್ವಚ್ಛತೆ ಜಾನಪದ ಕ್ರೀಡೆ ಕಂಬಳ ಜನವರಿ ಅಂತ್ಯದಿಂದ ಪ್ರಾರಂಭ: ಸಂಸದ ನಳಿನ್ ಕುಮಾರ್ ಕಟೀಲ್ ಎಸ್‌ಡಿಪಿಐ ವತಿಯಿಂದ ಗಣರಾಜ್ಯೋತ್ಸವ ಪ್ರಯುಕ್ತ ರೈತ ಐಕ್ಯತಾ ಸಂಗಮ ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ಆತ್ಮಹತ್ಯೆ: ಕುಟುಂಬದ ಸಮಸ್ಯೆ ಕಾರಣ? ಮಂಗಳೂರಿನ ನರ್ಸಿಂಗ್ ಕಾಲೇಜಿನ 4 ಮಂದಿ ವಿದ್ಯಾರ್ಥಿನಿಯರಿಗೆ ಕೊರೊನಾ: ಪಾಲಕರಲ್ಲಿ ಮತ್ತೆ ಭೀತಿ…

ಇತ್ತೀಚಿನ ಸುದ್ದಿ

ಕಠಿಣ ವಿಷಯಗಳ ಸರಳ ಬೋಧನೆಗೆ  ಮಂಗಳೂರಿನ ಶ್ಲಾಘ್ಯ ತರಬೇತಿ ಸಂಸ್ಥೆ ಸಂಪರ್ಕಿಸಿ

December 19, 2020, 9:40 AM

ಮಂಗಳೂರು(reporterkarnataka news): 
ಕಠಿಣ ವಿಷಯಗಳ ಸರಳ ಬೋಧನೆ ಸಾಧ್ಯವೇ..? ಇದು ಸಾಧ್ಯ ಎಂಬುದನ್ನು ಮಂಗಳೂರಿನ ಬೊಂದೇಲ್ ನಲ್ಲಿರುವ ಶ್ಲಾಘ್ಯ ತರಬೇತಿ ಸಂಸ್ಥೆ ಸಾಧಿಸಿ ತೋರಿಸಿಕೊಟ್ಟಿದೆ. ಎಂತಹ ಕಠಿಣ ವಿಷಯವನ್ನೂ ಶ್ಲಾಘ್ಯ ಸಂಸ್ಥೆಯಲ್ಲಿರುವ ಉಪನ್ಯಾಸಕರು ಸರಳ ಬೋಧನೆ ಮೂಲಕ ವಿದ್ಯಾರ್ಥಿಗಳ ಮನಮುಟ್ಟುವಂತೆ, ಹೃದಯ ತಟ್ಟುವಂತೆ ಮಾಡುವ ಪ್ರೌಢಿಮೆಯನ್ನು ಹೊಂದಿದ್ದಾರೆ. 

ಈ ಎಲ್ಲ ಕಾರಣಗಳಿಂದ ಸಂಸ್ಥೆಯು ಕಿರು ಅವಧಿಯಲ್ಲಿ ಅಪಾರ ಮನ್ನಣೆಯನ್ನು ಪಡೆದಿದೆ. ವಿದ್ಯಾರ್ಥಿಗಳು ಆನ್ ಲೈನ್ ತರಗತಿ ಮೂಲಕ ದೇಶದ ಯಾವುದೇ ಮೂಲೆಯಿಂದ ತರಬೇತಿ ಪಡೆಯಬಹುದಾಗಿದೆ.

ಇಂದಿನ ತಂತ್ರಜ್ಞಾನದ ಯುಗದಲ್ಲಿ ಮನೆಯಲ್ಲಿಯೆ ತರಬೇತಿಯನ್ನು ಪಡೆಯಬಹುದಾದ ಅನುಕೂಲ ಇರುವುದನ್ನು ಮನಗಂಡ ಸಂಸ್ಥೆಯು ಹಲವು ಆನ್ ಲೈನ್ ತರಬೇತಿ ತರಗತಿಗಳನ್ನು ಗುಣಮಟ್ಟದ ಉಪನ್ಯಾಸಕರ ಮೂಲಕ ನಡೆಸುತ್ತಿದೆ. ಪಿಯುಸಿ, ಪದವಿ ಜತೆಗೆ ಪಿಜಿ ವಿದ್ಯಾರ್ಥಿಗಳಿಗೂ ತರಬೇತಿ ನೀಡುತ್ತಿದೆ.

ಹೆಚ್ಚಿನ ಯುವ ಜನಾಂಗಕ್ಕೆ ಕಬ್ಬಿಣದ ಕಡಲೆ ಎಂದೆನಿಸಿರುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸುಲಭದಲ್ಲಿ ಪಾಸ್ ಮಾಡುವ ಕುರಿತು ಶ್ಲಾಘ್ಯದಲ್ಲಿ ತರಬೇತಿ ನೀಡಲಾಗುತ್ತದೆ. ಸಂಸ್ಥೆಯು ಈ ನಿಟ್ಟಿನಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ವಿಶಿಷ್ಟವಾದ ಅವಕಾಶವನ್ನೇ ಕಲ್ಪಿಸಿದೆ.

ಯುವಜನತೆಯನ್ನು ಸ್ಪರ್ಧಾತ್ಮಕ ಪರೀಕ್ಷೆಗಳಾದ ಬ್ಯಾಂಕ್, ಎಂಬಿಎ ಪ್ರವೇಶ, ಕ್ಯಾಂಪಸ್ ಆಯ್ಕೆ, ಯುಪಿಎಸ್ಸಿ ಮತ್ತು ಕೆಪಿಎಸ್ ಸಿ ಬರೆಯುವಂತೆ ಪ್ರೋತ್ಸಾಹ ನೀಡುತ್ತಿದೆ ಮಾತ್ರವಲ್ಲದೆ ಸಾಮಾನ್ಯ ವರ್ಗದ ಜನರಿಗೂ ಅನುಕೂಲವಾಗುವ ಶುಲ್ಕದಲ್ಲಿ ತರಬೇತಿಯನ್ನು ನೀಡಿ ವಿದ್ಯಾರ್ಥಿಗಳ ಕನಸು ನನಸಾಗಿಸುವತ್ತ ವಿದ್ಯಾರ್ಥಿಗಳ ಜತೆ ಜತೆಯಾಗಿ ಹೆಜ್ಜೆ ಹಾಕುತ್ತಿದೆ.

ಇತ್ತೀಚಿನ ಸುದ್ದಿ

ಜಾಹೀರಾತು